ಈ ಮಂತ್ರ ಪಠಿಸಿದ್ರೆ ಸದಾಕಾಲ ರಾಯರ ಕೃಪೆ ನಿಮ್ಮ ಮೇಲಿರುತ್ತದೆ..!

ಮೂಲರಾಮನ ಆರಾಧಕರಾದ, ದೇವಮಾನವರೆನ್ನಿಸಿಕೊಂಡ ಗುರು ರಾಯರು, ಭಕ್ತರ ಕಷ್ಟಗಳನ್ನ ಪರಿಹರಿಸುವ ಕಲಿಯುಗದ ಕಲ್ಪವೃಕ್ಷವಿದ್ದಂತೆ. ಇಂಥ ರಾಯರನ್ನ ನಾವು ಒಂದು ಮಂತ್ರದ ಮೂಲಕ ನೆನೆದರೆ, ಗುರು ರಾಯರು ಕನಸ್ಸಿನಲ್ಲಿ ಬಂದು ಕಷ್ಟಗಳನ್ನ ಪರಿಹರಿಸುತ್ತಾರೆಂಬ ನಂಬಿಕೆ ಇದೆ. ಹಾಗಾದ್ರೆ ಯಾವುದು ಆ ಮಂತ್ರ ಅನ್ನೋದನ್ನ ನೋಡೋಣ ಬನ್ನಿ..

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ : 9663502278

ರಾಯರ ಬಗ್ಗೆ ಹಲವು ಮಂತ್ರಗಳಿದೆ ಆದ್ರೆ, ರಾಯರ ಗಾಯತ್ರಿ ಮಂತ್ರ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಆ ಮಂತ್ರವನ್ನ ಪ್ರತಿ ದಿನ 21 ಬಾರಿ ಅಥವಾ 108 ಬಾರಿ ಜಪಿಸಬೇಕು. ಮಂತ್ರ ಪಠಿಸಲು ಕೆಲ ನಿಯಮಗಳಿದೆ. ನೀವು ಆ ನಿಯಮಗಳನ್ನ ಅನುಸರಿಸಿ, ಮಂತ್ರ ಪಠಿಸಿದ್ರೆ, ರಾಯರ ಕೃಪೆ ನಿಮ್ಮ ಮೇಲಿರುತ್ತದೆ.

ಆ ನಿಯಮ ಯಾವುದಂದ್ರೆ, ಪ್ರತಿ ದಿನ ನೀವು ಈ ಮಂತ್ರವನ್ನ ಜಪಿಸಬೇಕು. ಪ್ರತಿದಿನ ಜಪಿಸಲಾಗದಿದ್ದರೆ ಗುರುವಾರವಾದ್ರೂ ನೀವು ಈ ಮಂತ್ರವನ್ನ ಜಪಿಸಬೇಕು. ಇನ್ನು 48 ದಿನಗಳ ಕಾಲ ಈ ಮಂತ್ರ ಪಠಿಸಿದರೆ, ನಿಮ್ಮ ಜೀವನದಲ್ಲಿ ಯಶಸ್ಸು ಕಾಣುತ್ತೀರಿ. ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ. ರಾಯರ ಕೃಪೆ ನಿಮ್ಮ ಮೇಲಿರುತ್ತದೆ. ಪ್ರತಿದಿನ 108 ಬಾರಿ ಈ ಮಂತ್ರ ಪಠಿಸಿದರೆ ಉತ್ತಮ. ಆ ಮಂತ್ರ ಹೀಗಿದೆ..

ಓಂ ವೆಂಕಟನಾಥಾಯ ವಿದ್ಮಹೇ, ಸಚ್ಚಿದಾನಂದಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್..
ಓಂ ವೆಂಕಟನಾಥಾಯ ವಿದ್ಮಹೇ, ತಿಮ್ಮಣ್ಣ ಪುತ್ರಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್..
ಓಂ ಪ್ರಹಲಾದಾಯ ವಿದ್ಮಹೇ, ವ್ಯಾಸರಾಜಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್..

ಇನ್ನು ಈ ಮಂತ್ರ ಪಠಿಸುವಾಗ ಮಾಂಸ ಮದ್ಯ ಸೇವಿಸಿರಬಾರದು. ಮನೆಯಲ್ಲಿ ಸೂತಕವಿರಬಾರದು. ಹೆಣ್ಣು ಮಕ್ಕಳು ಕೂಡಾ ಈ ಮಂತ್ರ ಜಪಿಸಬಹುದು, ಆದ್ರೆ ಮುಟ್ಟಿನ ದಿನಗಳಲ್ಲಿ ಈ ಮಂತ್ರ ಪಠಿಸುವುದು ನಿಷಿದ್ಧ. ಸಾಧ್ಯವಾದ್ರೆ ಪ್ರತೀ ಗುರುವಾರ ರಾಯರ ಮಠಕ್ಕೆ ಹೋಗಿ ರಾಯರ ದರ್ಶನ ಮಾಡಿ ಬನ್ನಿ. ಇನ್ನು ರಾಯರ ಮಠದಲ್ಲಿ ಸಿಗುವ ಮಂತ್ರಾಕ್ಷತೆ ತಂದು ಮನೆಯಲ್ಲಿಟ್ಟುಕೊಳ್ಳಿ. ದೇವರ ಮನೆಯಲ್ಲಿಟ್ಟರೆ ಉತ್ತಮ. ನೀವು ಯಾವುದಾದರೂ ಉತ್ತಮ ಕೆಲಸಕ್ಕೆ ಹೊರಡುವಾಗ, ಅಥವಾ ನಿಮ್ಮ ಮಕ್ಕಳು ಪರೀಕ್ಷೆ ಬರೆಯಲು ಹೋಗುವಾಗ, ಕೆಲಸದ ಸಂದರ್ಶನಕ್ಕೆ ಹೋಗುವಾಗ ರಾಯರ ಮಂತ್ರಾಕ್ಷತೆಯನ್ನ ಹಿಡಿದುಕೊಂಡೋ ಅಥವಾ ತಲೆ ಮೇಲೆ ಹಾಕಿಕೊಂಡು ಹೋಗುವುದು ಉತ್ತಮ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

About The Author