ಇಂದಿನ ಕಾಲದಲ್ಲಿ ಮಕ್ಕಳು ಶಿಕ್ಷಣದಲ್ಲಿ ಉತ್ತಮರಿಲ್ಲದಿದ್ದರೂ, ಕಂಪ್ಯೂಟರ್ ಆಪರೇಟ್ ಮಾಡೋದ್ರಲ್ಲಿ ಉತ್ತಮರಿರಬೇಕು ಅನ್ನೋದು ಕೆಲ ಪೋಷಕರ ಅಭಿಪ್ರಾಯ. ಅದಕ್ಕಾಗಿ ತಮ್ಮ ಮಕ್ಕಳನ್ನ ಕಪ್ಯೂಟರ್ ಕ್ಲಾಸ್‌ಗೆ ಸೇರಿಸುತ್ತಾರೆ. ನಿಮಗೆ ಕಂಪ್ಯೂಟರ್ ಬಗ್ಗೆ ಉತ್ತಮ ನಾಲೆಜ್ ಇದ್ದರೆ, ನೀವೂ ಕೂಡ ಕಂಪ್ಯೂಟರ್ ಕ್ಲಾಸ್ ಸ್ಟಾರ್ಟ್ ಮಾಡಬಹುದು. ಹಾಗಾದ್ರೆ ಕಂಪ್ಯೂಟರ್ ಕ್ಲಾಸ್ ಶುರು ಮಾಡೋಕ್ಕೆ ಕೆಲ ಐಡಿಯಾಗಳನ್ನ ನಾವು ನಿಮಗೆ ನೀಡಲಿದ್ದೇವೆ.
ಕಂಪ್ಯೂಟರ್ ಕ್ಲಾಸ್ ಶುರು ಮಾಡುವುದಿದ್ದರೆ, ನೀವು ಒಂದು ಚಿಕ್ಕ ಆಫೀಸನ್ನ ಬಾಡಿಗೆಗೆ ಪಡಿಯಬೇಕು. ಇದರೊಂದಿಗೆ 6ರಿಂದ 8 ಕಂಪ್ಯೂಟರ್‌ಗಳನ್ನ ಖರೀದಿಸಬೇಕು. ಇದರೊಂದಿಗೆ ಕೆಲ ಫರ್ನಿಚರ್ ಕೂಡ ಖರೀದಿಸಬೇಕಾಗುತ್ತದೆ. ಇಷ್ಟೇ ಅಲ್ಲದೇ ಕಂಪ್ಯೂಟರ್ ನಾಲೆಜ್ ಇರುವ 2ರಿಂದ 3 ಶಿಕ್ಷಕರನ್ನ ನೇಮಿಸಬೇಕಾಗುತ್ತದೆ. ಹಾಗಾಗಿ ಶಿಕ್ಷಕರ ಸಂಬಳ, ಕಂಪ್ಯೂಟರ್, ಫರ್ನಿಚರ್ ಖರ್ಚು, ಬಾಡಿಗೆ, ಡೆಪಾಸಿಟ್ ಎಲ್ಲ ಸೇರಿ, ಎರಡರಿಂದ ಮೂರು ಲಕ್ಷ ಬಂಡವಾಳ ಹೂಡಬೇಕಾಗುತ್ತದೆ.
ಇನ್ನು ವಿದ್ಯಾರ್ಥಿಗಳು ಕಂಪ್ಯೂಟರ್ ಕ್ಲಾಸಿಗೆ ಬರುವಾಗ ಅವರಿಗೆ ಯಾವುದೇ ತೊಂದರೆಯಾಗದಂಥ ಜಾಗದಲ್ಲಿ ಕಂಪ್ಯೂಟರ್ ಕ್ಲಾಸ್ ಇರಿಸಿದರೆ ಉತ್ತಮ. ಶಾಲೆ ಕಾಲೇಜಿನ ಬಳಿ ಕಂಪ್ಯೂಟರ್ ಕ್ಲಾಸ್ ಇದ್ದರೆ ಇನ್ನೂ ಉತ್ತಮ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ