ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಇರುವ ದೇವಸ್ಥನವನ್ನು ಪರಶುರಾಮರು ಸೃಷ್ಟಿಸಿರುವರೆಂದು ಹೇಳಲಾಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಕುಂದಾಪುರದ ಕೊಲ್ಲೂರಿನ ಸೌಪರ್ಣಿಕಾ ನದಿ ದಡದಲ್ಲಿ ಮೂಕಾಂಬಿಕಾ ದೇವಿ ದೇವಸ್ಥಾನವಿದೆ. ಇಲ್ಲಿ ದೇವಿಯೂ ಲಿಂಗರೂಪದಲ್ಲಿ ದರ್ಶನ ನೀಡುತ್ತಾಳೆ. ದುರ್ಗಾ, ಲಕ್ಷ್ಮೀ, ಸರಸ್ವತಿಯ ತ್ರಿಗುಣ ರೂಪಿಯೆಂದೇ ಪರಿಗಣಿಸಲ್ಪಟ್ಟಿದೆ.
ಇನ್ನು ದೇವಸ್ಥಾನದ ಪೌರಾಣಿಕ ಹಿನ್ನೆಲೆ ನೋಡುವವುದಾದರೆ, ಕೊಲ್ಲೂರಿನ ಮೂಲ ಹೆಸರು ಮಹಾರಣ್ಯಪುರ. ಕೋಲ ಮಹರ್ಷಿಗಳು ಒಮ್ಮೆ ಈ ಸ್ಥಳದಲ್ಲಿ ಸಂಚರಿಸುವಾಗ ಹಸುವೊಂದು ಲಿಂಗಕ್ಕೆ ತನ್ನ ಹಾಲನ್ನ ಸಮರ್ಪಿಸುತ್ತಿತ್ತು. ಇದನ್ನು ಕಂಡ ಮಹರ್ಷಿಗಳು ಆ ಲಿಂಗವನ್ನ ಪೂಜಿಸಲು ಶುರು ಮಾಡಿದರು. ನಂತರ ಶಿವನನ್ನು ಕುರಿತು ತಪಸ್ಸು ಮಾಡಿದರಂತೆ. ಕೋಲ ಮಹರ್ಷಿಗಳ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ ಈ ಲಿಂಗದಲ್ಲಿ ತ್ರಿಶಕ್ತಿ ಸ್ವರೂಪಿಣಿ ನೆಲೆನಿಂತು ಈ ಸ್ಥಳವನ್ನ ಪವಿತ್ರ ಮಾಡುತ್ತಾಳೆ ಎಂದು ಹೇಳಿದರು.
ಇದೇ ವೇಳೆ ಕೌಮಾಸುರನೆಂಬ ರಾಕ್ಷಸ, ಶುಕ್ರಾಚಾರ್ಯರ ಬಳಿ ಮಂತ್ರೋಪದೇಶ ಪಡೆದು, ಕಾಲಭೈರವಿಯ ಕೃಪೆಗೆ ಪಾತ್ರನಾಗಿ, ಯಾವ ಪುರುಷನಿಂದಲೂ ತನಗೆ ಸಾವು ಬರಬಾರದೆಂದು ವರ ಪಡೆಯುತ್ತಾನೆ. ವರ ಪಡೆದ ಬಳಿಕ ರಾಕ್ಷಸನ ಅಟ್ಟಹಾಸ ಮುಂದುವರೆಯುತ್ತದೆ. ಈ ಅಟ್ಟಹಾಸವನ್ನ ತಡೆಯಲು ದೇವತೆಗಳು ತ್ರಿಶಕ್ತಿ ಸ್ವರೂಪಿಣಿಯ ಮೊರೆ ಹೋಗುತ್ತಾರೆ. ಈ ಬಗ್ಗೆ ತಿಳಿದ ಕೌಮಾಸುರ ಮತ್ತೆ ಶಿವನಲ್ಲಿ ತಪಸ್ಸು ಮಾಡಿ ತನಗೆ ಯಾರಿಂದಲೂ ಸಾವು ಬರಬಾರದೆಂದು ವರ ಕೇಳಲು ಹೊರಟಾಗ, ಸರಸ್ವತಿ ಆತನನ್ನು ಮೂಕನನ್ನಗಿಸುತ್ತಾಳೆ.
ತದನಂತರ ಆತ ಮೂಕಾಸುರನಾಗಿ ಅಟ್ಟಹಾಸ ನಡೆಸುತ್ತಾನೆ. ಈತನ ಅಟ್ಟಹಾಸ ಮುಗಿಸಲು ತ್ರಿಶಕ್ತಿಸ್ವೂಪಿಣಿ ಮೂಕಾಸುರನ ವಧೆ ಮಾಡುತ್ತಾಳೆ. ಮೂಕಾಸುರನ ವಧೆಯಿಂದ ತಾಯಿಗೆ ಮೂಕಾಂಬಿಕೆ ಎಂಬ ಹೆಸರು ಬರುತ್ತದೆ.
ಇದು ದೇವಸ್ಥಾನದ ಮಹತ್ವವಾದರೆ, ಇಲ್ಲಿನ ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಿದ್ರೆ, ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಅದಕ್ಕಾಗಿ ಕೊಲ್ಲೂರಿಗೆ ಬರುವ ಭಕ್ತರು, ಸೌಪರ್ಣಿಕೆಯಲ್ಲಿ ಮಿಂದೇ ಹೋಗುತ್ತಾರೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ