ಸ್ವಂತ ಮನೆ ಕಟ್ಟೋದು ಪ್ರತಿಯೊಬ್ಬರ ಆಸೆ ಆಗಿರತ್ತೆ. ಈ ಆಸೆ ಪೂರೈಸಿಕೊಳ್ಳಲು ಕೆಲವರು ಮನೆ ಏನೋ ಕಟ್ಟಿರ್ತಾರೆ. ಆದ್ರೆ ಹಣವೆಲ್ಲ ಮನೆ ಕಟ್ಟುವಾಗ ಖರ್ಚಾದ ಪರಿಣಾಮ, ಗೃಹಪ್ರವೇಶಕ್ಕೆ ಹಣವಿಲ್ಲದೇ, ಗೃಹಪ್ರವೇಶ ಕಾರ್ಯಕ್ರಮವನ್ನೇ ಮಾಡೋದಿಲ್ಲ. ಮತ್ತೆ ಕೆಲವರು ಬಾಡಿಗೆ ಮನೆಗೆ ಹೋಗುವಾಗ ಹಾಲುಕ್ಕಿಸುವುದಿಲ್ಲ ಮತ್ತು ದೀಪ ಕೂಡ ಹಚ್ಚುವುದಿಲ್ಲ. ಹೀಗೆಲ್ಲ ಮಾಡಿದ್ರ ಅದರ ಪರಿಣಾಮ ಏನಾಗತ್ತೆ ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಮನೆ ಕಟ್ಟಿದ ಮೇಲೆ ಸಿಂಪಲ್ ಆಗಿ ಒಂದು ಪೂಜೆ ಮಾಡಿಯಾದ್ರೂ ಗೃಹಪ್ರವೇಶ ಮಾಡಬೇಕು. ಕೆಲವರಿಗೆ ಮನೆ ಗೃಹಪ್ರವೇಶಕ್ಕೆ ಸಂಬಂಧಿಕರು ನೆರೆ ಹೊರೆಯವರನ್ನೆಲ್ಲ ಕರಿಯಬೇಕು. ಖರ್ಚು ವೆಚ್ಚ ಜಾಸ್ತಿಯಾಗತ್ತೆ ಎಂಬ ಚಿಂತೆ ಇರುತ್ತದೆ. ಅಂಥವರು ಸಿಂಪಲ್ ಆಗಿ ಗೃಹಪ್ರವೇಶ ಮಾಡಬಹುದು.
ಆದ್ರೆ ಗೃಹಪ್ರವೇಶ ಮಾಡದೇ ಮನೆಗೆ ಹೋದರೆ ಅಂಥ ಮನೆಯಲ್ಲಿ ಶಾಂತಿ ನೆಮ್ಮದಿ ಎಂದಿಗೂ ನೆಲೆಸುವುದಿಲ್ಲ. ಅಂಥ ಜನರಿಗೆ ಅನಾರೋಗ್ಯ, ಹಣಕಾಸಿನ ಸಮಸ್ಯೆ ಕಾಡುತ್ತಿರುತ್ತದೆ. ಅಲ್ಲದೇ ಪ್ರತಿನಿತ್ಯ ಮನೆಯಲ್ಲಿ ಕಲಹ ನಡೆಯುತ್ತದೆ. ಆದ್ದರಿಂದ ಹೊಸ ಮನೆಗೆ ಹೋಗುವಾಗ ದೀಪ ಹಚ್ಚಿ ಹಾಲು ಉಕ್ಕಿಸಿ, ಚಿಕ್ಕದಾಗಿ ಗೃಹ ಪ್ರವೇಶವನ್ನಾದ್ರೂ ಮಾಡಬೇಕು.
ಇನ್ನು ಕೆಲವರು ಬಾಡಿಗೆ ಮನೆಗೆ ಹೋಗುವಾಗ, ಮನೆ ಏನು ನಮ್ಮದಲ್ಲವಲ್ಲ ಎಂಬ ಕಾರಣಕ್ಕೆ ಗಂಟು ಮೂಟೆ ಕಟ್ಟಿಕೊಂಡು ಹೋಗಿಬಿಡುತ್ತಾರೆ. ಮನೆ ಪ್ರವೇಶಿಸುವಾಗ ಅನುಸರಿಸಬೇಕಾದ ಪದ್ಧತಿಯನ್ನ ಅನುಸರಿಸುವುದಿಲ್ಲ. ಹಾಗಾಗಿ ಅಂಥವರಿಗೆ ಖರ್ಚುವೆಚ್ಚಗಳು ಜಾಸ್ತಿಯಾಗಿರುತ್ತದೆ. ಸೇವಿಂಗ್ ಮಾಡಲಾಗುವುದಿಲ್ಲ. ಅಂತಹ ಮನೆಯಲ್ಲಿ ಜಗಳ, ಗಲಾಟೆ ನಡೆಯುತ್ತಿರುತ್ತದೆ. ಆದ್ದರಿಂದ ಬಾಡಿಗೆ ಮನೆಯಾದರೂ ಅಲ್ಲಿ ಹೋಗುವ ಮೊದಲು ಮನೆಯನ್ನ ಸ್ವಚ್ಛಗೊಳಿಸಿ, ದೀಪ ಹಚ್ಚಿ ಹಾಲು ಉಕ್ಕಿಸಿ ಮನೆ ಪ್ರವೇಶಿಸಬೇಕು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

