ತುಲಾ ರಾಶಿಯವರ ಉತ್ತಮ ಮತ್ತು ಉತ್ತಮವಲ್ಲದ ಗುಣಗಳಿವು..

ಆಕರ್ಷಕ ವ್ಯಕ್ತಿತ್ವವುಳ್ಳ, ಯಾವಾಗಲೂ ನಗುತ್ತ ನಗಿಸುತ್ತ ಇರುವ ತುಲಾ ರಾಶಿಯವರ ಉತ್ತಮ ಮತ್ತು ಉತ್ತಮವಲ್ಲದ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮೊದಲನೇಯದಾಗಿ ತುಲಾ ರಾಶಿಯವರ ಉತ್ತಮ ಸ್ವಭಾವದ ಬಗ್ಗೆ ತಿಳಿಯೋಣ. ತುಲಾ ರಾಶಿಯವರು ನೋಡಲು ಆಕರ್ಷಕವಾಗಿದ್ದು, ಉತ್ತಮ ಮೈಕಟ್ಟನ್ನು ಹೊಂದಿರುತ್ತಾರೆ. ಅಲ್ಲದೇ ಇವರು ಉತ್ತಮ ವಾಕ್ಚಾತುರ್ಯ ಹೊಂದಿದ್ದು, ಜನ ಇವರ ಮಾತಿಗೆ ಮರಳಾಗುತ್ತಾರೆ. ಇವರ ಮಾತಿನಿಂದಲೇ ಇವರತ್ತ ಆಕರ್ಷಿತರಾಗುತ್ತಾರೆ. ಕುಟುಂಬಸ್ಥರಿಗೆ, ಬಾಳ ಸಂಗಾತಿಗೆ ಪ್ರೀತಿ ಕಾಳಜಿ ತೋರುವ ಸ್ವಭಾವ ಇವರದ್ದು.

ಇನ್ನು ಇವರಿಗೆ ಸಹಾಯ ಮಾಡುವ ಗುಣವಿದೆ. ಆದ್ರೆ ಇವರಿಂದ ಸಹಾಯ ಪಡದವರು ಇವರನ್ನು ಮರೆತುಬಿಡುತ್ತಾರೆ. ಅಲ್ಲದೇ ಕೆಲಸ ಮುಗಿದ ಬಳಿಕ, ಇವರ ಮೇಲೆ ದೂರುತ್ತಾರೆ. ಆದ್ರೂ ಕೂಡ ತುಲಾ ರಾಶಿಯವರು ಜನರನ್ನು ನಂಬುವುದು ಬಿಡುವುದಿಲ್ಲ. ಇವರು ಎಲ್ಲರನ್ನೂ ನಂಬುವುದರಿಂದಲೇ ಇವರಿಗೆ ಮೋಸ ಮಾಡುವವರು ಹೆಚ್ಚು. ಆದ್ರೆ ಅದನ್ನೆಲ್ಲ ಗಣನೆಗೆ ತೆಗೆದುಕೊಳ್ಳದ ಇವರು, ಜೀವನ ನಡೆಸಿಕೊಂಡು ಹೋಗುತ್ತಾರೆ.

ಯಾವುದಾದರೂ ಕೆಲಸವನ್ನು ಹಿಡಿದರೆ ಬಿಡದೇ ಮಾಡುವ ಸ್ವಭಾವದವರು ಇವರಾಗಿದ್ದು, ತಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಿಯೇ ಸಾಧಿಸುತ್ತಾರೆ. ಬೇರೆಯವರಿಗೆ ಕಷ್ಟವಾಗುವ ಕೆಲ ಕೆಲಸಗಳನ್ನ ಸುಲಭವಾಗಿ ಮಾಡಿ ಮುಗಿಸುವ ಚಾತುರ್ಯತೆ ಈ ರಾಶಿಯವರಿಗಿರುತ್ತದೆ. ನಾಯಕತ್ವದ ಗುಣವಿರುವ ಇವರು, ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ.

ಇನ್ನು ಉತ್ತಮವಲ್ಲದ ಗುಣಗಳು ಅಂದ್ರೆ ಸಿಟ್ಟಿನ ಗುಣ. ಇವರಿಗೆ ಅಷ್ಟು ಸುಲಭವಾಗಿ ಸಿಟ್ಟು ಬರುವುದಿಲ್ಲ. ಆದ್ರೆ ಸಿಟ್ಟು ಬಂದ್ರೆ ಮಾತ್ರ ಇವರಷ್ಟು ಕೆಟ್ಟವರು ಮತ್ತೊಬ್ಬರಿಲ್ಲ. ಕೊಂಚ ಹಠಮಾರಿ ಸ್ವಭಾವದವರಾದ ಇವರು, ಕೆಲವೊಮ್ಮೆ ಸಂಬಂಧಕ್ಕೂ ಬೆಲೆ ಕೊಡದ ರೀತಿ ವರ್ತಿಸಿ, ಮನೆಯವರ ಮನಸ್ಸಿಗೆ ನೋವುಂಟು ಮಾಡುತ್ತಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author