ಗುಜರಾತ್‌ನಲ್ಲಿ ಹಲವು ಪುರಾತನ ದೇವಸ್ಥಾನಗಳಿದೆ. ವಾಸ್ತುಶಿಲ್ಪಕ್ಕೆ ಹೆಸರಾದ ಸುಂದರ ದೇವಸ್ಥಾನಗಳಲ್ಲಿ ಇಲ್ಲಿನ ಸೂರ್ಯ ದೇವಸ್ಥಾನ ಕೂಡ ಒಂದು. ಹಾಗಾದ್ರೆ ಬನ್ನಿ ಗುಜರಾತ್‌ನ ಸೂರ್ಯ ದೇವಸ್ಥಾನದ ಬಗ್ಗೆ ತಿಳಿಯೋಣ.



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಗುಜರಾತ್‌ನ ಮೆಹಸಾಣದ ಮೊಧೇರಾದಲ್ಲಿ ಈ ಸೂರ್ಯದೇವಸ್ಥಾನವಿದೆ. ನಮ್ಮ ಪೂರ್ವಜರು ಕಟ್ಟಿದ ದೇವಸ್ಥಾನದಲ್ಲಿ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಅಂಥ ವಿಶೇಷತೆ ಹೊಂದಿರುವ ದೇವಸ್ಥಾನವೆಂದರೆ ಈ ಸೂರ್ಯದೇವಸ್ಥಾನ. ಕ್ರಿ. ಶ 1026ರಲ್ಲಿ ಸೂರ್ಯವಂಶಿ ಸೋಲಂಕಿ ರಾಜನಾಗಿದ್ದ ಮೊದಲನೇ ಭೀಮದೇವನು ಈ ದೇವಸ್ಥಾನವನ್ನು ನಿರ್ಮಿಸಿದನು. ಈ ದೇವಸ್ಥಾನದ ವಿಶೇಷತೆ ಅಂದ್ರೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಈ ದೇವಸ್ಥಾನದ ಮೇಲೆ ಸೂರ್ಯರಶ್ಮಿ ಬೀಳುತ್ತದೆ.
ಈ ದೇವಸ್ಥಾನದಲ್ಲಿ ಕೆಲವು ಚಿಕ್ಕ ಚಿಕ್ಕ ದೇವಸ್ಥಾನಗಳೂ ಇದೆ. ಈ ದೇವಸ್ಥಾನವನ್ನ, ಸೂರ್ಯ ಕುಂಡ, ಸಾಂಬ ಮಂಟಪ ಮತ್ತು ಗೂಡಾ ಮಂಟಪವನ್ನಾಗಿ ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇಲ್ಲಿನ ವಾಸ್ತುಶಿಲ್ಪ ಕಣ್ಮನ ಸೆಳೆಯುವಂತಿದ್ದು, ಖಜುರಾಹೋ ಶೈಲಿಯ ಕೆತ್ತನೆಯಿಂದ ಈ ದೇವಸ್ಥಾನ ನಿರ್ಮಿಸಲಾಗಿದೆ. ಇಲ್ಲಿರುವ ಕಂಬಗಳ ಮೇಲೆ ರಾಮಾಯಣ ಮಹಾಭಾರತದ ಕಥೆಯನ್ನು ಕೆತ್ತಲಾಗಿದೆ.
ವಿಚಿತ್ರ ಮತ್ತು ವಿಪರ್ಯಾಸದ ಸಂಗತಿ ಏನೆಂದರೆ ಈ ದೇವಸ್ಥಾನದಲ್ಲಿ ಸೂರ್ಯನಿಗೆ ಪೂಜೆ ಸಲ್ಲಿಸಲಾಗುವುದಿಲ್ಲ. ಅಲ್ಲಾವುದ್ದಿನ್ ಖಿಲ್ಜಿ ಈ ದೇವಸ್ಥಾನದ ಮೇಲೆ ದಾಳಿ ಮಾಡಿ, ಚಿನ್ನಾಭರಣಗಳನ್ನ ಲೂಟಿ ಮಾಡುವುದಲ್ಲದೇ, ಸೂರ್ಯನ ಮೂರ್ತಿಯನ್ನ ಕೂಡ ಹಾಳು ಗೆಡವಿದ್ದಾನೆ. ಈ ಕಾರಣಕ್ಕೆ ಇಲ್ಲಿ ಯಾವುದೇ ಪೂಜೆ ಸಲ್ಲಿಸಲಾಗುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




