ವಿವಾಹಿತರು ಯಾಕೆ ಕಾಲುಂಗುರ ಧರಿಸಬೇಕು..? ಬೆಳ್ಳಿ ಧರಿಸಿದರೇನು ಪ್ರಯೋಜನ..?

ಬೆಳ್ಳಿ ಅಂದ್ರೆ ಬೆಳಕು ಅಂತಾ ಹೇಳ್ತಾರೆ. ಈ ಬೆಳ್ಳಿ ಆಭರಣ ನೋಡೋಕ್ಕೂ ಚಂದವಲ್ಲದೇ, ಆರೋಗ್ಯಕ್ಕೂ ಉತ್ತಮ ಅಂತಾ ಹೇಳಲಾಗುತ್ತದೆ. ಅಲ್ಲದೇ, ಬೆಳ್ಳಿ ಧರಿಸುವವರಿಗೆ ಹೆಚ್ಚು ಸಿಟ್ಟು ಬರುವುದಿಲ್ಲ. ಅವರು ಪ್ರಶಾಂತವಾಗಿರುತ್ತಾರೆ ಅಂತಾ ಹೇಳಲಾಗುತ್ತದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಬೆಳ್ಳಿ ಚಂದ್ರನ ಪ್ರತಿಬಿಂಬ ಅಂತಾ ಹೇಳಲಾಗುತ್ತದೆ. ಮಾತು ಮಾತಿಗೂ ಸಿಟ್ಟು ಮಾಡಿಕೊಳ್ಳುವ, ದುಡುಕಿನ ಸ್ವಭಾವದವರಿಗೆ ಪರಿಹಾರವಾಗಿ ಬೆಳ್ಳಿ ಉಂಗುರ ಧರಿಸಲು ಹೇಳುತ್ತಾರೆ. ಯಾಕಂದ್ರೆ ಬೆಳ್ಳಿ ಆಭರಣ ಧರಿಸುವುದರಿಂದ ಸಮಾಧಾನದ ಸ್ವಭಾವ ನಮ್ಮ ಮೈಗೂಡುತ್ತದೆ ಅಂತಾ ಹೇಳಲಾಗುತ್ತದೆ.

ಮದುವೆ ಅನ್ನೋದು ಹೆಣ್ಣಿನ ಮತ್ತೊಂದು ಜೀವನದ ಶುರುವಾದ ಅಂತಾ ಹೇಳಲಾಗುತ್ತದೆ. ತನ್ನ ಮನೆಯಿಂದ ಬೇರೆಯವರ ಮನೆ ಬೆಳಗಲು ಹೋಗುವ ಹೆಣ್ಣಿಗೆ ತಾಳ್ಮೆ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಇದೇ ಕಾರಣಕ್ಕೆ ವಿವಾಹಿತೆಯಾದವರು ಕಾಲಿಗೆ ಬೆಳ್ಳಿ ಕಾಲುಂಗುರ ಮತ್ತು ಗೆಜ್ಜೆ ಹಾಕಲೇಬೇಕು ಅಂತಾ ಹೇಳಲಾಗುತ್ತದೆ. ಬೆಳ್ಳಿ ಧರಿಸುವುದರಿಂದ ಸಮಾಧಾನದ ಸ್ವಭಾವ ಹೆಚ್ಚಾಗುವುದರಿಂದ, ಆಕೆ ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗಲು ಅನುಕೂಲವಾಗುತ್ತದೆ ಅಂತಾ ಹೇಳಲಾಗುತ್ತದೆ.

ಇಷ್ಟೇ ಅಲ್ಲದೇ ಚಿಕ್ಕ ಮಗುವಿದ್ದಾಗಲಿಂದಲೇ ಮಕ್ಕಳಿಗೆ ಬೆಳ್ಳಿ ಬಟ್ಟಲು ಮತ್ತು ಬೆಳ್ಳಿ ಲೋಟದಲ್ಲಿ ಊಟ ತಿಂಡಿ, ಹಾಲು-ನೀರು ಕೊಟ್ಟರೆ ಆರೋಗ್ಯ ಉತ್ತಮವಾಗಿರುತ್ತದೆ, ಬುದ್ಧಿ ಚುರುಕಾಗುತ್ತದೆ, ಮಾನಸಿಕ ಆರೋಗ್ಯ ಒಳ್ಳೆಯದಿರುತ್ತದೆ ಅನ್ನೋ ನಂಬಿಕೆ ಇದೆ. ಚಿನ್ನಕ್ಕಿಂತ ಬೆಳ್ಳಿಗೆ ಕಡಿಮೆ ಬೆಲೆ ಇದ್ದರೂ, ಬೆಳ್ಳಿಯೇ ಉತ್ತಮ ಅಂತಾ ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿ ಕೆಲ ದೋಷಗಳಿದ್ದರೆ, ಅದಕ್ಕೆ ಪರಿಹಾರವಾಗಿ ಬೆಳ್ಳಿ ಧರಿಸಲು ಹೇಳುತ್ತಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author