Friday, July 4, 2025

Latest Posts

ನವರಾತ್ರಿಯಲ್ಲಿ ಒಂಬತ್ತು ದಿನ ದೇವಿಯರಿಗೆ ಈ ನೈವೇದ್ಯವನ್ನ ಮಾಡಬೇಕು..

- Advertisement -

ನಾವು ಈಗಾಗಲೇ ನವರಾತ್ರಿಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಹೇಳಿದ್ದೇವೆ.. ಇಂದು ನಾವು ನವರಾತ್ರಿಯ ದಿನಗಳಲ್ಲಿ ದೇವಿಯರಿಗೆ ಯಾವ ನೈವೇದ್ಯವನ್ನ ಇಡಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನವರಾತ್ರಿಯ ಮೊದಲ ದಿನವನ್ನ ಕಲಶ ಕೂರಿಸುವ ದಿನವೆನ್ನಲಾಗಿದೆ. ಈ ದಿನ ಹಲವೆಡೆ ಘಟ್ಟ ಕೂರಿಸಿ, ದಾಂಡಿಯಾ, ಗರ್ಭಾ ನೃತ್ಯ ಮಾಡುವ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಶೈಲ ಪುತ್ರಿಯ ಆರಾಧನೆ, ಎರಡನೇ ದಿನ ಬ್ರಹ್ಮಚಾರಿಣಿ ಪೂಜೆ, ಮೂರನೇ ದಿನ ಚಂದ್ರಘಂಟಿತಿಯ ಪೂಜೆ, ನಾಲ್ಕನೇ ದಿನ ಕೂಷ್ಮಾಂಡ ದೇವಿಯ ಆರಾಧನೆ, ಐದನೇ ದಿನ ಸ್ಕಂದ ಮಾತೆ, ಆರನೇ ದಿನ ಕಾತ್ಯಾಯಿನಿ ದೇವಿಯ ಪೂಜೆ, ಏಳನೇ ದಿನ ಕಾಲರಾತ್ರಿ, ಎಂಟನೇ ದಿನ ಮಹಾಗೌರಿ ಪೂಜೆ, ಮತ್ತು ಒಂಬತ್ತನೇ ದಿನ ದುರ್ಗೆಯ ಆರಾಧನೆ ಮಾಡಲಾಗುತ್ತದೆ.

ಈ ದಿನಗಳಲ್ಲಿ ಪ್ರತಿದಿನ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಈ ವೇಳೆ ಒಂದೊಂದು ದಿನ ಒಂದೊಂದು ತರಹದ ನೈವೇದ್ಯವನ್ನ ಮಾಡಲಾಗುತ್ತದೆ.

ಮೊದಲನೇಯ ದಿನ ಶೈಲ ಪುತ್ರಿಗೆ ತುಪ್ಪವನ್ನ ಅಥವಾ ತುಪ್ಪದಿಂದ ಮಾಡಿದ ಖಾದ್ಯವನ್ನ ನೈವೇದ್ಯಕ್ಕಿಡುವುದು ವಾಡಿಕೆ. ಇನ್ನು ಎರಡನೇಯ ದಿನ ಬ್ರಹ್ಮಚಾರಿಣಿಗೆ ಸಿಹಿ ಪದಾರ್ಥವನ್ನ ನೈವೇದ್ಯಕ್ಕಿಡುತ್ತಾರೆ. ಮೂರನೇಯ ದಿನ ಚಂದ್ರಘಂಟಿತಿಗೆ ಹಾಲಿನಿಂದ ಮಾಡಿದ ಪಾಯಸವನ್ನ ನೈವೇದ್ಯಕ್ಕಿಡಲಾಗುತ್ತದೆ.

ನಾಲ್ಕನೇಯ ದಿನ ಚಂದ್ರಘಂಟಿತಿಗೆ ಮಾಲ್ಪೋವಾವನ್ನ ನೈವೇದ್ಯ ಮಾಡುತ್ತಾರೆ. ಐದನೇ ದಿನ ಸ್ಕಂದ ಮಾತೆಗೆ ಬಾಳೆಹಣ್ಣು ಅಥವಾ ಬಾಳೆಹಣ್ಣಿನ ಪಾಯಸವನ್ನ ನೈವೇದ್ಯ ಮಾಡಲಾಗುತ್ತದೆ. ಆರನೇ ದಿನ ಕಾತ್ಯಾಯಿನಿ ದೇವಿಗೆ ಜೇನುತುಪ್ಪದಿಂದ ಮಾಡಿದ ಖಾದ್ಯವನ್ನ ಅರ್ಪಿಸಲಾಗುತ್ತದೆ.

ಇನ್ನು ಏಳನೇ ದಿನ ಕಾಲರಾತ್ರಿಗೆ ಬೆಲ್ಲ ಮತ್ತು ಒಣಹಣ್ಣುಗಳ ಮಿಶ್ರಿತ ಖಾದ್ಯವನ್ನ ನೈವೇದ್ಯ ಮಾಡಲಾಗುತ್ತದೆ. ಎಂಟನೇ ದಿನ ಮಹಾಗೌರಿಗೆ ತೆಂಗಿನ ಕಾಯಿ ಮತ್ತು ಒಂಬತ್ತನೇ ದಿನ ದುರ್ಗೆಗೆ ಎಳ್ಳಿನಿಂದ ಮಾಡಿದ ಸಿಹಿ ಖಾದ್ಯ ಸಮರ್ಪಿಸುತ್ತಾರೆ. ಸರಸ್ವತಿ ಪೂಜೆ ಇದ್ದಾಗ, ಆ ದಿನ ಸರಸ್ವತಿಗೆ ಸೌತೇಕಾಯಿಯ ಸಿಹಿ ದೋಸೆ ಅಥವಾ ಸಿಹಿ ಇಡ್ಲಿಯನ್ನ ಮಾಡಿ, ನೈವೇದ್ಯ ಮಾಡಲಾಗುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss