ಯಾರು ಈ ಮೈಲಾರ ಲಿಂಗೇಶ್ವರ..? ಈತ ಮೈಲಾರದಲ್ಲಿ ಬಂದು ನೆಲೆ ನಿಂತಿದ್ದು ಹೇಗೆ..?

ಪ್ರತಿದಿನ ಒಂದೊಂದು ಪುಣ್ಯಕ್ಷೇತ್ರ ಪರಿಚಯ ಮಾಡುಕೊಡುತ್ತಿರುವ ನಾವು ಇಂದು ಮೈಲಾರ ಲಿಂಗೇಶ್ವರನ ಕ್ಷೇತ್ರದ ಪರಿಚಯ ಮಾಡಿಕೊಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಪ್ರತೀ ವರ್ಷ ರಾಜ್ಯದಲ್ಲಿ ಮೈಲಾರ ಕಾರ್ಣಿಕ ನುಡಿವ ಭವಿಷ್ಯ ಕೇಳುವ ಸಲುವಾಗಿ ಹಲವು ಭಕ್ತಾದಿಗಳು ಕಾಯುತ್ತಿರುತ್ತಾರೆ. ಮತ್ತು ಕಾರ್ಣಿಕ ನುಡಿದ ಭವಿಷ್ಯ ಎಂದೂ ಸುಳ್ಳಾಗಿಲ್ಲ. ಮೈತ್ರಿ ಸರ್ಕಾರ ಬೀಳುವ ಬಗ್ಗೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಬಗ್ಗೆ ಕಾರ್ಣಿಕ ನುಡಿದ ಭವಿಷ್ಯ ನಿಜವಾಗಿತ್ತು. ಇಂಥ ಕಾರ್ಣಿಕ ಭವಿಷ್ಯ ನುಡಿಯುವುದಾದರೂ ಎಲ್ಲಿ ಎಂಬ ಪ್ರಶ್ನೆಗೆ ಉತ್ತರ, ಬಳ್ಳಾರಿ ಜಿಲ್ಲೆಯ, ಹೂವಿನ ಹಡಗಲಿ ತಾಲೂಕಿನ, ಮೈಲಾರದಲ್ಲಿ.

ಇಲ್ಲಿ ನಡೆಯುವ ಮೈಲಾರ ಜಾತ್ರೆ, ಲಕ್ಷ ಲಕ್ಷ ಭಕ್ತರು, ಕರ್ನಾಟಕ ಮತ್ತು ಮಾಹಾರಾಷ್ಟ್ರದಿಂದ ಆಗಮಿಸುತ್ತಾರೆ. ಕನ್ನಡಿಗರು ಏಳು ಕೋಟಿ ಏಳು ಕೋಟಿ ಮೈಲಾರ ಲಿಂಗೇಶ್ವರ ಎಂಬ ಜೈಕಾರ ಹಾಕಿದರೆ, ಮರಾಠಿಗಳು ಏಳ್ ಕೋಡ್ ಏಳ್ ಕೋಡ್ ಜೈ ಮಲ್ಹಾರ್ ಎಂದು ಉದ್ಗರಿಸುತ್ತಾರೆ. ಈ ಸಮಯದಲ್ಲಿ ಇಡೀ ಮೈಲಾರವೇ ಅರಿಷಿನಮಯವಾಗಿರುತ್ತದೆ. ಭಕ್ತರು ಭಂಡಾರದಲ್ಲಿ ಮುಳಗೇಳುತ್ತಾರೆ.

ಶಿವನ ಹಲವು ಅವತಾರಗಳಲ್ಲಿ ಮೈಲಾರ ಲಿಂಗೇಶ್ವರನ ಅವತಾರ ಕೂಡ ಒಂದು. ಹಿಂದೆ ಮಣಿ ಮತ್ತು ಮಲ್ಲ ಎಂಬ ರಾಕ್ಷಸರು, ಎಲ್ಲರಿಗೂ ತೊಂದರೆ ಕೊಡುತ್ತ, ಅಟ್ಟಹಾಸ ಮೆರೆಯುತ್ತ ತಿರುಗುತ್ತಿದ್ದರು. ಈ ವೇಳೆ ದೇವತೆಗಳು, ಋಷಿ ಮುನಿಗಳು ಶಿವನ ಮೊರೆ ಹೋಗಿ, ರಾಕ್ಷಸರ ಅಟ್ಟಹಾಸದಿಂದ ಕಾಪಾಡುವಂತೆ ಹೇಳುತ್ತಾರೆ.

ಆಗ ಶಿವ ಮೈಲಾರನ ರೂಪ ಧರಿಸಿ, 7 ಕೋಟಿ ಗೊರವರ ಜೊತೆ ಮಣಿ ಮತ್ತು ಮಲ್ಲರ ಸಂಹಾರ ಮಾಡುತ್ತನೆ. ಇವರ ಸಂಹಾರ ಮಾಡುವಾಗ ಇವರ ರಕ್ತ ನೆಲಕ್ಕೆ ಬಿದ್ದರೆ, ಮತ್ತೆಲ್ಲಿ ರಾಕ್ಷಸರ ಹುಟ್ಟಾಗುತ್ತದೆಯೋ ಎಂಬ ಕಾರಣಕ್ಕೆ, ಪಾರ್ವತಿ ಗಂಗಿಮಾಳಮ್ಮಳ ರೂಪ ತಾಳಿ, ತನ್ನ ನಾಲಿಗೆ ಚಾಚಿ ರಾಕ್ಷಸರ ರಕ್ತ ಹೀರುತ್ತಾಳೆ. ಹೀಗೆ ಸಂಪೂರ್ಣವಾಗಿ, ಮಣಿ ಮಲ್ಲರ ಸಂಹಾರವಾಗುತ್ತದೆ.

ಗೊರವರ ಜೊತೆ ಸೇರಿ ರಾಕ್ಷಸರ ಸಂಹಾರ ಮಾಡಿದ್ದಕ್ಕೆ, ಗೋರವರಿಗೆ ಮೈಲಾರನೇ ಕುಲದೇವರಾಗುತ್ತಾನೆ. ತಲೆಗೆ ಕೆಂಪು ಪೇಟ, ಅದಕ್ಕೆ ಅರ್ಧ ಚಂದ್ರ, ಹಣೆಗೆ ಅರಿಷಿನ, ಅದರ ಮಧ್ಯೆ ಕುಂಕುಮದ ತಿಲಕ, ಗಿರಿಜಾ ಮೀಸೆ, ಡಮರು, ತ್ರಿಶೂಲ, ಖಡ್ಗ, ಅರಿಶಿನದ ಬಟ್ಟಲು, ಹುಲಿ ಚರ್ಮ, ಕಂಬಳಿ, ಇದು ಮೈಲಾರನ ಅವತಾರ. ಬುಡಬುಡಿಕೆಯವರು ಮೈಲಾರದ ಭಕ್ತರಾಗಿದ್ದು, ಇವರು ಇವನ ರೀತಿ ಬಟ್ಟೆ ಹಾಕಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author