Wednesday, July 2, 2025

Latest Posts

ಪಾಂಡವರಲ್ಲಿ ಯಾರು ಸ್ವರ್ಗಕ್ಕೆ ಹೋಗ್ತಾರೆ..? ಯಾರು ನರಕಕ್ಕೆ ಹೋಗ್ತಾರೆ..?

- Advertisement -

ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ಕೌರವರು ಸೋತು ಸತ್ತ ಬಳಿಕ, ಪಾಂಡವರು ಕೆಲ ವರ್ಷಗಳ ಕಾಲ ಪಾಂಡವರು ರಾಜ್ಯವಾಳಿ, ನಂತರ ಸನ್ಯಾಸತ್ವ ಸ್ವೀಕರಿಸಿದರು. ನಂತರ ಜೀವನ ಪಯಣ ಮುಗಿಸಿ ಪಾಂಡವರೆಲ್ಲ ಸ್ವರ್ಗಕ್ಕೆ ಪಯಣ ಬೆಳೆಸಿದರು. ಆದ್ರೆ ಎಲ್ಲರೂ ಸ್ವರ್ಗಕ್ಕೆ ಹೋಗಲಿಲ್ಲ. ಹಾಗಾದ್ರೆ ಸ್ವರ್ಗಕ್ಕೆ ಹೋದವರು ಯಾರು ಅನ್ನೋದನ್ನ ನೋಡೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಪಾಂಡವರೆಲ್ಲ ಸೇರಿ ಸ್ವರ್ಗಕ್ಕೆ ಹೊರಟರು. ಅವರ ಜೊತೆ ನಾಯಿಯೊಂದು ಹೊರಟಿತು. ಮೊದಲು ದ್ರೌಪದಿ ಕುಸಿದು ಬಿದ್ದಳು. ಆಕೆ ಸ್ವರ್ಗಕ್ಕೆ ಹೋಗಲಿಲ್ಲ. ಯಾಕಂದ್ರೆ ಆಕೆಗೆ ತಾನು ಐವರು ಪತಿಯರ ಪತ್ನಿ ಅನ್ನೋ ಅಹಂಕಾರವಿತ್ತು. ಅಲ್ಲದೇ, ಆವರನ್ನೂ ಸರಿಸಮಾನವಾಗಿ ಪ್ರೀತಿಸುತ್ತೇನೆ ಎಂದು ಅರ್ಜುನನ್ನು ಅತೀಯಾಗಿ ಪ್ರೀತಿಸುತ್ತಾಳೆ. ಆದ್ದರಿಂದ ಆಕೆ ಸ್ವರ್ಗಕ್ಕೆ ಹೋಗಲಾಗಲಿಲ್ಲ.

ಎರಡನೇಯದಾಗಿ ಸಹದೇವ ಮರಣ ಹೊಂದುತ್ತಾನೆ. ಯಾಕಂದ್ರೆ ಸಹದೇವನಿಗೆ ತಾನೊಬ್ಬನೇ ಜ್ಞಾನಿ ಎಂಬ ಅಹಂಕಾರವಿತ್ತು. ಈ ಕಾರಣಕ್ಕಾಗಿ ಸಹದೇವನೂ ಕೂಡ ಸ್ವರ್ಗಕ್ಕೆ ಹೋಗಲಾಗಲಿಲ್ಲ.

ಮೂರನೇಯದಾಗಿ ನಕುಲ ಮರಣ ಹೊಂದುತ್ತಾನೆ. ಯಾಕಂದ್ರೆ ಆತನಿಗೆ ತಾನೇ ಸುಂದರನೆಂಬ ಅಹಂಕಾರವಿತ್ತು. ಈ ಕಾರಣಕ್ಕಾಗಿ ನಕುಲನೂ ಕೂಡ ಸ್ವರ್ಗಕ್ಕೆ ಹೋಗಲಾಗಲಿಲ್ಲ.

ನಾಲ್ಕನೇಯದಾಗಿ ಅರ್ಜುನ ಮರಣ ಹೊಂದುತ್ತಾನೆ. ಯಾಕಂದ್ರೆ ಅರ್ಜುನನಿಗೆ ತನಗಿಂತ ಧನುರ್ವಿದ್ಯೆಯಲ್ಲಿ ಬೇರೆಯವರು ಪ್ರಾವಿಣ್ಯತೆ ಹೊಂದಿದ್ದರೆ, ಅವರನ್ನ ನೋಡಿ ಅಸೂಯೆಯಾಗುತಿತ್ತು. ಅದಕ್ಕಾಗಿ ಅರ್ಜುನ ಸ್ವರ್ಗಕ್ಕೆ ಹೋಗಲಾಗಲಿಲ್ಲ.

ಐದನೇಯದಾಗಿ ಭೀಮ ಮರಣ ಹೊಂದುತ್ತಾನೆ. ಯಾಕಂದ್ರೆ ಅತೀಯಾಗಿ ಆಹಾರ ತಿಂದು, ಬೇರೆಯವರ ಹಸಿವಿಗೆ ಬೆಲೆ ಕೊಡದ ಕಾರಣ, ಭೀಮ ಕೂಡ ಸ್ವರ್ಗಕ್ಕೆ ಹೋಗಲಾಗುವುದಿಲ್ಲ.

ನಂತರ ಧರ್ಮರಾಯ ಮತ್ತು ಶ್ವಾನ ಸ್ವರ್ಗದ ಕಡೆ ಹೋಗುತ್ತಿರುತ್ತದೆ. ಸ್ವರ್ಗದ ಬಾಗಿಲಲ್ಲಿ ಇಬ್ಬರು ಬಂದು ನಿಲ್ಲುತ್ತಾರೆ. ಸ್ವರ್ಗಲೋಕದಲ್ಲಿ ಧರ್ಮರಾಯನಿಗಷ್ಟೇ ಬರಲು ಅನುಮತಿ ನೀಡಲಾಗುತ್ತದೆ. ಆದ್ರೆ ಧರ್ಮರಾಯ, ಶ್ವಾನ ಬಂದರಷ್ಟೇ ನಾನೂ ಬರುವೆ ಎನ್ನುತ್ತಾನೆ. ಧರ್ಮರಾಯನ ನಿಯತ್ತನ್ನು ಕಂಡು ಇಂದ್ರ, ಇಬ್ಬರಿಗೂ ಸ್ವರ್ಗಲೋಕಕ್ಕೆ ಬರಲು ಅನುಮತಿ ನೀಡಲಾಗುತ್ತದೆ. ಆಗ ಗೊತ್ತಾಗುವುದೇನಂದ್ರೆ ಆ ಶ್ವಾನ ಬೇರೆ ಯಾರೂ ಅಲ್ಲ ಬದಲಾಗಿ ಯಮಧರ್ಮನಾಗಿರುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss