ಈ ದೇವಸ್ಥಾನಕ್ಕೆ ಹೋದರೆ ಹುಲಿಗಳ ಜೊತೆ ಆಟವಾಡಬಹುದು..!

ನಾವು ನಿಮಗೆ ಪ್ರತಿದಿನ ಚಿತ್ರ ವಿಚಿತ್ರ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನ ನೀಡುತ್ತಲಿದ್ದೇವೆ. ಪ್ರಾಣಿ, ಪಕ್ಷಿ, ರಾಕ್ಷಸರು, ದುಷ್ಟರು ಇವರೆಲ್ಲರಿಗೂ ದೇವಸ್ಥಾನವಿರುವಂತೆ ಹುಲಿಗಳಿಗೂ ದೇವಸ್ಥಾನವನ್ನು ಕಟ್ಟಲಾಗಿದೆ. ವಿಚಿತ್ರ ಸಂಗತಿ ಅಂದ್ರೆ ಈ ದೇವಸ್ಥಾನದಲ್ಲಿ ಹುಲಿಗಳು ಆರಾಮಾಗಿ ತಿರುಗಾಡಿಕೊಂಡಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಈ ಹುಲಿಗಳ ದೇವಸ್ಥಾನವಿರುವುದು ಬ್ಯಾಂಕಾಕ್‌ನಲ್ಲಿ. ಇದು ಟೈಗರ್ ಟೆಂಪಲ್ ಅಂತಾ ಕರೆಸಿಕೊಳ್ಳುವ ಬೌದ್ಧ ದೇವಾಲಯ. ಇಲ್ಲಿ ಬುದ್ಧ ಬಿಕ್ಕುಗಳು ಹುಲಿಯೊಂದಿಗೆ ಕಾಲ ಕಳೆಯುತ್ತಾರೆ. ಅದರೊಂದಿಗೆ ಆಟವಾಡುತ್ತಾರೆ. ಅದನ್ನ ಮುದ್ದಿಸುತ್ತಾರೆ. ಅಷ್ಟೇ ಅಲ್ಲದೇ, ನೀವೇನಾದರೂ ಈ ದೇವಸ್ಥಾನಕ್ಕೆ ಹೋದರೆ, ನೀವೂ ಕೂಡ ಇಲ್ಲಿರುವ ಹುಲಿಗಳ ಜೊತೆ ಆಟವಾಡಬಹುದು. ಯಾಕಂದ್ರೆ ಈ ಹುಲಿಗಳು ಯಾರಿಗೂ ತೊಂದರೆ ಕೊಡುವುದಿಲ್ಲ.

ಈ ಹುಲಿಗಳ ದೇವಸ್ಥಾನ ಯಾಕೆ ಸ್ಥಾಪನೆಯಾಯಿತು ಅಂತಾ ನೋಡುವುದಾದರೆ, ಈ ಸ್ಥಳದ ಅಕ್ಕಪಕ್ಕದ ಊರಿನಲ್ಲಿ ಕಾಡು ಪ್ರಾಣಿಗಳ ಬೇಟೆ ಹೆಚ್ಚಾಗಿತ್ತು. ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಸಾಗಿಸುತ್ತಿದ್ದರು. ಇದನ್ನು ತಡೆಯಲೆಂದೇ ಬೌದ್ಧ ಬಿಕ್ಕುಗಳು ಕಾಡು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಹುಲಿ ದೇವಸ್ಥಾನ ಮಾಡಿ ಅಲ್ಲಿ ಸಾಕಲು ಶುರು ಮಾಡಿದರು.

ಆಗ ಇದೇ ಗ್ರಾಮದ ಜನರು ತಮಗೆ ಕಾಡಿನಲ್ಲಿ ಕಾಣ ಸಿಗುತ್ತಿದ್ದ ಹುಲಿಮರಿಗಳನ್ನು ಈ ದೇವಸ್ಥಾನಕ್ಕೆ ತಂದು ಬಿಟ್ಟು ಹೋಗುತ್ತಿದ್ದರು. ಹೀಗೆ ದೇವಸ್ಥಾನಕ್ಕೆ ಬಂದ ಹುಲಿಮರಿಗಳಿಗೆ ಬೌದ್ಧ ಬಿಕ್ಕುಗಳು ತರಬೇತಿ ನೀಡಲು ಆರಂಭಿಸಿದರು. ಹೀಗೆ ತರಬೇತಿ ನೀಡಿ ಕಾಡು ಪ್ರಾಣಿಗಳನ್ನ ಸಾಕು ಪ್ರಾಣಿಗಳ ರೀತಿ ಬೆಳೆಸಿದ್ದು, ಇದೇ ಕಾರಣಕ್ಕೆ ಹುಲಿಗಳು ಯಾರಿಗೂ ತೊಂದರೆ ಕೊಡದೇ ತಮ್ಮಷ್ಟಕ್ಕೆ ತಾವಿರುತ್ತಾರೆ.

ಇನ್ನು ಈ ಟೈಗರ್ ಟೆಂಪಲ್‌ನಲ್ಲಿ 150ಕ್ಕೂ ಹೆಚ್ಚು ಹುಲಿಗಳಿದೆ. ಇವುಗಳನ್ನು ನೋಡಲು, ಈ ದೇವಸ್ಥಾನಕ್ಕೆ ಭೇಟಿ ನೀಡಬೇಕು ಅಂದ್ರೆ ಪ್ರವೇಶ ಶುಲ್ಕ ಪಾವತಿಸಿ ಹೋಗಬೇಕು. ಇಲ್ಲಿನ ಹುಲಿಗಳು ಭಕ್ತರಿಗೆ ಏನು ಹಾನಿ ಮಾಡುವುದಿಲ್ಲವೆಂದು ಹೇಳಲಾಗುತ್ತದೆ ಆದರೂ ಭಕ್ತರು ತಮ್ಮ ಎಚ್ಚರದಿಂದಿರುವುದು ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author