ಸಪ್ತ ಋಷಿಗಳ ಹೆಸರು ಮತ್ತು ಸಂಪೂರ್ಣ ಮಾಹಿತಿ..

ಪುರಾಣ ಪ್ರಕಾರ ಭಾರತದಲ್ಲಿ ಹಿಂದೂ ಧರ್ಮದಲ್ಲಿ ಹಲವು ಋಷಿ ಮುನಿಗಳಿದ್ದರು. ಆದ್ರೆ ಅದರಲ್ಲಿ ಪ್ರಮುಖರೆನ್ನಿಸಿಕೊಂಡವರು ಮಾತ್ರ, ಸಪ್ತ ಋಷಿಗಳು. ಇಂದು ಆ ಸಪ್ತ ಋಷಿಗಳು ಯಾರು ಮತ್ತು ಅವರ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

.ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ವಿಶ್ವಾಮಿತ್ರ: ಸಪ್ತರ್ಷಿಗಳಲ್ಲೇ ಪ್ರಮುಖರು ಎನ್ನಿಸಿಕೊಂಡ ಮಹರ್ಷಿಗಳೆಂದರೆ ವಿಶ್ವಾಮಿತ್ರರು. ಇವರು ತಮ್ಮ ಸಿಟ್ಟಿನಿಂದಲೇ ಪ್ರಸಿದ್ಧರಾದವರು. ವಿಶ್ವಾಮಿತ್ರರು ಬ್ರಾಹ್ಮಣರಾಗಿರಲಿಲ್ಲ. ಕ್ಷತ್ರೀಯರಾಗಿದ್ದರು. ವಿಶ್ವಾಮಿತ್ರರ ಮೂಲ ಹೆಸರು ಕೌಶಿಕ. ಇವರು ವಸಿಷ್ಠರ ಬಳಿ ಹೋರಾಡುವಾಗ ಸೋತು ಅವಮಾನಿತರಾದರು. ತಾನೂ ಕೂಡ ತಪಸ್ಸು ಮಾಡಿ, ವಸಿಷ್ಠರಿಗಿಂತ ಪ್ರಸಿದ್ಧ ಮಹರ್ಷಿಯಾಗಬೇಕೆಂದು ಪಟ್ಟು ಹಿಡಿದು, ತದನಂತರ ವಸಿಷ್ಠರಿಂದಲೇ, ಬ್ರಹ್ಮರ್ಷಿ ಎಂದು ಕರೆಸಿಕೊಂಡರು.

ಭಾರಧ್ವಾಜ: ಅಂಗೀರಸ ಮುನಿಯ ವಂಶಸ್ಥರಾದ ಭಾರಧ್ವಾಜ ಮುನಿಗಳು ವೈದಿಕ ಕಾಲದ ಶ್ರೇಷ್ಠ ಋಷಿಗಳಲ್ಲೊಬ್ಬರು. ಇವರ ತಂದೆ ದೇವಋಷಿ ಬ್ರಹಸ್ಪತಿ ಮತ್ತು ಮಗ ದ್ರೋಣಾಚಾರ್ಯ. ಭಾರಧ್ವಾಜ ಮಹರ್ಷಿಗಳು ದೇವಸ್ತ್ರಗಳ ಮತ್ತು ಯುದ್ಧಕಲೆಯಲ್ಲಿ ಪ್ರಾವಿಣ್ಯತೆ ಪಡೆದಿದ್ದರು.

ವಸಿಷ್ಠ: ವಸಿಷ್ಠರು ಸೂರ್ಯವಂಶದ ರಾಜಗುರುವಾಗಿದ್ದರು. ರಾಮನಿಗೂ ಕೂಡ ಗುರುಗಳಾಗಿದ್ದರು. ಇವರ ಪತ್ನಿಯೇ ಅರುಂಧತಿ ದೇವಿ. ಮರಣದ ಬಳಿಕವೂ, ವಸಿಷ್ಠರು ಮತ್ತು ಅರುಂಧತಿ ನಕ್ಷತ್ರವಾಗಿ ಅಕ್ಕಪಕ್ಕದಲ್ಲಿ ಇದ್ದರು.

ಗೌತಮ: ಬರಗಾಲ ಬಂದಾಗ, ವರುಣ ದೇವನನ್ನು ಕುರಿತು ಕಠಿಣ ತಪಸ್ಸು ಮಾಡಿ, ಬರಗಾಲ ನೀಗಿಸಿದ ಮಹರ್ಷಿಗಳೇ ಗೌತಮ ಮಹರ್ಷಿಗಳು. ಬ್ರಹ್ಮ ದೇವ ಯಾರು ಪ್ರಪಂಚವನ್ನು ಸುತ್ತುತ್ತಾರೋ ಅವರಿಗೆ ತಮ್ಮ ಮಗಳ ಜೊತೆ ವಿವಾಹ ಮಾಡಿಸುವುದಾಗಿ ಹೇಳುತ್ತಾರೆ. ಅದಕ್ಕೆ ಗೌತಮರು ಗೋವಿನ ಸುತ್ತುತ್ತಾರೆ. ಇದನ್ನು ನೋಡಿದ ಬ್ರಹ್ಮ ಮೆಚ್ಚಿ, ಅಹಲ್ಯಳನ್ನು ಗೌತಮ ಮಹರ್ಷಿಗೆ ಮದುವೆ ಮಾಡಿಕೊಡುತ್ತಾನೆ.

ಅತ್ರಿ: ಅತ್ರಿ ಮಹರ್ಷಿಗಳು ಕೂಡ ಬ್ರಹ್ಮ ದೇವನ ಮಗ. ಇವರ ಪತ್ನಿ ಅನುಸೂಯಾ. ವನವಾಸದಲ್ಲಿದ್ದಾಗ, ಶ್ರೀರಾಮ ಇವರ ಆಶ್ರಮಕ್ಕೆ ಬಂದಾಗ, ಶ್ರೀರಾಮನಿಗೆ ಅನೇಕ ಧರ್ಮಬೋಧನೆಯನ್ನ ಮಾಡಿದ್ದರು.

ಕಶ್ಯಪ: ಮಾರೀಚಿಯ ಮಗ ಮತ್ತು ಬ್ರಹ್ಮನ ಮೊಮ್ಮಗನೇ ಕಶ್ಯಪ ಮುನಿಗಳು. ಬ್ರಹ್ಮನ ಸೃಷ್ಟಿ ಕರ್ತವ್ಯದಲ್ಲಿ ಕಶ್ಯಪರ ಪಾತ್ರ ಮಹತ್ವದ್ದಾಗಿದ್ದು, ಇವರು ಕಶ್ಯಪ ಸಂಹಿತೆಯ ಲೇಖಕರಾಗಿದ್ದಾರೆ.

ಜಮದಗ್ನಿ: ಪರಶುರಾಮನ ತಂದೆಯೇ ಜಮದಗ್ನಿ. ಇವರು ಭೃಗುಋಷಿಯ ವಂಶಸ್ಥರು. ಇವರ ಪತ್ನಿಯೇ ರೇಣುಕಾದೇವಿ. ಈಕೆ ಒಮ್ಮೆ ಜಮದಗ್ನಿಯ ಕೋಪಕ್ಕೆ ತುತ್ತಾಗಿ ಮತ್ತೆ ಬದುಕಿ ಬಂದರು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author