Tuesday, November 18, 2025

Latest Posts

ನಿವಾರ್ ಚಂಡಮಾರುತದ ಎಫೆಕ್ಟ್: ಎರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ..!

- Advertisement -

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಎನ್‌ಡಿಆರ್‌ಎಫ್‌ ತಂಡ ಬಿಗಿ ಭದ್ರತೆ ಕೈಗೊಂಡಿದೆ. ನಿವಾರ್ ಟಂಡಮಾರುತದ ಎಫೆಕ್ಟ್ ಬೆಂಗಳೂರಿಗೂ ತಾಗಲಿದ್ದು, ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.

25ರಿಂದ 27ನೇ ತಾರೀಖಿನವರೆಗೂ ಮಳೆ ಬೀಳಲಿದ್ದು, ಬೆಂಗಳೂರು ಸೇರಿ, 8 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನಿವಾರ್ ಚಂಡಮಾರುತದಿಂದ ರಸ್ತೆಗಳಿಗೆ, ಕೃಷಿಗೆ, ಸಾರ್ವಜನಿಕ ಆಸ್ತಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ 22 ಎನ್‌ಡಿಆರ್‌ಎಫ್‌ ತಂಡಗಳನ್ನು ರಕ್ಷಣೆ ಹಿನ್ನೆಲೆ ನಿಯೋಜಿಸಲಾಗಿದೆ.

ಇಷ್ಟೇ ಅಲ್ಲದೇ, ಮೀನುಗಾರಿಕೆ, ಮೋಟಾರ್ ಬೋಟ್ಸ್ ಸೇರಿ ಇನ್ನಿತರ ಚಟುವಟಿಕೆಗೆ ಬ್ರೇಕ್ ಹಾಕಲಾಗಿದೆ. ತಮಿಳುನಾಡಿನ ಏಳು ಜಿಲ್ಲೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಚೆನ್ನೈನಿಂದ ನಿರ್ಗಮಿಸಬೇಕಾಗಿದ್ದ, ಚೆನ್ನೈಗೆ ಆಗಮಿಸಬೇಕಾಗಿದ್ದ ವಿಮಾನಗಳನ್ನ ಸ್ಥಗಿತಗೊಳಿಸಲಾಗಿದೆ. ಕಣ್ಣೂರು, ಕೋಜಿಕೋಡ್, ವಿಜಯವಾಡ, ತಿರುಚಿ, ತೂತ್ತುಕುಡಿ, ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿ ವಿಮಾನಗಳ ಸಂಚಾರ ರದ್ದಾಗಿದೆ.

- Advertisement -

Latest Posts

Don't Miss