ಸಕಲ ವಿದ್ಯಾ ಪಾರಂಗತನಾಗಿದ್ದ ದುರ್ಯೋಧನ ಎಷ್ಟೇ ಬಲಶಾಲಿಯಾಗಿದ್ದರೂ, ಅವನಿಗೆ ಪಾಂಡವರ ಬಗ್ಗೆ ಕೊಂಚ ಭಯವಿತ್ತು. ಅರ್ಜುನ, ಭೀಮನ ಬಗ್ಗೆ ಕೊಂಚ ಹೆಚ್ಚೇ ಭಯವಿತ್ತು. ಆದ್ರೆ ದುರ್ಯೋಧನನಿಗೆ ಯುದ್ಧ ಮಾಡಲು, ಪಾಂಡವರ ವಿರುದ್ಧ ತಂತ್ರ ಮಾಡಲು ಧೈರ್ಯ ಬಂದಿದ್ದೇ, ಗೆಳೆಯ ಕರ್ಣನಿಂದ. ಹಾಗಾದ್ರೆ ಕರ್ಣ ದುರ್ಯೋಧನನ ನೆಚ್ಚಿನ ಗೆಳೆಯನಾದದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ದುರ್ಯೋಧನನಿಗೆ ಕರ್ಣ ಎಷ್ಟು ಅಚ್ಚುಮೆಚ್ಚಿನ ಗೆಳೆಯನಾಗಿದ್ದನೆಂದರೆ, ಒಮ್ಮೆ ದುರ್ಯೋಧನನ ಪತ್ನಿ ಮತ್ತು ಕರ್ಣನ ಮಧ್ಯೆ ಮಾತಿನ ಚಕಮಕಿ ಉಂಟಾದಾಗ, ದುರ್ಯೋಧನ ಕರ್ಣನ ಪರ ವಹಿಸಿಯೇ ಮಾತನಾಡಿದ್ದ. ಕರ್ಣನನ್ನು ಅಂಗದ ರಾಜನನ್ನಾಗಿ ಮಾಡಿದ್ದ. ಸಹೋದರನಂತೆಯೇ ಕರ್ಣನನ್ನು ನೋಡಿಕೊಳ್ಳುತ್ತಿದ್ದ. ಅಷ್ಟು ಪ್ರೀತಿ ಕರ್ಣನ ಮೇಲೆ ದುರ್ಯೋಧನನಿಗಿತ್ತು.
ಇನ್ನು ಈ ಗೆಳೆತನ ಹೇಗೆ ಶುರುವಾಯಿತು ಅಂತಾ ನೋಡುವುದಾದರೆ, ಕೌರವರು ಮತ್ತು ಪಾಂಡವರು ದ್ರೋಣರ ಬಳಿ ಶಸ್ತ್ರವಿದ್ಯೆ ಕಲಿತು ಅರಮನೆಗೆ ಹಿಂದಿರುಗಿದಾಗ, ಅರಮನೆಯಲ್ಲಿ ಕೌರವರ, ಪಾಂಡವರ ಮತ್ತು ರಾಜ್ಯದಲ್ಲಿರುವ ಶಸ್ತ್ರವಿದ್ಯೆಯಲ್ಲಿ ಪರಿಣಿತಿ ಹೊಂದಿರುವವರ ಮಧ್ಯೆ ಪೈಪೋಟಿ ಏರ್ಪಡಿಸಲಾಯಿತು.
ಪಾಂಡವರ ಮತ್ತು ಕೌರವರ ಮಧ್ಯೆ ಪೈಪೋಟಿಗಳು ನಡೆದವು. ತದನಂತರ ಕರ್ಣ ಅರ್ಜುನ ಜೊತೆ ಪೈಪೋಟಿ ಮಾಡಲು ಬಂದ. ತಾನು ಧನುರ್ವಿದ್ಯೆಯಲ್ಲಿ ಅರ್ಜುನನಿಗಿಂತ ಜಾಣ ಎಂದು ಕರ್ಣ ಹೇಳಿಕೊಳ್ಳುತ್ತಾನೆ. ಕರ್ಣನ ಧೈರ್ಯ, ಧನುರ್ವಿದ್ಯೆಯಲ್ಲಿ ಕರ್ಣ ಪ್ರವೀಣನಾಗಿರುವ ಬಗ್ಗೆ ಕಂಡ ದುರ್ಯೋಧನನಿಗೆ ಸಂತಸವಾಗುತ್ತದೆ. ಆತ ಕರ್ಣನನ್ನು ಪ್ರೀತಿಯಿಂದ ಆಲಂಗಿಸಿ, ನಿನ್ನ ಬಗ್ಗೆ ಸಂತೋಷವಾಯಿತು ಎನ್ನುತ್ತಾನೆ. ಆಗ ಕರ್ಣ, ದುರ್ಯೋಧನ ನಿನ್ನ ಸ್ನೇಹವೊಂದಿದ್ದರೆ ಸಾಕು, ನಾನು ಅರ್ಜುನ ಜೊತೆ ಯುದ್ದ ಮಾಡಬಲ್ಲೆ. ನಿನ್ನ ಪರ ಹೋರಾಡಬಲ್ಲೆ ಎನ್ನುತ್ತಾನೆ.
ಈ ಬಗ್ಗೆ ಅರ್ಜುನ ಮತ್ತು ಕರ್ಣನ ಮಧ್ಯೆ ಮಾತಿನ ಚಕಮಕಿ ನಡೆಯುತ್ತದೆ. ಕರ್ಣನ ಕುಲ ಗೋತ್ರ ವಂಶದ ಬಗ್ಗೆ ಪ್ರಸ್ತಾಪವಾಗುತ್ತದೆ. ಆಗ ದುರ್ಯೋಧನ ಕರ್ಣನಿಗೆ ಅಂಗರಾಜ್ಯವನ್ನು ಬಿಟ್ಟುಕೊಟ್ಟು, ಇಂದಿನಿಂದ ದುರ್ಯೋಧನ ನನ್ನ ಸ್ನೇಹಿತ, ಅಂಗರಾಜ್ಯದ ರಾಜ ಎಂದು ಘೋಷಿಸುತ್ತಾನೆ. ಇದಕ್ಕೆ ಸಂತಸಗೊಂಡ ಕರ್ಣ, ದುರ್ಯೋಧನ ನಿನಗಾಗಿ ನಾನು ಏನು ಮಾಡಲಿ ಎಂದು ಕೇಳುತ್ತಾನೆ. ಆಗ ದುರ್ಯೋಧನ, ಕರ್ಣ ನೀನು ನನ್ನ ಉತ್ತಮ ಗೆಳೆಯನಾಗಿರು ಸಾಕು ಎನ್ನುತ್ತಾನೆ. ಹೀಗೆ ಕರ್ಣ-ದುರ್ಯೋಧನನ ಸ್ನೇಹ ಸಂಬಂಧ ಶುರುವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ