ಗಾಯತ್ರಿ ಮಂತ್ರದ ಅರ್ಥ ಮತ್ತು ಮಹತ್ವ..

ಮಂತ್ರಗಳಲ್ಲೇ ಉತ್ತಮ ಮಂತ್ರ ಅಂದ್ರೆ ಗಾಯತ್ರಿ ಮಂತ್ರ. ಓಂ ಭೂರ್ಭುವಃ ಸ್ವಃ, ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ಎಂಬ ಮಂತ್ರ ಪಠಣೆಯಿಂದ ದುಷ್ಟ ಶಕ್ತಿಗಳನ್ನ ದೂರ ಮಾಡಬಹುದು. ನಾವಿಂದು ಗಾಯತ್ರಿ ಮಂತ್ರದ ಮಹತ್ವ ತಿಳಿಯೋಣ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಗಾಯತ್ರಿ ಮಂತ್ರದ ಪ್ರಧಾನ ದೇವತೆ ಗಾಯತ್ರಿ ದೇವಿ, ಶ್ರೀಮನ್ನಾರಾಯಣ. ಉಪನಯನದ ಸಂದರ್ಭದಲ್ಲಿ ಗಾಯತ್ರಿ ಮಂತ್ರವನ್ನ ಉಪದೇಶಿಸಲಾಗುತ್ತದೆ. ಆದ್ದರಿಂದ ಉಪನಯವನ್ನ ಬ್ರಹ್ಮೋಪದೇಶ ಎನ್ನಲಾಗುತ್ತದೆ. ಗಾಯತ್ರಿ ಮಂತ್ರದ ಉಪದೇಶ ಪಡೆದ ನಂತರ ಪ್ರತಿದಿನ ಸೂರ್ಯೋದಯ ಮತ್ತ ಸೂರ್ಯಾಸ್ತದ ಬಳಿಕ ಸಂಧ್ಯಾವಂದನೆ ಮಾಡಿ, ಗಾಯತ್ರಿ ಮಂತ್ರವನ್ನ ಪಠಿಸಬೇಕು.

ಇನ್ನು ಈ ಮಂತ್ರದ ಅರ್ಥ ನೋಡೋಣ. ಓಂ ಭೂರ್ಭುವಃ ಸ್ವಃ, ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್.

ಓಂ ಎಂದರೆ ದೇವರು, ಭೂರ್ ಎಂದರೆ ಭೂಮಿ, ಭುವ ಎಂದರೆ ಸಮಸ್ಯೆಗಳನ್ನ ನಾಶ ಮಾಡುವನು, ಸ್ವಹ ಎಂದರೆ ಸಂತೋಷ ಪ್ರಾಪ್ತಿಸುವನು, ತತ್ ಎಂದರೆ ಸರ್ವಾಂತರ್ಯಾಮಿ, ಸವಿತೂರ್ ಎಂದರೆ ಸೂರ್ಯನಂತೆ ಪ್ರಜ್ವಲಿಸುವನು, ವರೇಣ್ಯಂ ಅಂದ್ರೆ ಅತೀ ಶ್ರೇಷ್ಠ, ಭರ್ಗೋ ಎಂದರೆ ಸೂರ್ಯನ ಕಿರಣದಂತಹ ಶುದ್ಧತೆ, ದೇವಸ್ಯ ಎಂದರೆ ದೇವರಿಗೆ ಸೇರಿದವರು, ಧೀಮಹಿ ಎಂದರೆ ಸ್ವ-ಗುಣವಾಗಲು ಯೋಗ್ಯವಾಗಿರುವುದು, ದಿಯೋ ಎಂದರೆ ಬುದ್ಧಿಶಕ್ತಿ, ಯೋ ಎಂದರೆ ಯಾರು, ನಃ ಎಂದರೆ ನಮ್ಮ, ಪ್ರಚೋದಯಾತ್ ಎಂದರೆ ಒಳ್ಳೆಯ ಕಾರ್ಯಗಳಿಗೆ ಪ್ರೇರಣೆ.

ಈ ಮಂತ್ರವನ್ನ ಪ್ರತಿದಿನ ಪಠಿಸುವುದರಿಂದ ಯಾವುದೇ ರೀತಿಯ ಭಯವಿದ್ದರೂ ಹೋಗುತ್ತದೆ. ದುಷ್ಟ ಶಕ್ತಿಯ ಕಾಟವಿರುವುದಿಲ್ಲ. ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಆದರೆ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಈ ಮಂತ್ರವನ್ನ ಪಠಿಸುವತಿಲ್ಲ. ಸ್ನಾನಾದಿಗಳನ್ನ ಮಾಡಿ, ಮಡಿಯಿಂದ ದೇವರ ಮುಂದೆ ಕುಳಿತು ಈ ಮಂತ್ರವನ್ನ ಪಠಿಸಬೇಕು.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

About The Author