ಮಣಿಮಾಲೆಯನ್ನು ಧರಿಸಿದರೆ ಮತ್ತು ಅದರಿಂದ ಜಪ ಮಾಡಿದರೇನು ಪ್ರಯೋಜನ..?

ವಯಸ್ಸಾದವರು, ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೊಂದಿದ ಕೆಲ ವ್ಯಕ್ತಿಗಳು, ಮತ್ತೆ ಕೆಲ ಸಾಧು, ಸನ್ಯಾಸಿಗಳು ಮಣಿ ಮಾಲೆಯನ್ನು ಹಿಡಿದು ಜಪ ಮಾಡುವುದನ್ನ ನೀವು ನೋಡಿರ್ತೀರಿ. ಇಂಥ ಮಾಲೆಗಳಲ್ಲಿ ತುಳಸಿ ಮಾಲೆ, ಸ್ಪಟಿಕ ಮಾಲೆ, ರುದ್ರಾಕ್ಷಿ ಮಾಲೆಗಳಿವೆ. ಈ ಮಾಲೆಗಳನ್ನ ಜಪಿಸುವುದರಿಂದ ಮತ್ತು ಧರಿಸುವುದರಿಂದ ಏನು ಪ್ರಯೋಜನ ಎಂಬ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ರುದ್ರಾಕ್ಷಿ ಜಪಮಾಲೆಯ ಬಗ್ಗೆ ತಿಳಿಯೋಣ. ಚಿಕ್ಕ ರುದ್ರಾಕ್ಷಿಯಿಂದ ಹಿಡಿದು ದೊಡ್ಡ ರುದ್ರಾಕ್ಷಿಯ ತನಕ ಜಪ ಮಾಲೆ ಸಿಗುತ್ತದೆ. ಸಾಧು ಸಂತರು, ನಾಗಾಸಾಧುಗಳು, ಶಿವಭಕ್ತರು ಹೆಚ್ಚಾಗಿ ಈ ರುದ್ರಾಕ್ಷಿ ಮಾಲೆಯನ್ನ ಧರಿಸುತ್ತಾರೆ. ಮತ್ತು ಈ ರುದ್ರಾಕ್ಷಿ ಮಾಲೆಯಿಂದ ಶಿವನಾಮಸ್ಮರಣೆ ಮಾಡುತ್ತಾರೆ.

ಎರಡನೇಯದಾಗಿ ತುಳಸಿ ಜಪಮಾಲೆ. ತುಳಸಿ ಜಪ ಮಾಲೆ ಧರಿಸುವುದರಿಂದ ಯಜ್ಞ, ಯಾಗಾದಿಗಳನ್ನು ಮಾಡಿದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ತುಳಸಿ ಮಾಲೆ ಧರಿಸಿ, ಲಕ್ಷ್ಮೀ ಬೀಜ ಮಂತ್ರ ಪಠಿಸುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆಂಬ ನಂಬಿಕೆ ಇದೆ.

ಮೂರನೇಯದಾಗಿ ಸ್ಪಟಿಕದ ಮಾಲೆ. ಇದು ಬಿಳಿ ಬಣ್ಣದ ಗಾಜಿನ ಮುತ್ತಿನಂತಿರುತ್ತದೆ. ಇದು ಶಕ್ತಿಯುತ ಹಾರವಾಗಿದ್ದು, ಇದನ್ನು ಧರಿಸಿದರೆ, ಆರೋಗ್ಯವಂತರಾಗಿರ್ತಾರೆ. ಮತ್ತು ಇದು ದೇಹಕ್ಕೆ ತಂಪು ಎಂದು ಹೇಳಲಾಗುತ್ತದೆ. ಅಲ್ಲದೇ ಇದನ್ನು ಧರಿಸುವುದರಿಂದ ಶುಕ್ರ ಗ್ರಹಕ್ಕೆ ಸಂಬಂಧಿಸಿದ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ವಿದ್ಯಾರ್ಥಿಗಳು ಈ ಹಾರವನ್ನು ಹಿಡಿದು, ಸರಸ್ವತಿ ಬೀಜ ಮಂತ್ರ ಜಪ ಮಾಡಿದರೆ, ಉತ್ತಮವಾಗಿ ವಿದ್ಯೆ ಪಡೆಯುತ್ತಾರೆಂದು ಹೇಳಲಾಗುತ್ತದೆ.

ಎಲ್ಲಕ್ಕಿಂತ ಮುಖ್ಯ ವಿಷಯ ಅಂದ್ರೆ ನೀವು ಈ ಎಲ್ಲ ಜಪಮಾಲೆ ಉಪಯೋಗಿಸುತ್ತಿದ್ದರೆ, ಕೆಲ ವಿಷಯಗಳನ್ನು ನೆನಪಿಡಬೇಕಾಗುತ್ತದೆ. ಈ ಹಾರವನ್ನು ಧರಿಸಿ ಮಲಗುವಂತಿಲ್ಲ. ಜಪಮಾಲೆಯನ್ನು ಮುಟ್ಟಾದವರು ಮುಟ್ಟಬಾರದು. ಸೂತಕದ ಸಮಯದಲ್ಲಿ ಈ ಜಪ ಮಾಲೆ ಸ್ಪರ್ಷಿಸುವಂತಿಲ್ಲ. ಜಪ ಮಾಡುವಂತಿಲ್ಲ. ಮಾಂಸ ಸೇವಿಸಿದ ಬಳಿಕ ಜಪ ಮಾಲೆ ಮುಟ್ಟಬಾರದು. ನೀವು ಜಪ ಮಾಡಿ ಮುಗಿಸಿದ ಬಳಿಕ ಅದನ್ನು ದೇವರಕೋಣೆಯಲ್ಲಿರುವುದು ಉತ್ತಮ. ಜಪ ಮಾಡುವಾಗ ಧ್ಯಾನ ಮಾಡುವಾಗ ಕುಳಿತುಕೊಳ್ಳುವ ರೀತಿ ಕೂರಬೇಕು. ಬೇಕಾದ ಕಡೆ, ಬೇಕಾದ ಹಾಗೆ ಕುಳಿತು ಜಪ ಮಾಡಬಾರದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author