ದಕ್ಷಿಣ ಕನ್ನಡದಲ್ಲಿ ಹಲವಾರು ದೇವಸ್ಥಾನಗಳಿದೆ. ಅದರಲ್ಲಿ ಒಂದು ಕಾರಿಂಜ ದೇವಸ್ಥಾನ. ಈ ದೇವಸ್ಥಾನದ ವಿಶೇಷತೆಗಳೇನು..? ಶಿವರಾತ್ರಿ ಸಮಯದಲ್ಲಿ ಇಲ್ಲಿ ನಡೆಯುವ ಜಾತ್ರೆಯ ವೈಶಿಷ್ಠ್ಯತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮಂಗಳೂರಿನ ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದಲ್ಲಿ ಕಾರಿಂಜೇಶ್ವರ ದೇವಾಲಯವಿದೆ. ಈ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಯನ್ನು ಪೂಜಿಸಲಾಗುತ್ತದೆ. ಆದ್ರೆ ಶಿವನಿಗೆ ಮತ್ತು ಪಾರ್ವತಿಗೆ ಬೇರೆ ಬೇರೆ ದೇವಸ್ಥಾನಗಳಿದೆ. ಇಲ್ಲಿ ಶಿವ ಮತ್ತು ಪಾರ್ವತಿ ಭೇಟಿಯಾಗುವುದು, ಶಿವರಾತ್ರಿ ದಿನದಂದು ನಡೆಯುವ ಜಾತ್ರೆಯ ಸಮಯದಲ್ಲಿ.
ನಾಲ್ಕು ದಿನಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ದೇವರನ್ನು ಹೊರುವವರು ಶಿವ ಮತ್ತು ಪಾರ್ವತಿಯನ್ನು ಹೊತ್ತು ತಂದು ಒಂದೆಡೆ ಇರಿಸುತ್ತಾರೆ. ಇಲ್ಲಿ ಶಿವನ ದರ್ಶನವಾಗಬೇಕಂದ್ರೆ 500 ಮೆಟ್ಟಿಲುಗಳನ್ನು ದಾಟಬೇಕು. ಅದಕ್ಕೂ ಮುನ್ನ ಪಾರ್ವತಿಯ ದೇವಸ್ಥಾನವಿದೆ. ಯಾಕೆ ಈ ಬೆಟ್ಟದ ಕೆಳಗೆ ಪಾರ್ವತಿ ದೇವಸ್ಥಾನ ಮತ್ತು ಮೇಲೆ ಶಿವನ ದೇವಸ್ಥಾನವಿದೆ ಎನ್ನುವುದಕ್ಕೆ ಒಂದು ಕಥೆ ಇದೆ.
ಈ ಬೆಟ್ಟದಲ್ಲಿ ಶಿವ ಪಾರ್ವತಿಯನ್ನು ಕಾಣಲು ಮೇಲಿನಿಂದ ಕೆಳಗೆ ಓಡಿ ಬರುತ್ತಾನೆ. ಆದ್ರೆ ಪಾರ್ವತಿ ಋತುಮತಿಯಾಗಿದ್ದ ಕಾರಣ, ಆಕೆಯ ಸಂಗ ಮಾಡಲಾಗದೆ, ಮತ್ತೆ ಬೆಟ್ಟವೇರಿ ಹೋಗುತ್ತಾನೆ. ಇನ್ನು ಜಾತ್ರಾ ಸಮಯದಲ್ಲಿ ಅರ್ಚಕರು ಶಿವನ ಮೂರ್ತಿ ಹಿಡಿದು ಬೆಟ್ಟದ ಕೆಳಗೆ ಓಡಿಬಂದು, ಪಾರ್ವತಿಯನ್ನು ಕಾಣಿಸಿ, ಮತ್ತೆ ಅದೇ ವೇಗದಲ್ಲಿ ಬೆಟ್ಟ ಹತ್ತಿ ಓಡುತ್ತಾರೆ. ಸಾಮಾನ್ಯ ಮನುಷ್ಯ ಈ ಬೆಟ್ಟವನ್ನು ನಡೆಯುತ್ತಲೇ ಹತ್ತುವುದು ಕಷ್ಟ. ಆದ್ರೆ ಅರ್ಚಕರು ಈ ಸಮಯದಲ್ಲಿ ದೇವರನ್ನು ಹಿಡಿದು ಬೆಟ್ಟ ಹತ್ತುವುದು ಪವಾಡವೇ ಸರಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




