Tuesday, July 1, 2025

Latest Posts

ನೀವೂ ಕುಬೇರನಂತೆ ಶ್ರೀಮಂತರಾಗಲು ಈ ಮಂತ್ರ ಪಠಿಸಿ..

- Advertisement -

ಕೆಲವರು ಕಷ್ಟಪಟ್ಟು ಶ್ರೀಮಂತರಾಗ್ತಾರೆ. ಇನ್ನು ಕೆಲವರು ಅಡ್ಡದಾರಿ ಹಿಡಿದು ಶ್ರೀಮಂತರಾಗ್ತಾರೆ. ಇನ್ನು ಕೆಲವರು ಜಾಕ್‌ಪಾಟ್ ಹೊಡೆದು ಶ್ರೀಮಂತರಾಗ್ತಾರೆ. ಲಕ್ ಇರೋತನಕ ಮಾತ್ರ ಈ ಜಾಕ್‌ಪಾಟ್ ಮನುಷ್ಯ ಶ್ರೀಮಂತನಾಗಿರಲು ಸಾಧ್ಯ. ತನ್ನ ಅಡ್ಡದಾರಿಯ ಸಾಹಸ ಹೊರಬೀಳುವವರೆಗೂ ಮಾತ್ರ, ಅಡ್ಡದಾರಿ ಹಿಡಿದವ ಶ್ರೀಮಂತನಾಗಿರಲು ಸಾಧ್ಯ. ಆದ್ರೆ ಕಷ್ಟಪಟ್ಟು ಶ್ರೀಮಂತನಾದವ ಮಾತ್ರ, ಕೊನೆಯವರೆಗೂ ಶ್ರೀಮಂತನಾಗಿರುತ್ತಾನೆ. ಇದೇ ರೀತಿ ನಿಯತ್ತಿನಿಂದ ಇದ್ದು ನೀವು ಶ್ರೀಮಂತರಾಗಬೇಕು ಅಂದ್ರೆ, ಪ್ರತಿದಿನ ಒಂದು ಮಂತ್ರವನ್ನ ಪಠಿಸಬೇಕು. ಯಾವುದು ಆ ಮಂತ್ರ ಅನ್ನೋದನ್ನ ತಿಳಿಯೋಣ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267

ಇಂದು ನಾವು ಶ್ರೀಮಂತನಾಗಲು ಯಾವ ಮಂತ್ರವನ್ನ ಹೇಳಬೇಕು. ಈ ಮಂತ್ರ ಹೇಳಬೇಕಾದರೆ ಯಾವ ನಿಯಮವನ್ನ ಪಾಲಿಸಬೇಕು ಅನ್ನೋ ಬಗ್ಗೆಯೂ ಹೇಳುತ್ತೇವೆ. ಆದ್ರೆ ಅದಕ್ಕೂ ಮುನ್ನ ಹಿಂದಿನ ಜನ್ಮದಲ್ಲಿ ಕಳ್ಳನಾಗಿದ್ದ ಕುಬೇರ, ನಂತರದ ಜನ್ಮದಲ್ಲಿ ತಿರುಪತಿಗೇ ಸಾಲ ನೀಡುವಷ್ಟು ಶ್ರೀಮಂತನಾಗಿದ್ದು ಹೇಗೆ ಅನ್ನೋ ಬಗ್ಗೆ ಹೇಳುತ್ತೇವೆ ಕೇಳಿ.

ಶಿವ ಪುರಾಣದ ಪ್ರಕಾರ ಗುಣನಿಧಿ ಎಂಬ ಬಡವನೋರ್ವನಿದ್ದ. ಒಪ್ಪತ್ತಿನ ಊಟಕ್ಕೆ ಗತಿ ಇರದ ಕಾರಣ ಬದುಕಲು ಕಳ್ಳತನದ ದಾರಿ ಹಿಡಿದ. ಒಮ್ಮೆ ಶಿವನ ದೇಗುಲದಲ್ಲಿ ಕಳ್ಳತನ ಮಾಡಲು ಗುಣನಿಧಿ ಹೋಗುತ್ತಾನೆ. ಅವನು ಕಳ್ಳತನ ಮಾಡಲು ಹೋದಾಗ ಶಿವ ದೇವಾಲಯ ಸಂಪೂರ್ಣ ಕತ್ತಲೆ ಮಯವಾಗಿರುತ್ತದೆ. ದೀಪ ಹಚ್ಚಿದರೂ ಕೂಡ ಗಾಳಿಯ ಪ್ರಭಾವದಿಂದ ದೀಪಪದೇ ಪದೇ ಆರಿ ಹೋಗುತ್ತಿತ್ತು. ಈ ಕಾರಣಕ್ಕೆ ಗುಣನಿಧಿ ತನ್ನ ಸತತ ಪ್ರಯತ್ನ ಮಾಡಿ, ತಾನು ಧರಿಸಿ ವಸ್ತ್ರ ಬಿಚ್ಚಿ ಗಾಳಿಗೆ ದೀಪ ಆರದಂತೆ ತಡೆದನು.

ಇದರಿಂದ ಪ್ರಸನ್ನಗೊಂಡ ಶಿವನು ಪ್ರತ್ಯಕ್ಷನಾಗಿ ನೀನು ಮುಂದಿನ ಜನ್ಮದಲ್ಲಿ ಧನ, ಕನಕಗಳ ದೇವನಾಗಿ ಜನ್ಮ ಪಡೆ ಎಂದು ವರ ನೀಡುತ್ತಾನೆ. ಈ ರೀತಿ ಗುಣನಿಧಿ ಮುಂದಿನ ಜನ್ಮದಲ್ಲಿ ಕುಬೇರನಾಗಿ ಜನ್ಮ ಪಡೆಯುತ್ತಾನೆ.

ಈಗ ನಾವೂ ಕೂಡ ಕುಬೇರನಂತಾಗಲು ಯಾವ ಮಂತ್ರ ಪಠಿಸಬೇಕು ಅನ್ನೋ ಪ್ರಶ್ನೆಗೆ ಉತ್ತರ,
ಓಂ ಯಕ್ಷರಾಜಾಯ ವಿದ್ಮಹೇ, ವೈಶ್ರವಣಾಯ ಧೀಮಹೀ
ತನ್ನೋ ಕುಬೇರ ಪ್ರಚೋದಯಾತ್

ಈ ಮಂತ್ರವನ್ನ ಪ್ರತಿದಿನ ಸ್ನಾನಾದಿಗಳನ್ನ ಮುಗಿಸಿ, ದೇವರ ಮುಂದೆ ಕುಳಿತು, 108 ಬಾರಿ ಜಪಿಸಬೇಕು. ಹೆಣ್ಣು ಮಕ್ಕಳು ಕೂಡ ಈ ಮಂತ್ರವನ್ನ ಪಠಿಸಬಹುದು. ಆದ್ರೆ ಮುಟ್ಟಾದ ಸಮಯದಲ್ಲಿ, ಸೂತಕದ ಸಮಯದಲ್ಲಿ, ಸ್ನಾನ ಮಾಡದೇ ಈ ಮಂತ್ರ ಪಠಿಸಬಾರದು. ಅಲ್ಲದೇ, ಸ್ನಾನ ಮಾಡಿ, ಒಗೆದ ವಸ್ತ್ರವನ್ನೇ ಧರಿಸಿ, ದೇವರ ಮುಂದೆ ಕುಳಿತು, ಹಣೆಗೆ ಕುಂಕುಮವಿಟ್ಟು ಈ ಮಂತ್ರ ಪಠಿಸಬೇಕು.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss