ಮನೆಯಲ್ಲಿ ಶಾಂತಿ- ನೆಮ್ಮದಿ ನೆಲೆಸಬೇಕು. ನಕಾರಾತ್ಮಕ ಶಕ್ತಿಗಳು ತೊಲಗಿ, ಸಕಾರಾತ್ಮ ಶಕ್ತಿಗಳ ಪ್ರಭಾವ ಹೆಚ್ಚಬೇಕು ಅಂದ್ರೆ ಏನು ಮಾಡಬೇಕು..? ತಾಮ್ರದ ಕಲಶದಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತಾಮ್ರದ ತಂಬಿಗೆಯಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಇಂದು ನಾವು ಅದೇ ತಾಮ್ರದ ತಂಬಿಗೆಯಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಒಂದು ತಾಮ್ರದ ತಂಬಿಗೆಯನ್ನ ಚೆನ್ನಾಗಿ ತೊಳೆದು, ಅದರಲ್ಲಿ ನೀರನ್ನ ಹಾಕಿ, ಅದರಲ್ಲಿ ಅರಿಷಿನ, ಕುಂಕುಮ, ಹೂವು, ಒಂದು ರೂಪಾಯಿ ನಾಣ್ಯ, ಒಂದು ಪಚ್ಚಕರ್ಪೂರ ಹಾಕಿ ಹಾಕಿ ಕಲಶ ತಯಾರಿಸಿಕೊಳ್ಳಬೇಕು. ಇದನ್ನು ಒಂದು ವೀಳ್ಯದೆಲೆ ಮೇಲೆ ಇರಿಸಿ, ದೇವರ ಮುಂದೆ ಇಡಬೇಕು. ಈ ಕೆಲಸವನ್ನ ಶುಕ್ರವಾರ ತಲೆಸ್ನಾನ ಮಾಡಿ, ಮಾಡಿದರೆ ಉತ್ತಮ.
ಇನ್ನು ಈ ಬಿಂದಿಗೆಯನ್ನ ಮಡಿಯಿಂದಲೇ ಇಡಬೇಕು. ಯಾರು ಬೇಕಾದ್ರೂ ಇದನ್ನು ಮುಟ್ಟುವ ಹಾಗಿಲ್ಲ. ನಿಮಗೆ ಎಷ್ಟು ದಿನ ಅಷ್ಟು ದಿನ ಈ ಕೆಲಸ ಮಾಡಿ. ಶುಕ್ರವಾರ ಬೆಳಿಗ್ಗೆ ಕಲಶವಿರಿಸಿದರೆ, ಶನಿವಾರ ಬೆಳಿಗ್ಗೆ ಆ ನೀರನ್ನ, ನದಿಗೋ, ಮರದ ಬುಡಕ್ಕೋ, ತುಳಸಿ ಗಿಡಕ್ಕೋ ಹಾಕಿ. ಮತ್ತೆ ಆ ತಂಬಿಗೆಯನ್ನ ಶುದ್ಧವಾಗಿ ತೊಳೆದು, ಕಲಶ ತಯಾರಿಸಿ.
ಹೀಗೆ ಮಾಡುವುದಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಈ ಕಲಶ ತಯಾರಿಸುವವರು, ಕಲಶ ತಯಾರಿಸುವ ಸಮಯದಲ್ಲಿ ಮಾಂಸಾಹಾರ ಸೇವಿಸಿರಬಾರದು. ಮತ್ತು ಮಾಂಸಾಹಾರ ಸೇವಿಸಿ, ಈ ಕಲಶ ಮುಟ್ಚಬಾರದು. ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಕಲಶ ಮುಟ್ಟಬಾರದು. ಸೂತಕವಿದ್ದ ದಿನಗಳಲ್ಲಿ ಈ ವೃತ ಮಾಡುವುದು ನಿಷಿದ್ಧ.




