ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲದ ಹಿನ್ನೆಲೆ..

ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಹಾಲಕ್ಷ್ಮೀ ದೇವಸ್ಥಾನ ಅಂದ್ರೆ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಈ ದೇವಸ್ಥಾನವಿದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ದೇವಿಯ ವಾರವಾದ ಮಂಗಳವಾರ ಮತ್ತು ಶುಕ್ರವಾರದ ದಿನ ಇಲ್ಲಿ ಅಕ್ಕ ಪಕ್ಕದ ಊರಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಸಾಲಬಾಧೆ, ಹಣಕಾಸಿನ ಸಮಸ್ಯೆ ಇದ್ದಲ್ಲಿ ಭಕ್ತರು ಗೊರವನಹಳ್ಳಿಗೆ ಬಂದು ಮಹಾಲಕ್ಷ್ಮೀಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಹೋಗುತ್ತಾರೆ.

ಇನ್ನು ಮಹಾಲಕ್ಷ್ಮೀ ದೇವಸ್ಥಾನದ ಹಿನ್ನೆಲೆ ನೋಡುವುದಾದರೆ, ಈ ಲಕ್ಷ್ಮೀ ಮೂರ್ತಿ ಸ್ವಯಂಭೂ ಮೂರ್ತಿಯಾಗಿದೆ. ಸುಮಾರು ವರ್ಷಗಳ ಹಿಂದೆ ಅಕ್ಕಮ್ಮ ಎಂಬ ಮಹಿಳೆ ಆಕೆಯ ಮಗ ಅಬ್ಬಯ್ಯ ಈ ಸ್ಥಳದಲ್ಲಿ ವಾಸಿಸುತ್ತಿದ್ದರು. ಅಬ್ಬಯ್ಯ ಪ್ರತಿದಿನ ಕುರಿ ಮೇಯಿಸಿ, ನದಿ ಬಳಿ ಬಂದು ಕೈ ಕಾಲು ತೊಳೆದುಕೊಂಡು ಹೋಗುತ್ತಿದ್ದ. ಹೀಗೆ ಒಮ್ಮ ಕೈ ಕಾಲು ತೊಳೆಯಲು ನದಿಯ ಬಳಿ ಬಂದಾಗ, ನನ್ನನ್ನು ಮನೆಗೆ ಕರೆದೊಯ್ಯಿ ಎಂಬ ಅಶರೀರವಾಣಿ ಕೇಳಿ ಬಂತು. ಈ ವಿಷಯವನ್ನ ಅಬ್ಬಯ್ಯ ತನ್ನ ತಾಯಿಗೆ ತಿಳಿಸಿದಾಗ, ದೇವ್ವವಾದರೆ ಮನೆಗೆ ಬರಬೇಡ, ದೇವರಾದರೆ ಮನೆಗೆ ಬಾ ಎಂದು ಹೇಳುವಂತೆ ತಿಳಿಸುತ್ತಾಳೆ.

ಮರುದಿನ ತಾಯಿಯ ಮಾತಿನಂತೆ ಅಬ್ಬಯ್ಯ ದೇವ್ವವಾದರೆ ಮನೆಗೆ ಬರಬೇಡ, ದೇವರಾದರೆ ಮನೆಗೆ ಬಾ ಎನ್ನುತ್ತಾನೆ. ಆಗ ನದಿಯಿಂದ ಲಕ್ಷ್ಮೀಯ ಕಲ್ಲಿನ ಮೂರ್ತಿ ಉದ್ಭವವಾಗುತ್ತದೆ. ಅದನ್ನ ಮನೆಗೆ ತಂದ ಅಬ್ಬಯ್ಯ ಪ್ರತಿದಿನ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯಿಂದ ಅಬ್ಬಯ್ಯ ಮತ್ತು ಅಕ್ಕಮ್ಮ ಶ್ರೀಮಂತರಾಗುತ್ತಾರೆ.

ಶ್ರೀಮಂತರಾದ ಬಳಿಕ ಗೊರವನಹಳ್ಳಿಯಲ್ಲಿ ದೇವಸ್ಥಾನವನ್ನ ಕಟ್ಟಿ, ಅಲ್ಲಿ ಸ್ವಯಂಭೂ ಲಕ್ಷ್ಮೀ ಪೂಜೆ ಮಾಡಲು ಆರಂಭಿಸಲಾಯಿತು. ಕೆಲ ವರ್ಷಗಳ ಬಳಿಕ, ಈ ದೇವಸ್ಥಾನ ನಿರ್ಲಕ್ಷ್ಯಕ್ಕೊಳಗಾಗಿ, ಪೂಜೆ ನಿಲ್ಲಿಸಲಾಗಿತ್ತು. ಆಗ ಕಮಲಮ್ಮ ಎಂಬುವವರು ತಾವೇ ದೇವಸ್ಥಾನಕ್ಕೆ ಬಂದು ಸ್ವಚ್ಛ ಮಾಡಿ, ಪೂಜೆ ಮಾಡಲು ಆರಂಭಿಸುತ್ತಾರೆ. ಹೀಗೆ ಪೂಜೆ ಮುಂದುವರಿಯುತ್ತದೆ.

ಈಗ ಈ ದೇವಸ್ಥಾನ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿದೆ. ಪ್ರತಿದಿನ ಜನಜಂಗುಳಿಯಿಂದ ತುಂಬಿರುತ್ತದೆ. ದೂರದೂರದ ಊರಿನಿಂದ ಭಕ್ತಾದಿಗಳು ಆಗಮಿಸಿ, ತಾಯಿಯ ಆಶೀರ್ವಾದ ಪಡೆದು, ಉದ್ಧಾರವಾಗಿದ್ದಾರೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

About The Author