ಯಾರು ಈ ನಂದಿ..? ಈತ ಶಿವನ ವಾಹನ ಆಗಿದ್ದು ಹೇಗೆ..?

ಪ್ರತೀ ಶಿವನ ದೇವಸ್ಥಾನದಲ್ಲೂ ನಂದಿಯ ಮೂರ್ತಿ ಇದ್ದೇ ಇರುತ್ತದೆ. ರಾಮನಿದ್ದಲ್ಲಿ ಹನುಮನು ಇರುವುದು ಹೇಗೋ..? ಅದೇ ರೀತಿ ಶಿವ ಇದ್ದಲ್ಲಿ ನಂದಿ ಇದ್ದೇ ಇರ್ತಾನೆ. ಹಾಗಾದ್ರೆ ನಂದಿ ಯಾರು..? ಈತ ಶಿವನ ವಾಹನವಾಗಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶಿಲಾದ ಮಹರ್ಷಿ ಎಂಬುವವರಿಗೆ ಮಕ್ಕಳಿರುವುದಿಲ್ಲ. ಹಾಗಾಗಿ ಅವರು ಶಿವನ ಕುರಿತು ಘೋರ ತಪಸ್ಸನ್ನು ಮಾಡ್ತಾರೆ. ಮಹರ್ಷಿಯ ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಏನು ವರ ಬೇಕು ಎಂದು ಕೇಳುತ್ತಾರೆ. ಅದಕ್ಕೆ ಶಿಲಾದ ಮಹರ್ಷಿ, ನನಗೆ ಸಂತಾನ ಭಾಗ್ಯ ಕರುಣಿಸು ಎಂದು ಬೇಡುತ್ತಾನೆ. ತಥಾಸ್ತು ಎಂದ ಶಿವ ಮಾಯವಾಗುತ್ತಾನೆ.

ಶಿಲಾದ ಮಹರ್ಷಿಗೆ ಗಂಡು ಸಂತಾನ ಪ್ರಾಪ್ತಿಯಾಗುತ್ತದೆ. ಅದಕ್ಕೆ ನಂದಿ ಎಂದು ಹೆಸರಿಡಲಾಗುತ್ತದೆ. ಮುದ್ದು ಮುದ್ದಾದ ನಂದಿ ಎಲ್ಲರಿಗೂ ಪ್ರೀತಿ ಪಾತ್ರನಾಗಿರ್ತಾರೆ. ಒಮ್ಮೆ ಶಿಲಾದ ಮಹರ್ಷಿಗಳ ಕುಟೀರಕ್ಕೆ ಇಬ್ಬರು ಸಂತರು ಬರುತ್ತಾರೆ. ಆ ಸಂತರಿಗೆ ಶಿಲಾದ ಮಹರ್ಷಿಗಳು ಊಟೋಪಚಾರ ಮಾಡುತ್ತಾರೆ. ಸಂತರು ಹೊರಡುವಾಗ ಮಹರ್ಷಿಗಳು ಅವರ ಕಾಲಿಗೆ ಬೀಳುತ್ತಾರೆ. ಆಗ ಸಂತರು ಧೀರ್ಘಾಯುಶ್ಮಾನ್‌ಭವ ಎಂದು ಆಶೀರ್ವದಿಸುತ್ತಾರೆ. ಆದ್ರೆ ನಂದಿ ಸಂತರ ಕಾಲಿಗೆ ಬಿದ್ದಾಗ ಅವರು ಆಶೀರ್ವದಿಸುವುದಿಲ್ಲ. ಆಗ ಮಹರ್ಷಿಗಳು ಏಕೆ ನನ್ನ ಮಗನಿಗೆ ನೀವು ಆಶೀರ್ವಾದ ಮಾಡುತ್ತಿಲ್ಲ ಎಂದು ಕೇಳುತ್ತಾರೆ. ಅದಕ್ಕೆ ಸಂತರು ಆತ ಅಲ್ಪಾಯುಷಿ ಎಂಬ ಸತ್ಯ ಹೇಳುತ್ತಾರೆ.

ಆಗ ನಂದಿ ಅಲ್ಪಾಯುಷಿ ಎಂಬ ಸತ್ಯ ಮಹರ್ಷಿಗಳಿಗೆ ತಿಳಿಯುತ್ತದೆ. ಕೆಲ ದಿನಗಳ ನಂತರ ನಂದಿಗೂ ಕೂಡ ಈ ವಿಷಯ ತಿಳಿಯುತ್ತದೆ. ಆಗ ನಂದಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಪ್ರತ್ಯಕ್ಷನಾದ ಶಿವನ ಮುಂದೆ ನನಗೆ ಧೀರ್ಘಾಯುಷ್ಯ ಕೊಡು ಎಂದು ಕೇಳುವುದನ್ನು ಬಿಟ್ಟು, ನಾನು ಸದಾ ನಿನ್ನ ಜೊತೆ ಇರುವಂತೆ ದಯೆ ಕರುಣಿಸು ಎಂದು ಕೇಳುತ್ತಾರೆ. ಅದಕ್ಕೆ ಶಿವ ತಥಾಸ್ಥು ಎನ್ನುತ್ತಾನೆ. ಹಾಗಾಗಿ ನಂದಿ ಆಯುಷ್ಯ ಮುಗಿದ ಬಳಿಕ, ಪರಶಿವನ ವಾಹನವಾಗಿ, ಸದಾ ಪರಶಿವನ ಬಳಿಯೇ ಇರುತ್ತಾನೆ. ಮತ್ತು ಪರಶಿವನ ಪರಮ ಭಕ್ತನೆನ್ನಿಸಿಕೊಳ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author