ಇಡಗುಂಜಿ ಮಹಾಗಣಪತಿ ದೇವಸ್ಥಾನ ಸ್ಥಾಪಿಸಿದ್ದು ಯಾರು..? ಏನಿದರ ಹಿನ್ನೆಲೆ..?

ಪ್ರಥಮ ಪೂಜಿತ ಮಹಾಗಣಪತಿಯ ಬಗ್ಗೆ ಹಲವು ಕಥೆ, ಪೂಜಾ ವಿಧಾನ ಇತ್ಯಾದಿ ವಿಷಯಗಳನ್ನ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇವತ್ತು ನಾವು ಇಡಗುಂಜಿ ಮಹಾಗಣಪತಿಯ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಾರದ ಮುನಿಗಳಿಂದ ಸ್ಥಾಪಿತವಾದ ದೇವಸ್ಥಾನಗಳಲ್ಲಿ ಮಹತೋಬಾರ ಇಡಗುಂಜಿ ದೇವಸ್ಥಾನ ಕೂಡ ಒಂದು. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಬಳಿ ಈ ದೇವಸ್ಥಾನವಿದೆ. ದ್ವಿಭುಜ ಗಣಪತಿಯೇ ಇಲ್ಲಿನ ಪ್ರಮುಖ ಆಕರ್ಷಣೆ.

ಇನ್ನು ಇದರ ಹಿನ್ನೆಲೆ ನೋಡುವುದಾದರೆ, ಈ ಸ್ಥಳದಲ್ಲಿ ಮೊದಲು ವಾಲಖಿಲ್ಯ ಋಷಿಗಳು ಆಶ್ರಮ ಕಟ್ಟಿಕೊಂಡು, ಹೋಮ ಹವನಗಳನ್ನ ಮಾಡಿಕೊಂಡಿದ್ದರು. ಆದರೆ ಯಜ್ಞ ಯಾಗಾದಿಗಳನ್ನ ಮಾಡುವಾಗ ವಾಲಖಿಲ್ಯ ಋಷಿಗಳಿಗೆ, ಅಡೆ ತಡೆ ಉಂಟಾಗುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ತ್ರಿಲೋಕ ಸಂಚಾರಿ ನಾರದರು, ವಾಲಖಿಲ್ಯರಿಗೆ ಆಗುತ್ತಿರುವ ತೊಂದರೆಗಳನ್ನ ಗಮನಿಸಿದರು.

ಈ ತೊಂದರೆಯನ್ನ ಸರಿಪಡಿಸಲು ಗಣಪತಿಯನ್ನೇ ಕರೆತರಬೇಕೆಂದು ನಿರ್ಧರಿಸಿದ ನಾರದರು, ಪಂಚಕಜ್ಜಾಯ ಪ್ರಸಾದ ಸಿಗುವುದೆಂದು ಹೇಳಿ ಗಣಪತಿಯನ್ನ ಕರೆತರುತ್ತಾರೆ. ಈ ವೇಳೆ ವಿಶ್ವಕರ್ಮನು ಗಣಪತಿಯ ವಾಸಕ್ಕೆಂದು ದ್ವಿಭುಜ ಗಣಪನ ಮೂರ್ತಿಯನ್ನ ರೂಪಿಸುತ್ತಾರೆ. ನಾರದರೇ ಈ ಮೂರ್ತಿಯನ್ನ ಪ್ರತಿಷ್ಠಾಪಿಸುತ್ತಾರೆ. ವಾಲಖಿಲ್ಯರು ಗಣಪನಿಗೆ ಪ್ರತಿದಿನ ಪಂಚಕಜ್ಜಾಯ ಪ್ರಸಾದ ನೈವೇದ್ಯ ಮಾಡಿ, ಪೂಜೆ ಸಲ್ಲಿಸುತ್ತಾರೆ.

ಈ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದ್ದು, ಪ್ರತಿದಿನ ಪಂಚಕಜ್ಜಾಯವನ್ನ ಇಡಗುಂಜಿ ಮಹಾಗಣಪತಿಗೆ ನೈವೇದ್ಯ ಮಾಡಲಾಗುತ್ತದೆ. ಮತ್ತು ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ. ಯಾವ ದಿನ ಮಹಾಗಣಪತಿಗೆ ಪಂಚಕಜ್ಜಾಯ ನೈವೇದ್ಯ ಮಾಡುವುದಿಲ್ಲವೋ ಆದಿನ ಗಣಪತಿ ಇಡಗುಂಜಿ ಬಿಟ್ಟು ಹೋಗುತ್ತಾನೆಂಬ ಮಾತಿದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author