ಮಂಚ್ ಮುರುಗನ್ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..? ಈ ಬಗ್ಗೆ ಕುತೂಹಲಕಾರಿ ಕಥೆ ಇಲ್ಲಿದೆ ನೋಡಿ..

ಮುರುಗನ್ ಅಂದ್ರೆ ಸುಬ್ರಹ್ಮಣ್ಯ ಸ್ವಾಮಿ. ಇದು ಹೆಚ್ಚಿನ ಕೇರಳಿಗರ, ತಮಿಳಿಗರ ಇಷ್ಟದೈವ. ಆದ್ರೆ ಕೇರಳದಲ್ಲಿರುವ ಮಂಚ್ ಮುರುಗನ್ ದೇವಸ್ಥಾನಕ್ಕೆ ತನ್ನದೇ ಆದ ಭಕ್ತಗಣವಿದೆ. ಯಾಕೆ ಇಲ್ಲಿರುವ ಮುರುಗನ್ ಸ್ವಾಮಿಗೆ ಈ ಹೆಸರು ಬಂತು..? ಏನು ಈ ದೇವಸ್ಥಾನದ ವಿಶೇಷತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೇರಳದ ಅಲಪ್ಪುಜಾ ಜಿಲ್ಲೆಯಲ್ಲಿ ಮಂಚ್ ಮುರುಗನ್ ದೇವಸ್ಥಾನವಿದೆ. ಇದರ ನಿಜವಾದ ಹೆಸರು ಬಾಲಸುಬ್ರಹ್ಮಣ್ಯ ದೇವಸ್ಥಾನ. ಇಲ್ಲಿ ಬಾಲ ಮುರುಗನ್ ಪೂಜಿಸಲ್ಪಡುತ್ತಾನೆ. ಈ ದೇವಸ್ಥಾನದಲ್ಲಿ ಪ್ರಸಾದವಾಗಿ ಮಂಚ್ ಚಾಕೋಲೇಟನ್ನ ನೀಡಲಾಗುತ್ತದೆ. 10ರಿಂದ 15 ಬಾಕ್ಸ್‌ನಲ್ಲಿರುವ ಚಾಕೋಲೇಟ್‌ಗಳನ್ನ ಬಾಲ ಮುರುಗನ್‌ಗೆ ನೈವೇದ್ಯ ಮಾಡಿ, ಆ ಚಾಕೋಲೇಟನ್ನೇ ಪ್ರಸಾದವಾಗಿ ಭಕ್ತರಿಗೆ ಕೊಡಲಾಗುತ್ತದೆ.

ಯಾಕೆ ಇಲ್ಲಿ ಮಂಚ್ ಚಾಕೋಲೇಟನ್ನ ಪ್ರಸಾದವಾಗಿ ಕೊಡ್ತಾರೆ ಅನ್ನೋ ಬಗ್ಗೆ ಒಂದು ಕಥೆ ಇದೆ. ಕೆಲ ವರ್ಷಗಳ ಹಿಂದೆ ಒಂದು ಮಗು ಜ್ವರದಿಂದ ಬಳಲುತ್ತಿತ್ತು, ಎಷ್ಟು ಚಿಕಿತ್ಸೆ ಕೊಡಿಸಿದರೂ ಅದರ ಆರೋಗ್ಯ ಸರಿಹೋಗಲಿಲ್ಲ. ಒಂದು ದಿನ ರಾತ್ರಿ ಆ ಮಗು, ಬಾಲ ಮುರುಗನ್ ಹೆಸರನ್ನ ನಿದ್ದೆಗಣ್ಣಿನಲ್ಲಿ ಕನವರಿಸುತ್ತಿತ್ತು. ಮರುದಿನ ಅದರ ತಂದೆ ತಾಯಿ ಆ ಮಗುವನ್ನು ಬಾಲ ಮುರುಗನ್ ದೇವಸ್ಥಾನಕ್ಕೆ ಕರೆತಂದು, ದೇವರಿಗೆ ಪೂಜೆ ಮಾಡಿ, ಅಲ್ಲಿ ಸಿಕ್ಕ ಹೂವಿನ ಹಾರವನ್ನು ತಮ್ಮ ಮಗನಿಗೆ ಹಾಕಿದರು.

ನಂತರ ಆ ಮಗು ತನಗಾಗಿ ತಂದಿದ್ದ ಮಂಚ್ ಚಾಕೋಲೇಟನ್ನ ದೇವರಿಗೆ ಅರ್ಪಿಸಿ, ಅದು ನೈವೇದ್ಯವಾದ ಬಳಿಕ ಆ ಚಾಕೋಲೇಟನ್ನ ತಿಂದಿತು. ಯಾವ ವೈದ್ಯರ ಬಳಿ ಹೋದರೂ ಸರಿಯಾಗದ ಜ್ವರ, ಆ ಚಾಕೋಲೇಟ್ ಸೇವಿಸಿದ ಬಳಿಕ ಸರಿಯಾಯಿತು. ಮಗು ಆರೋಗ್ಯವಾಯಿತು. ಈ ಸುದ್ದಿ ಊರೆಲ್ಲಾ ಹರಡಿತು. ಅಂದಿನಿಂದ ಇಲ್ಲಿಗೆ ಬರುವ ಭಕ್ತರು ಮಂಚ್‌ ಚಾಕೋಲೇಟ್ ತಂದು, ದೇವರಿಗೆ ಅರ್ಪಿಸುತ್ತಾರೆ.

ಕೆಲವರು ಹರಕೆ ಹೊತ್ತು, ಅದು ಈಡೇರಿದ ಬಳಿಕ, ರಾಶಿ ರಾಶಿ ಮಂಚ್ ಚಾಕೋಲೇಟನ್ನ ಬಾಲಮುರುಗನ್‌ಗೆ ಅರ್ಪಿಸುತ್ತಾರೆ. ಇನ್ನು ಇಲ್ಲಿ ಚಿಕ್ಕ ಮಕ್ಕಳ ತುಲಾಭಾರವನ್ನು ಮಾಡಲಾಗುತ್ತದೆ. ಒಂದು ತಕ್ಕಡಿಯಲ್ಲಿ ಮಗು ಮತ್ತೊಂದು ತಕ್ಕಡಿಯಲ್ಲಿ ಮಂಚ ಚಾಕೋಲೇಟ್‌ಗಳ ಬಾಕ್ಸ್. ಈ ಪ್ರಸಾದದ ಕಾರಣದಿಂದ ಇಲ್ಲಿ ಪುಟಾಣಿ ಭಕ್ತರ ಸಂಖ್ಯೆಯೇ ಜಾಸ್ತಿ ಎನ್ನಬಹುದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author