ಶಬರಿ ಮಲೈ ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಚಿಕ್ಕ ಮಾಹಿತಿ..

ಶಬರಿ ಮಲೈ ಸ್ಥಾಪನೆಯಾದ ಬಗ್ಗೆ ಕಥೆ ಇದೆ. ಈ ಕಥೆಯಲ್ಲಿ ಮಹಿಷಿ ಯಾವ ರೀತಿ ವರ ಪಡೆಯುತ್ತಾಳೆ..? ಅಯ್ಯಪ್ಪ ಮಹಿಷಿಯ ಜೊತೆ ಹೋರಾಡಿ, ಆಕೆಯ ಸೊಕ್ಕು ಹೇಗೆ ಮುರಿಯುತ್ತಾನೆ..? ತಾಯಿಗಾಗಿ ಹುಲಿಯ ಹಾಲನ್ನ ಹೇಗೆ ತರುತ್ತಾನೆ..? ಕೊನೆಗೆ ಶಬರಿ ಮಲೈ ಹೇಗೆ ಸ್ಥಾಪನೆಯಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಹಿಷಾಸುರನ ತಂಗಿ ಮಹಿಷಿ, ದೇವಿಯನ್ನ ಪ್ರಾರ್ಥಿಸಿ, ತಾನು ಹರ ಮತ್ತು ಹರಿಗೆ ಜನಿಸಿದ ಮಗುವಿನಿಂದಷ್ಟೇ ಸಾವನ್ನಪ್ಪಬೇಕು. ಬೇರೆ ಯಾರಿಂದಲೂ ನನಗೆ ಸಾವು ಬರಬಾರದು ಎಂದು ವರ ಪಡೆಯುತ್ತಾಳೆ. ವರದಿಂದ ಹಿಗ್ಗಿದ್ದ ಮಹಿಷಿ, ದೇವಲೋಕದಲ್ಲಿ ಎಲ್ಲರಿಗೂ ತೊಂದರೆ ನೀಡುತ್ತ ಓಡಾಡುತ್ತಾಳೆ.

ಆಗ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಮತ್ತೆ ಮೋಹಿನಿ ರೂಪ ತಾಳಿ, ಶಿವನೊಂದಿಗೆ ಸೇರಿ ಪುತ್ರ ಸಂತಾನವನ್ನ ಪಡೆಯುತ್ತಾರೆ. ಆ ಪುತ್ರನೇ ಮಣಿಕಂಠ. ಆ ಮಗುವನ್ನ ಮಕ್ಕಳಿಲ್ಲದೇ ಕೊರಗುತ್ತಿದ್ದ ಪಂದಳ ರಾಜನಿಗೆ ಕೊಡುತ್ತಾರೆ. ಇದರಿಂದ ಖುಷಿಯಾದ ಪಂದಳ ರಾಜ, ಇದೆಲ್ಲ ಶಿವನ ಕೃಪೆ ಎಂದು ತಿಳಿದು, ಮಗುವಿಗೆ ಉತ್ತಮ ವಿದ್ಯಾಭ್ಯಾಸ ಕೊಡಲು ಗುರುಕುಲಕ್ಕೆ ಸೇರಿಸುತ್ತಾನೆ. ಗುರುಕುಲ ಶಿಕ್ಷಣ ಮುಗಿದ ಬಳಿಕ, ಗುರು ದಕ್ಷಿಣೆ ನೀಡಲು ಹೋದಾಗ, ಗುರುಗಳು, ನೀನು ನನಗೆ ಗುರು ದಕ್ಷಿಣೆ ನೀಡುವುದಾದರೆ, ನನ್ನ ಬುದ್ಧಿ ಮಾಂದ್ಯ ಮಗುವನ್ನು ಸರಿಮಾಡು ಎನ್ನುತ್ತಾರೆ. ಆಗ ಮಣಿಕಂಠ, ಬುದ್ಧಿಮಾಂದ್ಯ ಮಗುವಿನ ತಲೆಯ ಮೇಲೆ ಕೈಯಿಡುತ್ತಾನೆ. ತಕ್ಷಣ ಆ ಮಗು ಸರಿಯಾಗುತ್ತದೆ. ಈ ಪವಾಡವನ್ನು ಎಲ್ಲಿಯೂ ಹೇಳಬಾರದೆಂದು ಹೇಳಿ ಮಣಿಕಂಠ ಅರಮನೆಗೆ ಹೊರಡುತ್ತಾನೆ.

ಗುರುಕುಲ ಶಿಕ್ಷಣ ಮುಗಿಸಿ, ಅರಮನೆಗೆ ಬಂದ ಮಗನನ್ನು ಸ್ವಾಗತಿಸಿದ ರಾಜ, ಮಣಿಕಂಠನಿಗೆ ಸಿಂಹಾಸನ ನೀಡಲು ಸಿದ್ಧತೆ ಮಾಡುತ್ತಾನೆ. ಆದ್ರೆ ಮಣಿಕಂಠನ ಮೇಲೆ ಕೋಪವಿದ್ದ ಮಂತ್ರಿ ಮಣಿಕಂಠನನ್ನು ಸಾಯಿಸಲು ಹಲವು ಬಾರಿ ಸಂಚು ಮಾಡುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಇದೇ ಸಮಯಕ್ಕೆ ರಾಜ ಪತ್ನಿ ಗರ್ಭಿಣಿಯಾಗುತ್ತಾಳೆ, ಗಂಡು ಮಗುವಿಗೆ ಜನ್ಮ ನೀಡುತ್ತಾಳೆ.

ಇದೇ ಸಮಯಕ್ಕಾಗಿ ಕಾದಿದ್ದ ಮಂತ್ರಿ, ರಾಣಿಯ ಬಳಿ ಹೋಗಿ, ನಿಮ್ಮ ಮಗನಿರುವಾಗ ಬೇರೆ ಮಗುವಿಗೆ ಸಿಂಹಾಸನ ಕೊಡಲು ಹೇಗೆ ಸಾಧ್ಯ..? ಈ ಬಗ್ಗೆ ನಾವು ಏನಾದರೂ ಮಾಡಬೇಕು. ಮಣಿಕಂಠನನ್ನು ಕೊಂದರೆ, ಎಲ್ಲವೂ ನಿಮ್ಮ ಮಗನ ಪಾಲಾಗುತ್ತದೆ ಎಂದು ಆಸೆ ತೋರಿಸುತ್ತಾನೆ. ಮಂತ್ರಿ ಮಾತಿಗೆ ಕಿವಿಗೊಟ್ಟ ರಾಣಿ, ಮಂತ್ರಿಯೊಂದಿಗೆ ಸೇರಿ ಉಪಾಯ ಮಾಡುತ್ತಾಳೆ.

ಓರ್ವ ವೈದ್ಯನನ್ನು ಕರೆಸಿ, ಆತನಿಗೆ ಹಣ ನೀಡಿ, ಸುಳ್ಳು ಹೇಳುವಂತೆ ಮಾಡುತ್ತಾರೆ. ರಾಣಿಗೆ ತೀವ್ರ ಅನಾರೋಗ್ಯ, ಅವರು ಹುಲಿ ಹಾಲು ಕುಡಿದರಷ್ಟೇ ಆರೋಗ್ಯವಾಗುತ್ತಾರೆ. ಇಲ್ಲದಿದ್ದರೆ, ಪ್ರಾಣಕ್ಕೆ ಹಾನಿಯಾಗಲಿದೆ ಎನ್ನುವಂತೆ ಹೇಳುತ್ತಾರೆ. ಮಂತ್ರಿ ಮಾತಿನಂತೆ ವೈದ್ಯ, ರಾಜನ ಬಳಿ ಹೋಗಿ ಈ ರೀತಿ ಸುಳ್ಳು ಹೇಳುತ್ತಾನೆ.

ಹುಲಿ ಹಾಲು ತರಲು ರಾಜ್ಯದ ಎಲ್ಲ ಸೈನಿಕರನ್ನೂ ಕಳುಹಿಸಲಾಗುತ್ತದೆ. ಎಲ್ಲರೂ ಖಾಲಿ ಕೈಯಲ್ಲಿ ವಾಪಸ್ ಬರುತ್ತಾರೆ. ಆಗ ಮಂತ್ರಿ ಮಣಿಕಂಠನನ್ನು ಕಳಿಸುವಂತೆ ಹೇಳುತ್ತಾನೆ. ಒಲ್ಲದ ಮನಸ್ಸಿನಿಂದ ರಾಜ ಮುರೂ ಕಣ್ಣುಗಳುಳ್ಳ ತೆಂಗಿನಕಾಯಿ ನೀಡಿ ಮಣಿಕಂಠನನ್ನು ಕಾಡಿಗೆ ಕಳುಹಿಸುತ್ತಾನೆ.

ಹೀಗೆ ಕಾಡಿಗೆ ಬಂದ ಮಣಿಕಂಠನಿಗೆ ಶಿವನ ಪಂಚಗಣಗಳು ಸಾಥ್ ನೀಡುತ್ತದೆ. ಆಗ ದೇವಲೋಕದಲ್ಲಿ ಮಹಿಷಿಯ ದುಷ್ಕೃತ್ಯಗಳ ಬಗ್ಗೆ ಮಣಿಕಂಠನಿಗೆ ಗೊತ್ತಾಗುತ್ತದೆ. ಅವನು ದೇವಲೋಕಕ್ಕೆ ಹೋಗಿ ಮಹಿಷಿಯನ್ನು ಭೂಮಿಗೆ ಬಿಸಾಕಿ, ಅವಳೊಂದಿಗೆ ಹೋರಾಡುತ್ತಾನೆ. ನಂತರ ಮಹಿಷಿಗೆ ತನ್ನ ತಪ್ಪಿನ ಅರಿವಾಗಿ, ಮರಣಕ್ಕೆ ಶರಣಾಗುತ್ತಾಳೆ.

ತದನಂತರ ಮತ್ತೆ ಕಾಡಿಗೆ ಬಂದ ಮಣಿಕಂಠನಿಗೆ ಶಿವ ದರ್ಶನ ನೀಡುತ್ತಾನೆ. ನಿನಗೆ ಹುಲಿ ಹಾಲು ತೆಗೆದುಕೊಂಡು ಹೋಗಲು ಇಂದ್ರ ಸಹಾಯ ಮಾಡುತ್ತಾನೆಂದು ಹೇಳುತ್ತಾನೆ. ಹೀಗೆ ಮಣಿಕಂಠ ಹುಲಿಯ ರೂಪದಲ್ಲಿರುವ ಇಂದ್ರನ ಮೇಲೆ ಸವಾರಿ ಮಾಡುತ್ತ, ಇನ್ನು ಕೆಲ ಹೆಣ್ಣು ಹುಲಿಗಳೊಂದಿಗೆ ಅರಮನೆಗೆ ಬರುತ್ತಾನೆ. ಆಗ ರಾಜನಿಗೆ ಮಣಿಕಂಠನ ದೈವೀಶಕ್ತಿಯ ಬಗ್ಗೆ ಅರಿವಾಗುತ್ತದೆ.

ಆಗ ಮಣಿಕಂಠ, ತಾನು ಭೂಮಿಗೆ ಬಂದ ಕಾರ್ಯ ಪೂರ್ಣವಾಯಿತು. ಈಗ ನಾನು ದೇವಲೋಕಕ್ಕೆ ಹೋಗುತ್ತೇನೆಂದು ಹೇಳುತ್ತಾನೆ. ಮಗನ ಹೆಸರಿನಲ್ಲೊಂದು ದೇವಸ್ಥಾನ ಕಟ್ಟಬೇಕೆಂಬ ಆಸೆಯನ್ನ ರಾಜ ವ್ಯಕ್ತಪಡಿಸುತ್ತಾನೆ. ಅದಕ್ಕೆ ಸೂಕ್ತ ಜಾಗ ಯಾವುದೆಂದು ಕೇಳುತ್ತಾನೆ. ಆಗ ಮಣಿಕಂಠ, ಶಬರಿ ರಾಮನಿಗಾಗಿ ತಪಸ್ಸನ್ನು ಆಚರಿಸಿದ ಸ್ಥಳಕ್ಕೆ ತನ್ನ ಶರ ಎಸೆಯುತ್ತಾನೆ. ಈ ಜಾಗದಲ್ಲಿ ತನ್ನ ದೇವಸ್ಥಾನ ಕಟ್ಟುವಂತೆ ಹೇಳುತ್ತಾನೆ. ಹೀಗೆ ಆ ಜಾಗದಲ್ಲಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನ ನಿರ್ಮಾಣವಾಗಿ, ನಂತರ ಅದು ಶಬರಿ ಮಲೈ ಎಂದು ಹೆಸರುವಾಸಿಯಾಯಿತು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author