Thursday, December 12, 2024

Latest Posts

ಕಾಮಾಕ್ಯ ದೇವಸ್ಥಾನದ ವಿಶೇಷತೆಗಳೇನು..? ಇಲ್ಲಿ ಪ್ರಸಾದವಾಗಿ ಏನು ಕೊಡ್ತಾರೆ ಗೊತ್ತಾ..?

- Advertisement -

ಭಾರತದಲ್ಲಿ ಹಲವಾರು ಶಕ್ತಿ ಪೀಠಗಳಿವೆ. ಅಂಥ ಶಕ್ತಿ ಪೀಠಗಳಲ್ಲಿ ಕಾಮಾಕ್ಯ ದೇವಿಯ ಶಕ್ತಿ ಪೀಠ ಕೂಡಾ ಒಂದು. ಸಾಮಾನ್ಯವಾಗಿ ನಾವು ದೇವಿ ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸುತ್ತೇವೆ. ಆದ್ರೆ ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ಯೋನಿಗೆ ಪೂಜೆ ಸಲ್ಲಿಸಲಾಗತ್ತೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..

ಗುವಾಹಟಿಯ ನೀಲಾಂಚಲ ಬೆಟ್ಟದ ಮೇಲೆ ಈ ಕಾಮಾಕ್ಯ ದೇವಿಯ ಮಂದಿರವಿದೆ. ಈ ಸ್ಥಳದಲ್ಲಿ ಸತಿ ದೇವಿಯ ಯೋನಿಯ ಭಾಗ ಬಿದ್ದಿದ್ದಕ್ಕಾಗಿ, ಇಲ್ಲಿ ಯೋನಿಗೆ ಪೂಜೆ ಸಲ್ಲಿಸಲಾಗುತ್ತದೆ. ಪುರಾಣ ಕಥೆಗಳ ಪ್ರಕಾರ ಸತಿ ದೇವಿಯ ದೇಹ 50 ತುಂಡುಗಳಾಗಿ ಛಿದ್ರಗೊಂಡಿತ್ತು. ಹಾಗೆ ಛಿದ್ರಗೊಂಡ ತುಂಡುಗಳು ಬಿದ್ದ ಜಾಗಗಳು ಶಕ್ತಿ ಪೀಠಗಳಾಗಿ ಮಾರ್ಪಟ್ಟಿದೆ. ಆ ಶಕ್ತಿಪೀೀಠಗಳಲ್ಲಿ ಕಾಮಾಕ್ಯ ಕೂಡಾ ಒಂದು.

ಈ ಶಕ್ತಿಪೀಠ ಎಲ್ಲ ಶಕ್ತಿಪೀಠಕ್ಕಿಂತಲೂ ಶಕ್ತಿಯುತವಾಗಿದೆ ಅಂತಾ ಹೇಳಲಾಗುತ್ತದೆ. ಇಲ್ಲಿ ಮಂತ್ರ ತಂತ್ರ ಮಾಡುವವರು ಬಂದು ಕಾಮಾಕ್ಯ ದೇವಿಯನ್ನು ಪೂಜಿಸಿ, ಸಿದ್ಧಿ ಪಡೆಯುತ್ತಾರೆಂದು ಹೇಳಲಾಗುತ್ತದೆ. ಕುಂಭ ಮೇಳದಂತೆ ಇಲ್ಲಿಯೂ ಕೂಡ ಮೇಳ ನಡೆಯುತ್ತದೆ. ಆಗ ನಾಗಾಸಾಧುಗಳು ಸೇರಿ ತಂತ್ರ ಮಂತ್ರ ಮಾಡುವವರು ಈ ದೇವಸ್ಥಾನಕ್ಕೆ ಬಂದು ಮೇಳದಲ್ಲಿ ಭಾಗಿಯಾಗುತ್ತಾರೆ. ಮತ್ತು ಕಾಮಾಕ್ಯ ಮಾತೆಯ ದರ್ಶನ ಮಾಡಿ ಪುನೀತರಾಗುತ್ತಾರೆ.

ಇನ್ನು ಇಲ್ಲಿ ಪಾರ್ವತಿ ದೇವಿ ಪ್ರತೀ ತಿಂಗಳು ಮುಟ್ಟಾಗುತ್ತಾಳೆಂದು ಹೇಳಲಾಗುತ್ತದೆ. ದೇವಿ ಯಾವ ದಿನ ಮುಟ್ಟಾಗುತ್ತಾಳೆಂದು ಸೂಚನೆ ಸಿಗುತ್ತದೆಯೋ ಆ ದಿನ ಅವಳಿಗೆ ಬಿಳಿ ಬಟ್ಟೆ ಸುತ್ತಲಾಗುತ್ತದೆ. ಮೂರು ದಿನಗಳ ಬಳಿಕ ಆ ವಸ್ತ್ರ ಕೆಂಪಗಾಗಿರುತ್ತದೆ. ಆ ವಸ್ತ್ರವನ್ನೇ ಭಕ್ತರಿಗೆ ಪ್ರಸಾದವನ್ನಾಗಿ ನೀಡಲಾಗುತ್ತದೆ.

ನೀವು ಕಾಮಾಕ್ಯ ದೇವಿಯ ದರ್ಶನ ಮಾಡಲು ಹೋದರೆ, ನೀವು ಭೈರವನ ದರ್ಶನವೂ ಮಾಡಿ ಬರಬೇಕಾಗುತ್ತದೆ. ಇಲ್ಲವಾದಲ್ಲಿ ನೀವು ಕಾಮಾಕ್ಯಕ್ಕೆ ಹೋಗಿ ಪ್ರಯೋಜನವಿಲ್ಲ. ನಿಮ್ಮ ಕಾಮಾಕ್ಯ ದೇವಿ ದರ್ಶನ ಅಪೂರ್ಣಗೊಂಡಂತೆ. ಹಾಗಾಗಿ ಕಾಮಾಕ್ಯ ದೇವಿ ಅಂದ್ರೆ ಪಾರ್ವತಿ ದೇವಿಯ ಜೊತೆ ಭೈರವನ ದರ್ಶನವೂ ಮಾಡಬೇಕು.

- Advertisement -

Latest Posts

Don't Miss