ಮಂಗಳೂರೆಂದರೇನೆ ದೇವಸ್ಥಾನಗಳ ಬೀಡು ಎನ್ನಬಹುದು. ಒಂದೊಂದು ತಾಲೂಕಿನಲ್ಲೂ ಸುಪ್ರಸಿದ್ಧ ದೇವಾಲಯಗಳು ಕಾಣಸಿಗುತ್ತದೆ. ಇಂಥ ದೇವಾಲಯಗಳಲ್ಲಿ ವಿಶ್ವವಿಖ್ಯಾತವಾದ ದೇವಸ್ಥಾನವೆಂದ್ರೆ ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ. ಈ ದೇವಾಲಯದ ಬಗ್ಗೆ ಇವತ್ತು ಮಾಹಿತಿಯನ್ನ ತಿಳಿಯೋಣ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಮಂಗಳೂರಿನ ಬೆಳ್ತಂಗಡಿಯ ನೇತ್ರಾವತಿ ನದಿ ತೀರದಲ್ಲಿರುವ ಧರ್ಮಸ್ಥಳ ಇಡೀ ದೇಶಕ್ಕೆ ಪ್ರಸಿದ್ಧವಾಗಿದೆ. ದೇಶ ವಿದೇಶಗಳಿಂದ ಎಲ್ಲ ಧರ್ಮದ ಜನರು ಶ್ರೀ ಮಂಜುನಾಥನ ದರ್ಶನಕ್ಕೆ ಬರುತ್ತಾರೆ. ಸತ್ಯ ಮತ್ತು ನ್ಯಾಯಕ್ಕೆ ಮಂಜುನಾಥ ಸ್ವಾಮಿ ಹೆಸರುವಾಸಿ. ಅದಕ್ಕೆ ಈ ಸ್ಥಳಕ್ಕೆ ಧರ್ಮಸ್ಥಳ ಎಂದು ಕರೆಯಲಾಗುತ್ತದೆ.
800 ವರ್ಷಗಳ ಹಿಂದೆ ಧರ್ಮಸ್ಥಳವನ್ನ ಕುಡುಮಾ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಜೈನ ಧರ್ಮದ ಬೀರ್ಮಣ್ಣ ಪರ್ಗಡೆ ಮತ್ತು ಅವರ ಪತ್ನಿ ಬಲ್ಲಳ್ತಿ ಎಂಬುವವರು ವಾಸಿಸುತ್ತಿದ್ದರು. ಒಮ್ಮೆ ನಾಲ್ವರು ಧರ್ಮದೇವತೆಗಳು ಸಾಧಾರಣ ಮನುಷ್ಯರ ವೇಷ ಧರಿಸಿ, ಭೀರ್ಮಣ್ಣನ ಮನೆಗೆ ಬರುತ್ತಾರೆ. ಭೀರ್ಮಣ್ಣ ದಂಪತಿ ಈ ನಾಲ್ವರಿಗೆ ಅತಿಥಿ ಸತ್ಕಾರ ಮಾಡುತ್ತಾರೆ. ಆ ದಿನ ಭೀರ್ಮಣ್ಣರ ಮನೆಯಲ್ಲೇ ಅತಿಥಿಗಳು ಉಳಿದುಕೊಂಡರು. ಅಂದು ಭೀರ್ಮಣ್ಣರು ಮಲಗಿದ್ದಾಗ, ಅವರ ಕನಸ್ಸಿನಲ್ಲಿ ಬಂದ ಧರ್ಮದೇವತೆಗಳು ನಿಮ್ಮ ಸತ್ಕಾರದಿಂದ ನಾವು ಖುಷಿಯಾಗಿದ್ದೇವೆ. ಹಾಗಾಗಿ ಇದೇ ಮನೆಯಲ್ಲಿ ನೆಲೆಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ.
ಮರುದಿನ ಎದ್ದು ಅತಿಥಿಗಳು ಉಳಿದುಕೊಂಡ ಕೋಣೆ ನೋಡಿದಾಗ, ಅಲ್ಲಿ ಅತಿಥಿಗಳಿರಲಿಲ್ಲ. ಬದಲಾಗಿ ಅವರ ಆಯುಧಗಳಿದ್ದವು. ಆ ಆಯುಧಗಳನ್ನ ಪೂಜಿಸುತ್ತಿದ್ದ ಬಿರ್ಮಣ್ಣ ದಂಪತಿ, ತಾವು ವಾಸಿಸಲು ಬೇರೆ ಮನೆ ಮಾಡಿಕೊಂಡರು. ಅಲ್ಲದೇ, ಆಯುಧವನ್ನ ಪೂಜಿಸಲು ಬ್ರಾಹ್ಮಣರನ್ನು ಕರೆಸಿದರು. ಬ್ರಾಹ್ಮಣರ ಮಾತಿನಂತೆ ಇಲ್ಲಿ ಆಯುಧ ಪೂಜೆಯ ಜೊತೆಗೆ ಲಿಂಗ ಪೂಜೆಯೂ ನಡೆಸಲು ನಿರ್ಧರಿಸಲಾಗುತ್ತದೆ.
ಆಗ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಹೋಗಿ ಅಣ್ಣಪ್ಪ ಸ್ವಾಮಿ ಕಾಶಿಯಿಂದ ತಂದ ಲಿಂಗವನ್ನ ಕುಡುಮಾಗೆ ತಂದು ಪ್ರತಿಷ್ಠಾಪಿಸುತ್ತಾರೆ. ತದನಂತರ ಸುಮಾರು ವರ್ಷಗಳ ಬಳಿಕ, ವಾದಿರಾಜರು ಕುಡುಮಾಗೆ ಬಂದಾಗ, ಲಿಂಗವನ್ನ ಮರುಪ್ರತಿಷ್ಠಾಪಿಸಿ, ಈ ಸ್ಥಳಕ್ಕೆ ಧರ್ಮಸ್ಥಳ ಎಂದು ಮರುನಾಮಕರಣ ಮಾಡುತ್ತಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ ಹೆಗ್ಗಡೆ ಕುಟುಂಬಸ್ಥರು ನೇಮಕಗೊಳ್ಳುತ್ತಾರೆ. ಸದ್ಯ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




