ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ, ಪ್ರಸಾದವಾಗಿ, ಕೊಬ್ಬರಿ-ಸಕ್ಕರೆ, ಪಂಚಕಜ್ಜಾಯ, ಪೊಂಗಲ್, ಪುಳಿಯೋಗರೆ, ಅಥವಾ ಪಾಯಸ, ಲಡ್ಡು ಪ್ರಸಾದವನ್ನ ಕೊಡ್ತಾರೆ. ಆದ್ರೆ ಕೊಲ್ಕತ್ತಾದಲ್ಲಿರುವ ದೇವಸ್ಥಾನೊಂದರಲ್ಲಿ ನೂಡಲ್ಸ್ನ್ನು ಪ್ರಸಾದವಾಗಿ ಕೊಡ್ತಾರೆ. ಯಾಕೆ ಈ ಪ್ರಸಾದವನ್ನು ಕೊಡಲಾಗುತ್ತದೆ..? ಇಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ..? ಇಲ್ಲಿನ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನಾವು ಹೇಳ ಹೊರಟಿರುವ ದೇವಸ್ಥಾನದ ಹೆಸರು ಚೈನೀಸ್ ಕಾಳಿ ದೇವಸ್ಥಾನ. ಇದು ಕೊಲ್ಕತ್ತಾದ, ಚೈನಾಟೌನ್ನಲ್ಲಿ ಇದೆ. ಈ ದೇವಸ್ಥಾನ ಹೇಗೆ ಸ್ಥಾಪನೆಯಾದ ಬಗ್ಗೆ ಹೇಳ್ತೇವೆ ಕೇಳಿ. ಚೈನಾಟೌನ್ನಲ್ಲಿ ವಾಸಿಸುತ್ತಿದ್ದ, ಚೀನಿ ವ್ಯಕ್ತಿಗೆ ಕನಸ್ಸೊಂದು ಬಿದ್ದಿದ್ದು, ಆ ಕನಸ್ಸಿನಲ್ಲಿ ಬಂದ ಕಾಳಿ ದೇವಿ ನನಗೊಂದು ದೇವಸ್ಥಾನವನ್ನು ಕಟ್ಟಿಸು. ಈ ಕೆಲಸಕ್ಕೆ ನೀನು ಬೇರೆಯವರ ಸಹಾಯ ತೆಗೆದುಕೊಳ್ಳಬಹುದು ಎಂದಳಂತೆ.
ಮರುದಿನ ಆ ವ್ಯಕ್ತಿ ಈ ವಿಷಯವನ್ನ ಅಕ್ಕಪಕ್ಕದ ಮನೆಯವರಿಗೆ, ಊರಿನ ಜನರಿಗೆಲ್ಲ ಹೇಳಿದ. ಎಲ್ಲರೂ ಸೇರಿ ದುಡ್ಡು ಒಟ್ಟುಗೂಡಿಸಿ, ಕಾಳಿ ದೇವಿಗೊಂದು ಚಿಕ್ಕ ದೇವಸ್ಥಾನ ನಿರ್ಮಿಸಿದರು. ಆ ದೇವಸ್ಥಾನಕ್ಕೆ ಚೈನೀಸ್ ಮಹಾಕಾಳಿ ದೇವಸ್ಥಾನ ಅಂತಾ ಹೆಸರಿಟ್ಟರು. ಇದೀಗ ಇಲ್ಲಿ ಪ್ರತಿದಿನ ದೇವಸ್ಥಾನದ ಕೆಲಸಗಳನ್ನ ನೋಡಿಕೊಳ್ಳುತ್ತಿರುವುದು ಚೀನಿ ಹಿಂದೂಗಳು.
ಇಲ್ಲಿ ದುರ್ಗಾದೇವಿಯ ಜೊತೆಗೆ, ಶಿವನನ್ನು ಕೂಡ ಪೂಜಿಸಲಾಗುತ್ತದೆ. ಈ ದೇವಸ್ಥಾನ ಬಂದರೆ, ಗೋಮಾಂಸವನ್ನು ತಿನ್ನುವುದು ತ್ಯಜಿಸಬೇಕು ಅಂತಾ ಹೇಳಲಾಗುತ್ತದೆ. ಅಮೇರಿಕದ ನಿವಾಸಿಯಾದ ಜಾನ್ ಇಲ್ಲಿ ಪುರೋಹಿತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬುದ್ಧನ ಅನುಯಾಯಿಯಾಗಿದ್ದ ಜಾನ್, ನಾನು ಈಗ ದುರ್ಗಾದೇವಿ ಭಕ್ತ, ಚೈನೀಸ್ ಹಿಂದೂವಾಗಿದ್ದೇನೆ ಎನ್ನುತ್ತಾರೆ. ಇದು ಚೈನೀಸ್ ಟೆಂಪಲ್ ಆಗಿರುವುದರಿಂದ ಇಲ್ಲಿ ನೂಡಲ್ಸ್ ಪ್ರಸಾದದ ರೂಪದಲ್ಲಿ ಅರ್ಪಿಸಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




