ಕರ್ನಾಟಕ ಟಿವಿಗೆ ಸ್ವಾಗತ. ನಾವಿವತ್ತು ಮಂಗಳೂರಿನಲ್ಲಿರುವ ಮಂಗಳಾದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಂಗಳೂರಿನಲ್ಲಿ ಮಂಗಳಾದೇವಿ ನೆಲೆಸಿದ್ದಾದರೂ ಹೇಗೆ..? ಈ ದೇವಿಯ ವಿಶೇಷತೆಗಳೇನು..? ಈ ಎಲ್ಲ ವಿಷಯಗಳ ಬಗ್ಗೆ ತಿಳಿಯೋಣ. ಆದರೆ ಅದಕ್ಕೂ ಮುನ್ನ ನೀವಿನ್ನೂ ನಮ್ಮ ಚಾನೆಲ್‌ನಾ ಸಬ್‌ಸ್ಕ್ರೈಬ್ ಮಾಡದಿದ್ದಲ್ಲಿ, ಬೇಗ ಸಬ್‌ಸ್ಕ್ರೈಬ್ ಆಗಿ, ಪಕ್ಕದಲ್ಲಿರುವ ಬೆಲ್ ಐಕಾನ್ ಪ್ರೆಸ್ ಮಾಡಿ..
ಮಂಗಳೂರಿನ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಸ್ಥಾನವಿದೆ. ಪ್ರತಿದಿನ ಭಕ್ತರು ಈಕೆಯ ದರ್ಶನ ಮಾಡಿ ಪುನೀತರಾಗುತ್ತಾರೆ. ನವರಾತ್ರಿಯಲ್ಲಿ ಮತ್ತು ಮಾರ್ಚ್‌ನಲ್ಲಿ ನಡೆಯುವ ಜಾತ್ರಾ ಸಮಯದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಮಂಗಳಾದೇವಿಯ ದರ್ಶನ ಮಾಡಲು ಆಗಮಿಸುತ್ತಾರೆ. ಪಾರ್ವತಿಯ ಅಂಶವಾದ ಮಂಗಳಾದೇವಿಯ ದರ್ಶನ ಮಾಡಿ, ಬೇಡಿಕೊಂಡರೆ, ಶೀಘ್ರದಲ್ಲೇ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಸ್ವಯಂವರ ಪಾರ್ವತಿ ವೃತ ಮಾಡಿದ್ದಲ್ಲಿ , ಶೀಘ್ರದಲ್ಲಿ ವಿವಾಹವಾಗುತ್ತದೆ ಎನ್ನುವ ನಂಬಿಕೆ ಇದೆ. ಹಲವರು ಇಲ್ಲಿ ಹರಕೆ ಹೊತ್ತು, ವೃತ ಮಾಡಿ, ವೈವಾಹಿಕ ಜೀವನ ನಡೆಸುತ್ತಿದ್ದಾರೆ.
ಇನ್ನು ಮಂಗಳಾದೇವಿ ಮಂಗಳೂರಿನಲ್ಲಿ ಬಂದು ನೆಲೆಸಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ, ಇಲ್ಲಿನ ಇತಿಹಾಸವೇ ಉತ್ತರ. ಒಂಭತ್ತನೇ ಶತಮಾನದ ರಾಜನಾದ ಕುಂದವರ್ಮನ ಕಾಲದಲ್ಲಿ ಈ ದೇವಿಯನ್ನ ಪ್ರತಿಷ್ಠಾಪನೆ ಮಾಡಲಾಯಿತು. ಅಹೇಪ ವಂಶದ ರಾಜನಾದ ಕುಂದವರ್ಮ ತಾಯಿಯ ದೇವಸ್ಥಾನವನ್ನು ಕಟ್ಟಿಸಿದ ಎನ್ನಲಾಗುತ್ತದೆ.
ವಿಕಾಸಿನ ಮತ್ತು ಅಂಡಾಸುರರು ಭೂಲೋಕವನ್ನು ನಾಶ ಮಾಡಲು ಬಂದಾಗ, ಅವರನ್ನು ಸದೆಬಡಿದು, ಜನರ ಕಷ್ಟಕ್ಕೆ ತಾಯಿ ಮಂಗಳಾಂಬೆ ಮಂಗಳ ಹಾಡಿದ್ದಳು. ತಾಯಿ ಈ ಪ್ರದೇಶದಲ್ಲಿ ರಾಕ್ಷಸರನ್ನು ಸಂಹರಿಸಿ, ಈ ಸ್ಥಳದಲ್ಲೇ ನೆಲೆಸಿದ್ದಳು. ಆಕೆಯ ಬಿಂಬವನ್ನು ಪರಶುರಾಮ ಪರಿಚಯಿಸಿದ್ದ. ಈ ವಿಷಯಗಳನ್ನು ನೇಪಾಳದ ನಾಥಪಂಥ ಸನ್ಯಾಸಿಗಳಾದ, ಮಚ್ಛೇಂದ್ರನಾಥರು ಮತ್ತು ಗೋರಾಕ್ಷನಾಥರು ರಾಜ ಕುಂದವರ್ಮನಿಗೆ ತಿಳಿಸಿದರು. ಹಾಗಾಗಿ ಕುಂದವರ್ಮ ಮಂಗಳಾಂಬೆಗೆ ಒಂದು ದೇವಸ್ಥಾನವನ್ನು ಕಟ್ಟಿ, ಅಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಿದರು.