Friday, July 11, 2025

Latest Posts

ಉಪ್ಪಿನ ದೀಪ ಹೇಗೆ ಹಚ್ಚಬೇಕು..? ಈ ದೀಪ ಹಚ್ಚುವುದರಿಂದ ಏನು ಉಪಯೋಗ..?

- Advertisement -

ನಾವು ಈಗಾಗಲೇ ನಿಂಬೆಹಣ್ಣಿನ ದೀಪ, ತೆಂಗಿನ ಎಣ್ಣೆ, ತುಪ್ಪದ ದೀಪ, ಕಾಮಾಕ್ಷಿ ದೀಪ, ಇತ್ಯಾದಿ ದೀಪದ ಬಗ್ಗೆ ತಿಳಿಸಿದ್ದೇವೆ. ಅಂತೆಯೇ ಇಂದು ನಾವು ಉಪ್ಪಿನ ದೀಪದ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊಟ್ಟ ಮೊದಲನೇಯದಾಗಿ ಉಪ್ಪಿನ ದೀಪ ಹಚ್ಚುವುದು ಹೇಗೆ ಅನ್ನೋದನ್ನ ನೋಡೋಣ. ಯಾವುದೇ ದೀಪ ಹಚ್ಚಬೇಕಾದ್ರೆ, ಅದನ್ನ ನೆಲದ ಮೇಲಿಡದೇ, ತಾಮ್ರ, ಬೆಳ್ಳಿ, ಮಣ್ಣು ಅಥವಾ ಪಂಚಲೋಹದ ತಟ್ಟೆಯ ಮೇಲೆ ಇರಿಸುವುದು ಉತ್ತಮ. ಉಪ್ಪಿನ ದೀಪವನ್ನ ಕೂಡ ತಾಮ್ರ, ಬೆಳ್ಳಿ, ಮಣ್ಣು ಅಥವಾ ಪಂಚಲೋಹದ ತಟ್ಟೆಯ ಮೇಲೆ ಇರಿಸಬೇಕು. ಇಲ್ಲಿ ಮಣ್ಣಿನ ಬೌಲ್ ಅಥವಾ ಮಣ್ಣಿನ ದೊಡ್ಡ ಹಣತೆ ಬಳಸಬೇಕು. ಮಣ್ಣಿನ ಹಣತೆಗೆ ಅರಿಷಿಣದ ಲೇಪನ ಮಾಡಿ, ಹಣತೆಯ ನಾಲ್ಕು ಬದಿಗೆ ಕುಂಕುಮದ ಬೊಟ್ಟನ್ನಿರಿಸಿ, ತಟ್ಟೆಯ ಮೇಲಿರಿಸಿ.

ಆ ಹಣತೆಯಲ್ಲಿ ದಪ್ಪ ಉಪ್ಪನ್ನ ಹಾಕಿ ಇದರ ಅಕ್ಕ ಪಕ್ಕ ಕೆಂಪು ಮತ್ತು ಅರಿಷಿನ ಬಣ್ಣದ ಹೂವನ್ನ ಇರಿಸಿ. ಈ ದೊಡ್ಡದಾದ ಮಣ್ಣಿನ ಹಣತೆಯ ಮೇಲೆ ಚಿಕ್ಕ ಹಣತೆಯನ್ನ ಇರಿಸಿ, ಇದಕ್ಕೂ ಅರಿಶಿನ ಕುಂಕುಮ ಹಚ್ಚಿ. ಅದಕ್ಕೆ ತುಪ್ಪ ಅಥವಾ ಎಳ್ಳೆಣ್ಣೆ ಹಾಕಿ, ಜೋಡಿ ಬತ್ತಿಗಳನ್ನ ಹಾಕಿ ದೀಪ ಹಚ್ಚಬೇಕು.

ಶುಕ್ರವಾರದ ದಿನ ಈ ದೀಪ ಹಚ್ಚಿದರೆ, ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ, ಹೀಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ಪರಿಹಾರ ಸಿಗುತ್ತದೆ. ಇನ್ನು ವಾರಕ್ಕೊಮ್ಮೆ ಅಥವಾ ಮೂರು ದಿನಕ್ಕೊಮ್ಮೆ ಈ ಉಪ್ಪನ್ನ ಬದಲಾಯಿಸಬಹುದು.

ಹಳೆಯ ಉಪ್ಪನ್ನ ಒಂದು ಬೌಲ್‌ನಲ್ಲಿ ನೀರು ಹಾಕಿ ಅದರೊಂದಿಗೆ ಉಪ್ಪನ್ನು ಕರಗಿಸಿ. ಈ ನೀರನ್ನ ಯಾರೂ ಓಡಾಡದ ಜಾಗದಲ್ಲಿ ಹಾಕಬೇಕು.

- Advertisement -

Latest Posts

Don't Miss