ನವರಾತ್ರಿ ವಿಶೇಷ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಹಿನ್ನೆಲೆ..

ನಾವು ಈಗಾಗಲೇ ನವರಾತ್ರಿ ವಿಶೇಷವಾಗಿ ದೇವಿ ದೇವಸ್ಥಾನಗಳ ಬಗ್ಗೆ, ಅದರ ಹಿನ್ನೆಲೆ ಬಗ್ಗೆ ಹೇಳಿದ್ದೇವೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಸ್ಥಾನಗಳ ಬಗ್ಗೆ ನಾವು ಮಾಹಿತಿಯನ್ನ ನೀಡಿದ್ದೇವೆ. ಅದರಂತೆಯೇ ಇಂದೂ ಕೂಡ ಮಂಗಳೂರು ಜಿಲ್ಲೆಯ ಬಂಟ್ವಾಳ ಜಿಲ್ಲೆಯಲ್ಲಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕರ್ನಾಟಕದಲ್ಲಿ ಹಲವು ದೇವಸ್ಥಾನಗಳ ಹಿನ್ನೆಲೆ ಕೇಳಿದಾಗ, ಅದರಲ್ಲಿ ಪರಶುರಾಮರ ಪಾತ್ರವಿರುತ್ತದೆ. ಅಂಥ ಪರಶುರಾಮ ಸೃಷ್ಟಿಯ ಮತ್ತೊಂದು ದೇವಸ್ಥಾನವೇ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ. ಫಲ್ಗುಣಿ ನದಿ ತಟದಲ್ಲಿರುವ ಈ ದೇವಸ್ಥಾನದ ಕಟ್ಟಡ ಅದ್ಭುತವಾಗಿದೆ. ಇಲ್ಲಿನ ಗರ್ಭಗುಡಿಯಲ್ಲಿ ರಾಜರಾಜೇಶ್ವರಿ, ಮಹಾಕಾಳಿ, ಗಣಪತಿ ಇದ್ದರೆ, ಹೊರಗೆ ಕ್ಷೇತ್ರಪಾಲನನ್ನು ಪೂಜಿಸಲಾಗುತ್ತದೆ.

ಸಾಮಾನ್ಯವಾಗಿ ದೇವರ ಮೂರ್ತಿ ಕಲ್ಲಿನದ್ದಾಗಿರುತ್ತದೆ. ಆದ್ರೆ ಪೊಳಲಿ ರಾಜರಾಜೇಶ್ವರಿ ಮೂರ್ತಿ ಮಣ್ಣಿನದ್ದು. 9 ಅಡಿ ಎತ್ತರದ ಇಂಥ ಮಣ್ಣಿನ ದೇವರ ಮೂರ್ತಿ ಇರುವುದು ಇಲ್ಲಿಯೇ. ಮೂರ್ತಿಗೆ 18 ಮೊಳದ ಸೀರೆಯನ್ನೇ ಉಡಿಸಲಾಗುತ್ತದೆ.

ಸುಮಾರು ವರ್ಷಗಳ ಹಿಂದೆ ಸುರತಾ ಎಂಬ ಮಹಾರಾಜನು ಯುದ್ಧ ಸಂದರ್ಭದಲ್ಲಿ ತನ್ನ ಧನ ಕನಕಗಳನ್ನ ಕಳೆದುಕೊಳ್ಳುತ್ತಾನೆ. ಎಲ್ಲ ಕಳೆದುಕೊಂಡು ಕಾಡಿನೆಡೆ ಹೊರಡುವಾಗ, ಸುಮೇಧ ಮಹರ್ಷಿಗಳನ್ನ ಭೇಟಿಯಾಗುತ್ತಾನೆ. ರಾಜನ ಕಷ್ಟವನ್ನ ಕಂಡ ಸುಮೇಧ ಮಹರ್ಷಿಗಳು, ರಾಜರಾಜೇಶ್ವರಿ ಮಂತ್ರವನ್ನ ಉಪದೇಶಿಸುತ್ತಾರೆ. ಈ ಮಂತ್ರ ಪಠಿಸಿ, ರಾಜ ಮಲಗಿದ್ದಾಗ, ಅವನ ಕನಸಲ್ಲಿ ರಾಜರಾಜೇಶ್ವರಿ ಬರುತ್ತಾಳೆ. ಈ ವಿಷಯವನ್ನ ರಾಜ ಮಹರ್ಷಿಗಳಿಗೆ ತಿಳಿಸುತ್ತಾನೆ.

ಆಗ ಮಹರ್ಷಿಗಳು, ಕನಸ್ಸಿನಲ್ಲಿ ಬಂದಂತೆ ಮಾತೆಯ ಮೂರ್ತಿ ಮಾಡಿ, ಪ್ರತಿಷ್ಠಾಪಿಸಿ ಪೂಜಿಸು ಎನ್ನುತ್ತಾರೆ. ಇದೇ ರೀತಿ ಮಾಡಿದ ರಾಜನಿಗೆ ಕೆಲ ದಿನಗಳ ಬಳಿಕ, ಕಳೆದುಕೊಂಡ ಸಂಪತ್ತು, ರಾಜ್ಯವೆಲ್ಲ ದಕ್ಕುತ್ತದೆ. ರಾಜ ಶ್ರೀಮಂತನಾದ ಬಳಿಕ, ರಾಜರಾಜೇಶ್ವರಿಗೆ ದೇವಸ್ಥಾನವನ್ನ ಕಟ್ಟಿಸುತ್ತಾನೆ. ಹೀಗೆ ದೇವಸ್ಥಾನ ನಿರ್ಮಾಣವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author