Sunday, September 8, 2024

Latest Posts

ಕಿರಾಣಿ ಅಂಗಡಿ ಇಡುವುದಾದರೆ ಕೆಲ ಐಡಿಯಾಗಳು ಇಲ್ಲಿದೆ ನೋಡಿ..!

- Advertisement -

ಈ ಹಿಂದೆ ಇಂದು ಮತ್ತು ಮುಂದೆಯೂ ಕೂಡ ಲಾಭದಾಯಕವಾಗಿರುವ ಉದ್ಯಮ ಅಂದ್ರೆ ಕಿರಾಣಿ ಉದ್ಯಮ. ಪ್ರತಿಯೊಬ್ಬರು ಕಿರಾಣಿ ಸ್ಟೋರ್‌ಗೆ ಹೋಗೇ ಹೋಗ್ತಾರೆ, ದಿನಸಿ ಪರ್ಚೇಸ್ ಮಾಡೇ ಮಾಡ್ತಾರೆ. ಹಾಗಾಗಿ ಕಿರಾಣಿ ಅಂಗಡಿ ಇಟ್ಟರೆ ಉತ್ತಮ ಲಾಭ ಪಡಿಯಬಹುದು. ಹಾಗಾದ್ರೆ ಬನ್ನಿ ಕಿರಾಣಿ ಅಂಗಡಿ ಉದ್ಯಮದ ಬಗ್ಗೆ ಇನ್ನಷ್ಟು ತಿಳಿಯೋಣ.

ಮಾರುಕಟ್ಟೆಯಲ್ಲಿ ಅಥವಾ ಜನಜಂಗುಳಿ ಇರುವ ಪ್ರದೇಶದಲ್ಲಿ ನೀವು ಕಿರಾಣಿ ಅಂಗಡಿ ಇಡಬಹುದು. ನಿಮ್ಮ ಕಿರಾಣಿ ಅಂಗಡಿ ನೀಟ್ ಆಗಿ ಇದ್ದಷ್ಟು ಉತ್ತಮ.

ಕಿರಾಣಿ ಅಂಗಡಿಗೆ ಬೇಕಾಗುವಂಥ ವಸ್ತುವನ್ನ ನೀವು ಹೋಲ್‌ಸೇಲ್‌ ಅಂಗಡಿಯಿಂದ ಖರೀದಿಸಬಹುದು. ಅಂಗಡಿ ರೆಂಟ್, ವಸ್ತುಗಳ ಖರೀದಿ ಎಲ್ಲ ಸೇರಿ 4 ಲಕ್ಷ ಬಂಡವಾಳ ಹೂಡಬೇಕಾಗುತ್ತದೆ. ಇನ್ನು ಕಿರಾಣಿ ಅಂಗಡಿ ಇರುವುದಕ್ಕೆ ನಿಮಗೆ ಲೈಸೆನ್ಸ್ ಅತ್ಯಗತ್ಯವಾಗಿ ಬೇಕು.

ಇನ್ನು ಎಲ್ಲದಕ್ಕಿಂತ ಮುಖ್ಯವಾಗಿ ಅಂಗಡಿಯಲ್ಲಿ ಜನರು ಜಾಸ್ತಿಯಾಗಿದ್ದಾಗ, ಅಂಗಡಿಯವರು ತಾಳ್ಮೆ ಕಳೆದುಕೊಂಡುಬಿಡ್ತಾರೆ. ಬಂದ ಗ್ರಾಹಕರ ಜೊತೆ ಜೋರಾಗಿ ಮಾತನಾಡುವುದು, ಗದರುವುದೆಲ್ಲ ಮಾಡುತ್ತಾರೆ. ಹೀಗೆ ಮಾಡಿದಾಗ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ. ಆದ್ದರಿಂದ ತಾಳ್ಮೆಯಿಂದ ಇದ್ದು, ಗ್ರಾಹಕರನ್ನ ಸಂಭಾಳಿಸುವುದನ್ನು ಕಲಿಬೇಕು.

ನೀವು ಮಾರುವ ವಸ್ತುಗಳು ಒಳ್ಳೆಯ ಕ್ವಾಲಿಟಿಯದ್ದಾಗಿರಲಿ. ಇದರಿಂದಲೂ ಗ್ರಾಹಕರ ಸಂಖ್ಯೆ ಏರುವ ಸಾಧ್ಯತೆ ಇದೆ. ಇನ್ನು ನಿಮ್ಮ ಕಿರಾಣಿ ಅಂಗಡಿ ಹೇಗಿರಬೇಕೆಂದರೆ, ಅದನ್ನ ನೋಡಿದ ತಕ್ಷಣ ಗ್ರಾಹಕರಿಗೆ ಇಷ್ಟವಾಗುವಂತಿರಬೇಕು. ಒಬ್ಬ ಗ್ರಾಹಕ ನಿಮ್ಮ ಅಂಗಡಿಗೆ ಬಂದರೆ ಇದೇ ಅಂಗಡಿಯಲ್ಲೇ ನಾನು ಕಿರಾಣಿ ಸಾಮಗ್ರಿ ಖರೀದಿಸಬೇಕು ಎನ್ನುವಂತೆ ಅಂಗಡಿಯನ್ನ ಮೇಂಟೇನ್ ಮಾಡಬೇಕು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss