Monday, December 23, 2024

Latest Posts

ಹಬ್ಬಕ್ಕೆ ತಕ್ಕಹಾಗೆ ಉದ್ಯಮ ಮಾಡೋದು ಹೇಗೆ ಗೊತ್ತಾ..?

- Advertisement -

ಇವತ್ತು ನಾವು ನಿಮಗೆ ಆಯಾ ಹಬ್ಬಕ್ಕೆ ಮಾರಾಟ ಮಾಡಬಹುದಾದ ವಸ್ತುಗಳ ಬಗ್ಗೆ ಅಂದ್ರೆ ಸೀಸನಲ್ ಬ್ಯುಸಿನೆಸ್ ಬಗ್ಗೆ ತಿಳಿಸಿಕೊಡಲಿದ್ದೇವೆ.

ಭಾರತದಲ್ಲಿ ಎಲ್ಲಾ ಧರ್ಮದವರು ವಿವಿಧ ರೀತಿಯ ಹಬ್ಬಗಳನ್ನ ಆಚರಣೆ ಮಾಡ್ತಾರೆ. ಮತ್ತು ಆ ಎಲ್ಲಾ ಹಬ್ಬಗಳಲ್ಲೂ ಕೆಲವು ಸಾಮಾನ್ಯ ವಸ್ತುಗಳನ್ನ ಜನ ಕೊಂಡುಕೊಳ್ತಾರೆ. ಅಂಥ ಸಾಮಾನ್ಯ ವಸ್ತುಗಳನ್ನ ಮಾರಾಟ ಮಾಡೋದು ಕೂಡಾ ಒಂದು ಉದ್ಯಮ. ಇವತ್ತು ಈ ಬಗ್ಗೆ ಕೆಲ ಉದಾಹರಣೆಯನ್ನ ನಾವು ನಿಮಗೆ ಕೊಡ್ತೀವಿ.

ಮೊದಲನೆಯದಾಗಿ ಸಂಕ್ರಾತಿಗೆ ಎಳ್ಳು ಬೆಲ್ಲ ಹಂಚೋದು ವಾಡಿಕೆ. ಈ ಸಮಯದಲ್ಲಿ ಎಳ್ಳು ಬೆಲ್ಲ ತಯಾರಿಸಿ, ಪ್ಯಾಕ್ ಮಾಡಿ ಮಾರಬಹುದು. ಎರಡು ಮೂರು ತರಹದ ಎಳ್ಳು ಬೆಲ್ಲ ತಯಾರಿಸಬಹುದು.
ಯುಗಾದಿಗೆ ಬೇವು ಬೆಲ್ಲ ತಿನ್ನುವುದರಿಂದ ಈ ಟೈಮಲ್ಲಿ ಬೆಲ್ಲದ ಅಚ್ಚಿಗೆ ಭಾರೀ ಬೇಡಿಕೆ ಇರುತ್ತದೆ. ಅಲ್ಲದೇ ಕೆಲವು ಕಡೆ ಸಕ್ಕರೆ ಅಚ್ಚನ್ನ ಕೂಡ ಬಳಸೋ ಪದ್ಧತಿ ಇದೆ.

ನಂತರ ಗುಡ್‌ಫ್ರೈಡೆ ಮುಗಿದು ಈಸ್ಟರ್ ಹಬ್ಬದ ಸಮಯದಲ್ಲಿ ಈಸ್ಟರ್ ಎಗ್‌ಗೆ ಬಹುಬೇಡಿಕೆ ಇರುತ್ತೆ. ಎಗ್‌ ಶೇಪ್‌ನ ಚಾಕೋಲೇಟನ್ನ ಕೂಡ ಮಾಡಿ ಮಾರಬಹುದು.

ತದನಂತರ ಬರೋದು ರಂಜಾನ್. ಈ ಹಬ್ಬದಲ್ಲಿ ಶ್ಯಾವಿಗೆ, ಡ್ರೈಫ್ರೂಟ್ಸ್, ಖರ್ಜುರಕ್ಕೆ ಎಲ್ಲಿಲ್ಲದ ಬೇಡಿಕೆ ಬರೋದು. ಆದ್ದರಿಂದ ಈ ಟೈಮಲ್ಲಿ ಡ್ರೈಫ್ರೂಟ್ಸ್‌ಗಳನ್ನ ಮಾರಾಟ ಮಾಡಬಹುದು.

ನಂತರ ಶ್ರಾವಣ ಶುರುವಾದ ಬಳಿಕವಂತೂ ಹಬ್ಬವೇ ಹಬ್ಬ. ಈ ವೇಳೆ ರಾಖಿ ಹಬ್ಬಕ್ಕೆ ರಾಖಿ ಮಾಡಿ ಮಾರಬಹುದು. ವರಮಹಾಲಕ್ಷ್ಮೀ ಹಬ್ಬಕ್ಕೆ ಅಲಂಕಾರಿಕ ವಸ್ತುಗಳನ್ನ, ಕೃಷ್ಣ ಜನ್ಮಾಷ್ಟಮಿಗೆ ಸಿಹಿ ತಿಂಡಿಗಳನ್ನ ಮಾರಾಟಮಾಡಬಹುದು.

ಇನ್ನು ಗಣೇಶ ಚತುರ್ಥಿಗೆ ವಿವಿಧ ತರಹದ ಮೋದಕ, ಲಾಡು, ಚಕ್ಕುಲಿಗಳನ್ನ ಮಾಡಿ ಪ್ಯಾಕ್ ಮಾಡಿ ಮಾರಬಹುದು. ಕೆಲ ಸಿಟಿಗಳಲ್ಲಿ ಹಬ್ಬಕ್ಕೆ ಈ ರೀತಿಯ ಖಾದ್ಯಗಳನ್ನ ಮಾಡೋ ಬದಲು ಅಂಗಡಿಯಿಂದ ಕೊಂಡು ತರ್ತಾರೆ. ಈ ಕಾರಣಕ್ಕೆ ಈ ಉದ್ಯಮದಲ್ಲಿ ಒಳ್ಳೆ ಲಾಭವಿದೆ.

ನವರಾತ್ರಿಗೆ ಗೊಂಬೆ, ದೀಪಾವಳಿಗೆ ಸಿಹಿ ತಿಂಡಿ ಮತ್ತು ಸನ್ಯಾಕ್ಸ್ ಕ್ರಿಸ್‌ಮಸ್‌ಗೆ ಕೇಕ್ ಮಾಡಿ ಮಾರಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss