ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ಅದರದ್ದೇ ಆದ ಮಹತ್ವವಿದೆ. ತುಳಸಿ ಗಿಡ ಸಮೃದ್ಧವಾಗಿ ಬೆಳೆದಲ್ಲಿ, ಆ ಮನೆ ಕೂಡ ಸಮೃದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇಂಥ ತುಳಸಿ ಮಾಲೆಯನ್ನ ದೇವರಿಗೆ ಏಕೆ ಹಾಕಲಾಗುತ್ತದೆ..? ತುಳಸಿ ಮಾಲೆ ದೇವರಿಗೆ ಹಾಕುವುದರಿಂದ ಏನು ಲಾಭ ಎಂಬ ಬಗ್ಗೆ ತಿಳಿಯೋಣ ಬನ್ನಿ..

ಕೃಷ್ಣ, ಲಕ್ಷ್ಮೀಯ ಸ್ವರೂಪವೆಂದೇ ಹೇಳಲಾಗುವ ತುಳಸಿ ಎಲೆ ಪೂಜೇಗಷ್ಟೇ ಸೀಮಿತವಲ್ಲ, ಬದಲಾಗಿ ಆರೋಗ್ಯಕ್ಕೂ ಉತ್ತಮ. ಕೆಮ್ಮು – ಜ್ವರ ಬಂದಾಗ ತುಳಸಿ ಕಶಾಯ ಮಾಡಿ ಕುಡಿದರೆ, ಉತ್ತಮ ಆರೋಗ್ಯ ನಮ್ಮದಾಗಿರುತ್ತದೆ. ತುಳಸಿ ರಸವನ್ನ ಮೈ-ಕೈಗೆ ಲೇಪಿಸಿ ಸ್ನಾನ ಮಾಡುವುದರಿಂದ ಚರ್ಮ ರೋಗ ನಿವಾರಣೆಯಾಗುತ್ತದೆ. ಇಂಥ ಆರೋಗ್ಯಕರ ಗುಣಗಳ ಭಂಡಾರವನ್ನೇ ಹೊಂದಿರುವ ತುಳಸಿ ಎಲೆಯ ಮಾಲೆಯ ಮಹತ್ವ ಕೂಡ ವಿಶೇಷವಾಗಿದೆ.
ತುಳಸಿ ಮಾಲೆಯನ್ನ ಆಂಜನೇಯನಿಗೆ, ವರಾಹ ಸ್ವಾಮಿಗೆ, ನರಸಿಂಹ ಸ್ವಾಮಿ ಇತ್ಯಾದಿ ದೇವರಿಗೆ ಅರ್ಪಿಸಲಾಗುತ್ತದೆ. ಹೀಗೆ ತುಳಸಿ ಮಾಲೆಯನ್ನ ಅರ್ಪಿಸುವುದರಿಂದ ಆರೋಗ್ಯ, ನೆಮ್ಮದಿ, ಉನ್ನತಿ ಪ್ರಾಪ್ತಿಯಾಗುತ್ತದೆ, ದುಷ್ಟ ಶಕ್ತಿಗಳ ಪ್ರಭಾವವೇನಾದರೂ ಆಗಿದ್ದರೆ, ಅದರಿಂದ ಮುಕ್ತಿ ಸಿಗುತ್ತದೆ ಮತ್ತು ಮಾಟ ಮಂತ್ರಾದಿಗಳು ಮಾಡಿದ್ದರೆ, ಅದರ ಪ್ರಭಾವದಿಂದ ಮುಕ್ತಿ ಪಡೆಯಲು ಅನುಕೂಲವಾಗುತ್ತದೆ ಎಂಬ ನಂಬಿಕೆ ಇದೆ.
ಇನ್ನು ಪ್ರಸಾದವನ್ನ ದೇವರಿಗೆ ಅರ್ಪಿಸುವಾಗ ತುಳಸಿ ಎಲೆಯನ್ನ ಅದರ ಮೇಲೆ ಹಾಕಿ, ಪ್ರಸಾದವನ್ನ ನೈವೇದ್ಯ ಮಾಡಲಾಗುತ್ತದೆ. ಇದರಿಂದ ದೇವರಿಗೆ ನೈವೇದ್ಯ ಅರ್ಪಿಸುವುದರ ಜೊತೆಗೆ ಆ ಆಹಾರದಲ್ಲೇನಾದರೂ ನಕಾರಾತ್ಮಕ ಶಕ್ತಿ ಅಥವಾ ಕೀಟಾಣುಗಳು ಇದ್ದರೆ, ಅದು ನಾಶವಾಗುತ್ತದೆ ಎಂಬ ನಂಬಿಕೆ ಇದೆ.