Saturday, March 15, 2025

Latest Posts

ಈ ಬಾರಿಯ TNIT ಅವಾರ್ಡ್ ಫಂಕ್ಷನ್ ವಿಭಿನ್ನ ಮತ್ತು ವಿಶಿಷ್ಟ..!

- Advertisement -

2017ರಿಂದ ದಿ ನ್ಯೂ ಇಂಡಿಯಾ ಟೈಮ್ಸ್ ಮೀಡಿಯಾ ಅವಾರ್ಡ್ ನೀಡುತ್ತ ಬಂದಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಈ ಅವಾರ್ಡ್ ಫಂಕ್ಷನ್ ನಡೆದಿರಲಿಲ್ಲ. ಆದ್ರೆ ಈ ವರ್ಷ ಈ ಅವಾರ್ಡ್ ಫಂಕ್ಷನ್ ವಿಭಿನ್ನವಾಗಿ ನಡೆಯಲಿದೆ.

ಪ್ರತೀ ವರ್ಷ ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ಮಾಧ್ಯಮದಲ್ಲಿರುವ ಪ್ರತಿಭಾನ್ವಿತರಿಗೆ ಅವಾರ್ಡ್ ನೀಡಿ ಗೌರವಿಸುತ್ತಿದೆ. ಮೊದಲೆಲ್ಲ ಬರೀ ನಿರೂಪಕರಿಗಷ್ಟೇ ಈ ಅವಾರ್ಡ್ ನೀಡಲಾಗುತ್ತಿತ್ತು. ಆದ್ರೆ ನಂತರದಲ್ಲಿ ರಿಪೋರ್ಟರ್, ಕ್ಯಾಮೆರಾ ಮ್ಯಾನ್, ವೀಡಿಯೋ ಎಡಿಟರ್, ಗ್ರಾಫಿಕ್ಸ್ ಡಿಸೈನರ್ ಇತ್ಯಾದಿ ವಿಭಾಗದ ಪ್ರತಿಭೆಗಳನ್ನ ಗುರುತಿಸಿ, ಪ್ರಶಸ್ತಿ ನೀಡಲು ಪ್ರಾರಂಭಿಸಿದೆ. ಈ ಬಾರಿ ಇನ್ನೂ ಕೆಲ ವಿಭಾಗಗಳು ಪ್ರಶಸ್ತಿ ಪಟ್ಟಿಯಲ್ಲಿ ಸೇರಿಕೊಳ್ಳಲಿದೆ.

ದಿ ನ್ಯೂಸ್ ಇಂಡಿಯನ್ ಟೈಮ್ಸ್ ಸಂಸ್ಥೆಯ ಮೊದಲ ಅವಾರ್ಡ್ ಪಡೆದವರು, ಚಂದನ್ ಶರ್ಮಾ, ಸೋಮಣ್ಣ ಮಾಚಿಮಾಡ, ಸುಕನ್ಯಾ ಮತ್ತು ಜಾನ್ಹವಿ. ಪುರುಷರ ವಿಭಾಗದ ವಿನ್ನರ್ ಆಗಿ ಚಂದನ್ ಶರ್ಮಾ ಅವಾರ್ಡ್ ಪಡೆದುಕೊಂಡ್ರೆ, ರನ್ನರ್ ಆಗಿ ಸೋಮಣ್ಣ ಅವಾರ್ಡ್ ಪಡೆದಿದ್ದರು. ಇನ್ನು ಮಹಿಳಾ ವಿಭಾಗದ ಉತ್ತಮ ನಿರೂಪಕಿ ಪ್ರಶಸ್ತಿಯಲ್ಲಿ ಸುಕನ್ಯಾ ವಿನ್ನರ್ ಆದ್ರೆ, ಜಾನ್ಹವಿ ರನ್ನರ್ ಅಪ್ ಆಗಿದ್ದರು.

ಮಾಧ್ಯಮದ ಪ್ರತಿಭೆಗಳನ್ನ ಗುರುತಿಸಿ ಈ ರೀತಿಯ ಅವಾರ್ಡ್ ನೀಡುತ್ತಿರುವುದು ನಿಜಕ್ಕೂ ಉತ್ತಮ ವಿಚಾರ. ಇಂಥ ಅವಾರ್ಡ್ನಿಂದ ಕೆಲಸ ಮಾಡುವ ಹುಮ್ಮಸ್ಸು ಇನ್ನೂ ಹೆಚ್ಚಿದೆ ಅನ್ನುತ್ತಾರೆ, ಅವಾರ್ಡ್ ಪಡೆದ ಪ್ರತಿಭೆಗಳು.

- Advertisement -

Latest Posts

Don't Miss