Wednesday, December 11, 2024

Latest Posts

ನೇಪಾಳದಲ್ಲಿಯೂ ಇದೆ ಶ್ರೀಕೃಷ್ಣ ದೇವಸ್ಥಾನ..

- Advertisement -

ನೇಪಾಳದ ಕಠ್ಮಂಡುವನಲ್ಲಿರುವ ಕೆಲ ದೇವಸ್ಥಾನಗದಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ವಿಷ್ಣು ದೇವಸ್ಥಾನ, ಶಿವನ ದೇವಸ್ಥಾನ, ಸೀತೆಯ ದೇವಸ್ಥಾನ ಹೀಗೆ ಕೆಲ ದೇವಸ್ಥಾನಗಳ ಬಗ್ಗೆ ತಿಳಿಸಿದ್ದೇವೆ. ಇಂದು ನಾವು ನಿಮಗೆ ಕಠ್ಮಂಡುವಿನಲ್ಲಿರುವ ಕೃಷ್ಣನ ದೇವಸ್ಥಾನದ ವಿಶೇಷತೆಗಳನ್ನು ತಿಳಿಸಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಕಠ್ಮಂಡು ಕಣಿವೆಯ ಪಟಾನ್ ದರ್ಬಾರ್ ಸ್ಕೈರ್ ಕೃಷ್ಣ ಮಂದಿರವಿದೆ. ಈ ಕೃಷ್ಣ ದೇವಾಲಯ ಸುಮಾರು ಕ್ರಿ.ಶ 1637ರಲ್ಲಿ, ರಾಜಾ ಸಿದ್ಧಿ ನರಸಿಂಹ ಮಲ್ಲನಿಂದ ನಿರ್ಮಿಸಲ್ಪಟ್ಟಿತು. ರಾಜ ಈ ದೇವಾಲಯ ಕಟ್ಟಲು ಕಾರಣವೇನೆಂದರೆ, ಒಮ್ಮೆ ರಾಜನ ಕನಸಿನಲ್ಲಿ ರಾಧೆ ಕೃಷ್ಣ ತಮ್ಮ ಅರಮನೆಯ ಬಾಗಿಲ ಬಳಿ ಬಂದು ನಿಂತಿದ್ದರಂತೆ. ಈ ಕಾರಣಕ್ಕೆ ರಾಜ ಕೃಷ್ಣ ದೇವಸ್ಥಾನ ನಿರ್ಮಿಸಿದಮನೆಂದು ಹೇಳಲಾಗುತ್ತದೆ.

ಇದಲ್ಲದೇ, ಈ ಬಗ್ಗೆ ಇನ್ನೊಂದು ಕಥೆಯಿದೆ. ಒಮ್ಮೆ ರಾಜ ಸಿದ್ಧಿ ನರಸಿಂಹ ಮಲ್ಲ ಯುದ್ಧಕ್ಕೆ ಹೋದಾಗ, ಎಲ್ಲ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದ. ಆಗ ಕಾಪಾಡಿ ಎಂದು ಕೃಷ್ಣ ರಾಧೆಯನ್ನು ಸ್ಮರಿಸಿದ್ದ. ಆ ಕ್ಷಣದಿಂದ ರಾಜ ಎದುರಾಳಿಗಳನ್ನು ಸಂಹರಿಸುವ ಶಕ್ತಿ ಹೊಂದಿ, ಯುದ್ಧದಲ್ಲಿ ವಿಜಯ ಸಾಧಿಸಿದ. ಈ ಕಾರಣಕ್ಕೆ ಈ ದೇವಸ್ಥಾನ ನಿರ್ಮಿಸಿದನೆಂದೂ ಕೂಡ ಹೇಳಲಾಗುತ್ತದೆ.

ಈ ಕೃಷ್ಣ ಮಂದಿರ, 21 ಚಿನ್ನದ ಶಿಖರಗಳು ಮೂರು ವಿವಿಧ ಮಹಡಿಗಳನ್ನು ಒಳಗೊಂಡಿದೆ. ಮೊದಲನೇಯ ಮಹಡಿಯಲ್ಲಿ ಕೃಷ್ಣನ ವಿಗ್ರಹವನ್ನು, ಎರಡನೇಯ ಮಹಡಿಯಲ್ಲಿ ಶಿವನ ವಿಗ್ರಹವನ್ನು, ಮೂರನೇಯ ಮಹಡಿಯಲ್ಲಿ ಲೋಕೇಶ್ವರನ ವಿಗ್ರಹವನ್ನು ಇಟ್ಟು ಪೂಜಿಸಲಾಗಿದೆ. ಮೊದಲನೇಯ ಮಹಡಿಯಲ್ಲಿ ಕೃಷ್ಣ, ರಾಧೆ, ರುಕ್ಮಿಣಿಯ ಮೂರ್ತಿಯನ್ನು ಕೆತ್ತಲಾಗಿದೆ. ಎರಡನೇಯ ಮಹಡಿಯಲ್ಲಿ ರಾಮಾಯಣದ ಕಥೆಯನ್ನು ಹೇಳುವ ಶಿಲ್ಪಕಲೆಯಿದೆ.

ಈ ದೇವಸ್ಥಾನದಲ್ಲಿ ದೀಪಾವಳಿ ಪೂಜೆ, ಶ್ರೀ ಕೃಷ್ಣ ಜನ್ಮಾಷ್ಠಮಿಯ ಪೂಜೆಗಳು ಅತ್ಯಂತ ಅದ್ಧೂರಿಯಾಗಿ ನಡೆಯುತ್ತದೆ. ಪೂಜೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಒಟ್ಟುಗೂಡುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss