Friday, July 4, 2025

Latest Posts

ನವರಾತ್ರಿಯಲ್ಲಿ ಈ ನಿಯಮಗಳನ್ನ ಪಾಲಿಸಿ, ದುರ್ಗೆಯ ಕೃಪೆಗೆ ಪಾತ್ರರಾಗಿ..

- Advertisement -

ಅಕ್ಟೋಬರ್ 17ರಿಂದ ನವರಾತ್ರಿ ಶುರುವಾಗಲಿದೆ. 9 ದಿನ 9 ದೇವಿಯರ ಆರಾಧನೆ ಮಾಡಿ, ಹತ್ತನೇ ದಿನ ವಿಜಯ ದಶಮಿ ಹಬ್ಬದ ಸಂಭ್ರಮದೊಂದಿಗೆ ದಸರಾ ವೈಭವ ಅಂತ್ಯವಾಗುತ್ತದೆ. ನಾವಿವತ್ತು ನವರಾತ್ರಿಯ ದಿನಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ನವರಾತ್ರಿಯ ಮೊದಲ ದಿನವನ್ನ ಕಲಶ ಕೂರಿಸುವ ದಿನವೆನ್ನಲಾಗಿದೆ. ಈ ದಿನ ಹಲವೆಡೆ ಘಟ್ಟ ಕೂರಿಸಿ, ದಾಂಡಿಯಾ, ಗರ್ಭಾ ನೃತ್ಯ ಮಾಡುವ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಶೈಲ ಪುತ್ರಿಯ ಆರಾಧನೆ, ಎರಡನೇ ದಿನ ಬ್ರಹ್ಮಚಾರಿಣಿ ಪೂಜೆ, ಮೂರನೇ ದಿನ ಚಂದ್ರಘಂಟಿತಿಯ ಪೂಜೆ, ನಾಲ್ಕನೇ ದಿನ ಕೂಷ್ಮಾಂಡ ದೇವಿಯ ಆರಾಧನೆ, ಐದನೇ ದಿನ ಸ್ಕಂದ ಮಾತೆ, ಆರನೇ ದಿನ ಕಾತ್ಯಾಯಿನಿ ದೇವಿಯ ಪೂಜೆ, ಏಳನೇ ದಿನ ಕಾಲರಾತ್ರಿ, ಎಂಟನೇ ದಿನ ಮಹಾಗೌರಿ ಪೂಜೆ, ಮತ್ತು ಒಂಬತ್ತನೇ ದಿನ ದುರ್ಗೆಯ ಆರಾಧನೆ ಮಾಡಲಾಗುತ್ತದೆ.

ನವರಾತ್ರಿಯ ದಿನಗಳಲ್ಲಿ ಸರಸ್ವತಿ ಪೂಜೆ, ದುರ್ಗಾ ಪೂಜೆ, ಆಯುಧ ಪೂಜೆಯನ್ನ ಮಾಡಲಾಗುತ್ತದೆ. ಕೆಲವೆಡೆ ಗೊಂಬೆ ಕೂರಿಸುವ ಪದ್ಧತಿ ಕೂಡ ಇದೆ. ಗೊಂಬೆ ಕೂರಿಸಿದ ದಿನಗಳಲ್ಲಿ ಪ್ರತಿದಿನ ಆ ಗೊಂಬೆಗಳಿಗೆ ಪೂಜೆ ಮಾಡಿ, 9 ತರಹದ ಸಿಹಿ ಖಾದ್ಯವನ್ನ ನೈವೇದ್ಯ ಮಾಡಿ, ಮಕ್ಕಳ ಕಡೆಯಿಂದ ಪ್ರಾರ್ಥನೆ, ಭಜನೆ ಮಾಡಿಸಲಾಗುತ್ತದೆ. ಈ ದಿನಗಳಲ್ಲಿ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ.

ಅದೇನೆಂದರೆ, ಮೊದಲನೇಯದಾಗಿ ನವರಾತ್ರಿ ದಿನಗಳಲ್ಲಿ ಮದ್ಯ ಮಾಂಸ ಸೇವಿಸಬಾರದು. ಕೆಲವರು ಈರುಳ್ಳಿ ಬೆಳ್ಳುಳ್ಳಿಯನ್ನ ಕೂಡ ತ್ಯಜಿಸುತ್ತಾರೆ.

ಎರಡನೇಯದಾಗಿ ದೇವಿ ದಿನಗಳಾದ ನವರಾತ್ರಿಯಲ್ಲಿ ಕೂದಲು ಕತ್ತರಿಸುವುದು ಮತ್ತು ಉಗುರು ಕತ್ತರಿಸುವುದು ನಿಷೇಧವಿದೆ.

ಮೂರನೇಯದಾಗಿ ದುರ್ಗಾಪೂಜೆಯ ದಿನ ಋತುಮತಿಯಾಗದ ಬಾಲಕಿಯನ್ನ ಕರೆದು ಅರಿಷಿನ ಕುಂಕುಮ, ಬಟ್ಟೆ ಕೊಟ್ಟು, ಸಿಹಿ ಊಟ ಉಣಬಡಿಸುವುದರಿಂದ ದುರ್ಗೆಯನ್ನ ಪೂಜೆ ಮಾಡಿದ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅಂದು ಆ ಬಾಲಕಿ ತಲೆಸ್ನಾನ ಮಾಡಿದರೆ ಇನ್ನೂ ಉತ್ತಮ.

ನಾಲ್ಕನೇಯದಾಗಿ ಸರಸ್ವತಿ ಪೂಜೆ ಮಾಡುವಾಗ ಪುಸ್ತಕಗಳನ್ನ ಪೂಜೆ ಇಡುವ ಪದ್ಧತಿ ಇದೆ. ಹೀಗೆ ಇಟ್ಟ ಪುಸ್ತಕವನ್ನ ದಸರೆಯ ದಿನ ಪೂಜೆ ಮುಗಿಸಿ, ಕೊಡಲಾಗುತ್ತದೆ. ಆ ಪುಸ್ತಕವನ್ನ ಓದಬೇಕು, ಮತ್ತು ಪುಸ್ತಕದಲ್ಲಿ ಏನಾದರೂ ಬರೆಯಬೇಕು. ಯಾಕಂದ್ರೆ ವಿಜಯದಶಮಿಯನ್ನ ವಿದ್ಯಾದಶಮಿ ಅಂತಲೂ ಕರೆಯಲಾಗುತ್ತದೆ. ಈ ದಿನ ವಿದ್ಯಾಭ್ಯಾಸ ಮಾಡಿದ್ರೆ, ಉತ್ತಮ ಭವಿಷ್ಯ ರೂಪಿತಗೊಳ್ಳುತ್ತದೆ ಎಂಬ ನಂಬಿಕೆ ಇದೆ.

ಇನ್ನು ಆಯುಧ ಪೂಜೆಯ ದಿನ ಆಯುಧಗಳಿಗೆ ಪೂಜೆ ಸಲ್ಲಿಸಿದ ಬಳಿಕ ಅದನ್ನ ಬಳಸುವುದು ನಿಷಿದ್ಧ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ

- Advertisement -

Latest Posts

Don't Miss