ಇಂದು ನಾವು ಸಾವಿರ ವರ್ಷಗಳ ಇತಿಹಾಸ ಹೊಂದಿದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಸ್ಥಾನದಲ್ಲಿರುವ ದೇವಿ ಮೂರ್ತಿಯ ವಿಶೇಷತೆ ಏನು..? ಈ ಸ್ಥಳದ ಮಹಿಮೆ ಏನು ಅನ್ನೋದನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿ ರಾಜರಾಜೇಶ್ವರಿ ದೇವಸ್ಥಾನವಿದೆ. ಹಾಗಾಗಿ ಈ ದೇವಿಯನ್ನ ಪೊಳಲಿ ರಾಜರಾಜೇಶ್ವರಿ ಅಂತಾ ಕರೆಯಲಾಗುತ್ತದೆ. ಇಲ್ಲಿನ ವಿಶೇಷತೆ ಅಂದ್ರೆ ಪೊಳಲಿ ದೇವಿಯ ವಿಗ್ರಹ. ಇದು ಮಣ್ಣಿನಿಂದ ಮಾಡಲ್ಪಟ್ಟಿದೆ. ಆದ್ದರಿಂದಲೆ ಪೊಳಲಿ ರಾಜರಾಜೇಶ್ವರಿ ಅಂತಾ ಕರೆಯಲಾಗುತ್ತದೆ. ಪೊಳಲ್ ಎಂದರೆ ಮಣ್ಣು ಎಂದರ್ಥ.
ಮಣ್ಣಿನ ವಿಗ್ರಹದಲ್ಲಿ ತಾಯಿ ಕಂಗೊಳಿಸುತ್ತಿದ್ದು, ಇದಕ್ಕೆ ಯಾವುದೇ ಅಭಿಶೇಕ ನಡೆಯುವುದಿಲ್ಲ. ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮ ಕಳಶದಲ್ಲಿ, ಪೊಳಲಿ ದೇವಿಯ ಬೆಳ್ಳಿ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ. ವರ್ಷಕ್ಕೆ ಒಮ್ಮೆ ಅಂದ್ರೆ ಏಪ್ರಿಲ್ ತಿಂಗಳಲ್ಲಿ ಇಲ್ಲಿ ಅಂದಾಜು ಒಂದು ತಿಂಗಳುಗಳ ಕಾಲ ಜಾತ್ರೆ ನಡೆಯುತ್ತದೆ. ಈ ದಿನಗಳಲ್ಲಿ ಇಲ್ಲಿರುವ ರಥಗಳಲ್ಲಿ ಅಮ್ಮನವರನ್ನು ಕೂರಿಸಿ, ದೇವಸ್ಥಾನದಲ್ಲೇ ಪ್ರದಕ್ಷಿಣೆ ಹಾಕಲಾಗುತ್ತದೆ.
ಇನ್ನು ಅಮ್ಮನವರ ಸಾನಿಧ್ಯದಲ್ಲಿ ಭಕ್ತರಿಗೆ ಅನ್ನ ಪ್ರಸಾದವನ್ನು ಕೂಡ ವಿತರಿಸಲಾಗುತ್ತದೆ. ಜಾತ್ರೆ, ಬ್ರಹ್ಮ ಕಲಶದ ಸಮಯದಲ್ಲಿ ಲಕ್ಷಾಂತರ ಜನರು ಪೊಳಲಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಆಗಲೂ ಕೂಡ ಆ ಲಕ್ಷಾಂತರ ಭಕ್ತರಿಗೆ ಅನ್ನ ಪ್ರಸಾದ ನೀಡಲಾಗುತ್ತದೆ. ಜಾತ್ರೆ ಸಮಯದಲ್ಲಿ ಇಲ್ಲಿ ಸಿಗುವ ಕಲ್ಲಂಗಡಿ ಹಣ್ಣನ್ನು ಪ್ರಸಾದದ ರೂಪದಲ್ಲಿ ಮನೆಗೆ ಕೊಂಡೊಯ್ಯಲಾಗುತ್ತದೆ. ಇದನ್ನು ಬಚ್ಚಂಗಾಯಿ ಪ್ರಸಾದ ಅಂತಾ ಹೇಳಲಾಗುತ್ತದೆ.
ಇಲ್ಲಿ ಪ್ರಮುಖವಾಗಿ ಪೊಳಲಿ ಅಮ್ಮನವರನ್ನು ಪೂಜಿಸಿದರೂ ಕೂಡ, ಕಾಳಿ, ಸುಬ್ರಹ್ಮಣ್ಯ, ಮಹಾಗಣಪತಿಯನ್ನ ಕೂಡ ಪೂಜಿಸಲಾಗುತ್ತದೆ. ಅಲ್ಲದೇ ಈ ಸ್ಥಳವನ್ನು ಕ್ಷೇತ್ರ ಪಾಲ ಕಾಯುತ್ತಿದ್ದಾನೆಂದು ಹೇಳಲಾಗಿದ್ದು, ಈತನಿಗೂ ಪೂಜಿಸಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




