ನಿಮಗೂ ಬಂದಿರಬಹುದು ಈ ಲಿಂಕ್, ಯಾವುದೇ ಕಾರಣಕ್ಕೂ ಓಪೆನ್ ಮಾಡ್ಬೇಡಿ..

ಹೊಸ ಹೊಸ ಸಿನಿಮಾ ಬಂದ್ರೆ ಅದನ್ನ ಪೈರಸಿ ಮಾಡಿ ಮೊಬೈಲ್‌ನಲ್ಲೇ ಹರಿಬಿಡೋ ಕಿಡಿಗೇಡಿಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಇನ್ನು ಕೆಲವರಿಗೆ ದುಡ್ಡು ಖರ್ಚು ಮಾಡದೇ, ಮೊಬೈಲ್‌ನಲ್ಲೇ ಸಿನಿಮಾ ನೋಡೋ ದುರಾಸೆ. ಇಂಥ ದುರುಸೆಗೆ ಬಲಿಯಾದ ಹಲವು ಮಂದಿ ಬ್ಯಾಂಕ್ ಖಾತೆಗೆ ಕನ್ನ ಬಿದ್ದಿದೆ. ಹೌದು ಕಳೆದೆರಡು ದಿನಗಳಿಂದ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ದಿ ಕಶ್ಮೀರಿ ಫೈಲ್ಸ್. ಎಲ್ಲಿ ನೋಡಿದರಲ್ಲಿ ಈ ಸಿನಿಮಾದ್ದೇ ಮಾತು.

ಸೆಲೆಬ್ರಿಟಿಗಳು, ರಾಜಕೀಯ ಗಣ್ಯರೆಲ್ಲ ಸಿನಿಮಾ ನೋಡಿ ಸೂಪರ್ ಎಂದಿದ್ದಾರೆ. ಇಂಥ ಸಿನಿಮಾ ನಾನೂ ನೋಡಬೇಕಲ್ಲ ಅನ್ನೋದು ಹಲವರ ಮನಸ್ಸಿನಲ್ಲಿದೆ. ಆದ್ರೆ ಅದಕ್ಕಾಗಿ ಹಣ ಖರ್ಚು ಮಾಡಬೇಕಲ್ಲ ಅನ್ನೋ ಬೇಸರನೂ ಹಲವರಿಗಿದೆ. ಇಂಥ ಜನರ ಮನಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಕಳ್ಳರು, ಒಂದು ಲಿಂಕ್ ಕ್ರಿಯೇಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಾಟ್ಸಪ್‌ನಲ್ಲಿ ಈ ಲಿಂಕ್ ಹರಿದಾಡುತ್ತಿದ್ದು, ಅದನ್ನ ಕ್ಲಿಕ್ ಮಾಡಿದ್ರೆ, ಬ್ಯಾಂಕ್ ಖಾತೆಗೆ ಕನ್ನ ಬೀಳತ್ತೆ.

ಈ ಲಿಂಕ್ ಓಪೆನ್ ಮಾಡಲು ಯಾವ ರೀತಿ ಯಾಮಾರಿಸಲಾಗಿದೆ ಅಂದ್ರೆ, ದಿ ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಹೆಚ್‌ಡಿ ಪ್ರಿಂಟ್‌ನಲ್ಲಿ ನೋಡಬೇಕೆಂದ್ರೆ ಈ ಲಿಂಕ್ ಕ್ಲಿಕ್ ಮಾಡಿ ಎಂದು ಹೇಳಲಾಗಿದೆ. ಇದರ ಆಸೆಗಾದ್ರೂ ಜನ ಈ ಲಿಂಕ್ ಕ್ಲಿಕ್ ಮಾಡ್ತಾರೆ ಅನ್ನೋದು ಸೈಬರ್ ಕಳ್ಳರ ಉದ್ದೇಶ. ಈ ಬಗ್ಗೆ ಪೊಲೀಸರು ಕೂಡ ಎಲ್ಲೆಡೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.

About The Author