ಇಂಥ ಪಾಪಗಳನ್ನು ಮಾಡಿದ್ರೆ ನರಕಕ್ಕೇ ಹೋಗುತ್ತೀರಿ ಹುಷಾರ್..!

ಗರುಡ ಪುರಾಣದಲ್ಲಿ ಪಾಪಕರ್ಮಗಳ ಬಗ್ಗೆ ಮತ್ತು ಅವುಗಳಿಗೆ ಆಗುವ ಶಿಕ್ಷೆ ಬಗ್ಗೆ ತುಂಬ ಉತ್ತಮವಾಗಿ ವಿವರಿಸಲಾಗಿದೆ. ಅಂಥವುಗಳಲ್ಲಿ ಕೆಲ ತಪ್ಪುಗಳ ಬಗ್ಗೆ ನಾವಿಂದು ವಿವರಿಸಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಗರುಡ ಮತ್ತು ವಿಷ್ಣುವಿನ ಸಂಭಾಷಣೆಯೇ ಗರುಡ ಪುರಾಣ. ಗರುಡ ಪುರಾಣದ ಪ್ರಕಾರ ಕೆಲ ತಪ್ಪುಗಳನ್ನು ಮಾಡುವುದರಿಂದ ನರಕ ದರ್ಶನವಾಗುತ್ತದೆ ಎಂದು ಹೇಳಲಾಗಿದೆ. ಯಾವುದು ಅಂಥಾ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಭ್ರೂಣ ಹತ್ಯೆ ಮಾಡುವುದು, ಬ್ರಾಹ್ಮಣ ಹತ್ಯೆ ಮಾಡುವುದು ಎಲ್ಲಕ್ಕಿಂತ ದೊಡ್ಡ ತಪ್ಪು ಅನ್ನುತ್ತದೆ ಗರುಡ ಪುರಾಣ. ಅಲ್ಲದೇ ಮಹಿಳೆಯರನ್ನು ಕೊಲ್ಲುವುದು, ಗರ್ಭಿಣಿಯರಿಗೆ ಕಷ್ಟ ಕೊಡುವವನು, ಕೊಲ್ಲುವನು, ಮಹಿಳೆಯ ಮಾನಹಾನಿ ಮಾಡುವವನು ಕೂಡ ನರಕ ಕಾಣುತ್ತಾನೆ.

ಒಳ್ಳೆಯ ವ್ಯಕ್ತಿಯನ್ನು ಮೋಸ ಮಾಡುವವನು. ಆಸ್ತಿಕರನ್ನು ಅವಮಾನಿಸುವನು. ಯಾತ್ರಾಸ್ಥಳವನ್ನು ಅಪಹಾಸ್ಯ ಮಾಡುವವನು, ಯಾತ್ರಾಸ್ಥಳಗಳಿಗೆ ಅವಮಾನಿಸುವನು, ದುರ್ಬಲರಿಗೆ ಶಿಕ್ಷೆ ಕೊಡುವನು, ಹಿಂಸಿಸುವನು ಕೂಡ ನರಕಕ್ಕೆ ಹೋಗುತ್ತಾನೆ.

ಇಷ್ಟೇ ಅಲ್ಲದೇ, ತನ್ನ ಬಳಿ ದಾನ ಮಾಡಲು ಸಾಕಷ್ಟು ಹಣವಿದ್ದರೂ ಕೂಡ, ಅನ್ನಾಹಾರ ಅಗತ್ಯವಿರುವವರಿಗೆ ಅನ್ನ ನೀಡದಿರುವುದು ಕೂಡ ಪಾಪವೇ. ಅಲ್ಲದೇ ಅತಿಥಿಯನ್ನು ಮನೆಗೆ ಕರೆದು ಊಟ ತಿಂಡಿ ನೀಡದೇ, ಅವಮಾನಿಸಿ ಕಳುಹಿಸುವವನು ಕೂಡ ನರಕ ಕಾಣುತ್ತಾನೆ ಎಂದಿದೆ ಗರುಡ ಪುರಾಣ.

ನಿಯತ್ತಾಗಿ ದುಡಿಯುತ್ತಿದ್ದವನ ಕೆಲಸವನ್ನು ಕಸಿದು, ತನಗೆ ಬೇಕಾದವರಿಗೆ ಕೆಲಸ ಕೊಡುವವನು ಕೂಡ ಪಾಪಿಗೆ ಸಮ. ಯಾಕೆಂದರೆ, ಓರ್ವನ ಊಟ ಕಸಿದ ಪಾಪ ಅವನಿಗೆ ತಗಲುತ್ತದೆ. ಇಷ್ಟೇ ಅಲ್ಲದೇ, ವಿವಾಹಿತರಾದವರು ತಮ್ಮ ಸಂಗಾತಿಯನ್ನು ಬಿಟ್ಟು ಬೇರೆ ಪುರುಷ ಅಥವಾ ಸ್ತ್ರೀ ಸಹವಾಸ ಮಾಡಿ, ತಮ್ಮ ಬಾಳ ಸಂಗಾತಿಗೆ ಮೋಸ ಮಾಡಿದರೆ ಅಂಥವರು ಕೂಡ ನರಕ ಕಾಣುತ್ತಾರೆ.

ಕಾಡು ನಾಶ ಮಾಡುವವನು, ಪ್ರಾಣಿ ಪಕ್ಷಿಗಳನ್ನು ಹಿಂಸಿಸುವನು, ಮದ್ಯಪಾನ ಮಾಡುವವನು, ಅಮಾಯಕರಿಗೆ ಮೋಸ ಮಾಡುವವನು, ತನ್ನ ದುರಾಸೆಗಾಗಿ ಸ್ತ್ರೀಯರಿಗೆ ಸಹಾಯ ಮಾಡುವವನು ಕೂಡ ನರಕ ಕಾಣುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author