ಕರ್ನಾಟಕದಲ್ಲಿ ತನ್ನ ವಿಭಿನ್ನ, ವಿಶಿಷ್ಟ ಆಚರಣೆಯಿಂದ ಹೆಸರಾದ ತುಳುನಾಡಿಗರಿಗೆ ಇಂದು ಆಟಿ ಅಮವಾಸ್ಯೆಯ ಸಂಭ್ರಮ. ಆಟಿ ಅಮವಾಸ್ಯೆಯ ವಿಶೇಷವೇನು..? ಈ ದಿನ ಏನೇನು ಮಾಡಲಾಗುತ್ತದೆ..? ಇದೆಲ್ಲದರ ಬಗ್ಗೆ ಇಂದು ಚಿಕ್ಕ ಮಾಹಿತಿ ನೀಡಲಿದ್ದೇವೆ.

ಆಟಿ ಅಮವಾಸ್ಯೆ. ತುಳು ನಾಡಿಗರಿಗೆ ಇದು ವಿಶೇಷ ದಿನ. ಶ್ರಾವಣ ಮಾಸವನ್ನ ತುಳುವರು ಆಟಿ ತಿಂಗಳು ಎಂದು ಹೇಳುತ್ತಾರೆ. ಈ ತಿಂಗಳು ಶುರುವಾಗುವ ಮುನ್ನ ಬರುವ ಅಮವಾಸ್ಯೆ, ಅಂದ್ರೆ ಆಷಾಢ ಅಮವಾಸ್ಯೆಯನ್ನ ಆಟಿ ಅಮವಾಸ್ಯೆ ಎನ್ನಲಾಗುತ್ತದೆ.
ಹಿಂದೂ ಧರ್ಮದಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗುವ ದಿನವೇ ಆಟಿ ಅಮವಾಸ್ಯೆ. ಈ ಅಮವಾಸ್ಯೆ ಕಳೆದರೆ ಶ್ರಾವಣ ಮಾಸ ಬರುತ್ತದೆ. ಶ್ರಾವಣದಲ್ಲಿ ನಾಗಪಂಚಮಿ, ಶ್ರೀಕೃಷ್ಣ ಜನ್ಮಾಷ್ಠಮಿ, ರಕ್ಷಾಬಂಧನ, ವರಮಹಾಲಕ್ಷ್ಮೀ ಪೂಜೆ, ಗಣೇಶ ಚತುರ್ಥಿ ಹೀಗೆ ಸಾಲು ಸಾಲು ಹಬ್ಬ ಶುರುವಾಗುತ್ತದೆ. ಇದರ ಪ್ರಾರಂಭವನ್ನ ಪವಿತ್ರ ದಿನವೆಂದು ಪರಿಗಣಿಸಿ ತುಳುವರು ಆಟಿ ಅಮವಾಸ್ಯೆಯ ಆಚರಣೆ ಮಾಡುತ್ತಾರೆ.
ಆಟಿ ಅಮವಾಸ್ಯೆಯ ವಿಶೇಷತೆ ಅಂದ್ರೆ ಆಯುರ್ವೇದ ಕಷಾಯ. ಈ ಕಷಾಯವನ್ನ ಇಂದು ಸೇವಿಸಿದರೆ ಅದರ ಶಕ್ತಿ ಹೆಚ್ಚು ಎನ್ನಲಾಗಿದ್ದು. ಈ ಕಶಾಯದ ಸೇವನೆಯಿಂದ ರೋಗ ರುಜಿನಗಳು ದೂರವಾಗುತ್ತದೆ ಎಂದು ಹೇಳಲಾಗಿದೆ.
ಹಾಳೆಯ ಮರದ ತೊಗಟೆಯ ಕಶಾಯವನ್ನ ಈ ದಿನ ಕುಡಿಯಲಾಗುತ್ತದೆ. ಈ ಕಷಾಯ ರುಚಿಯಲ್ಲಿ ಕಹಿಯಿದ್ದರೂ ಕೂಡ, ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗುತ್ತದೆ. ಇದನ್ನ ಕೆತ್ತೆ ಕಷಾಯ ಎನ್ನಲಾಗುತ್ತದೆ. ಹಾಳೆಯ ಮರದ ತೊಗಟೆಯ ಜೊತೆ ವಾಮ ಮತ್ತು ಕಾಳು ಮೆಣಸನ್ನು ಕೂಡ ಸೇರಿಸಲಾಗುತ್ತದೆ.
ಇನ್ನೊಂದು ವಿಶೇಷ ಅಂದ್ರೆ ಈ ಕಷಾಯವನ್ನ ಸೂರ್ಯೋದಯಕ್ಕೂ ಮುನ್ನ ಕುಡಿಯಲಾಗುತ್ತದೆ. ಬೆಳಗ್ಗಿನ ಜಾವ 4ರಿಂದ 5 ಗಂಟೆಯೊಳಗೆ ಶುಚಿರ್ಭೂತರಾಗಿ ಹಾಳೆಯ ಮರದ ತೊಗಟೆಯನ್ನು ಕಿತ್ತು ತಂದು, ಅದರ ಕಷಾಯ ಮಾಡಿ ಕುಟುಂಬದವರೆಲ್ಲ ಕುಡಿಯುವುದು ವಾಡಿಕೆ. ಇದಾದ ಬಳಿಕ ಬೆಳಗ್ಗಿನ ತಿಂಡಿಯಲ್ಲಿ ಮೆತ್ತನೆಯ ಗಂಜಿ ಮಾಡಿ ಕುಡಿಯುತ್ತಾರೆ.
ಅಲ್ಲದೇ ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ, ಸಂಡಿಗೆಯನ್ನ ಛಾವಣಿಯಿಂದ ಇಳಿಸಿ, ಸುಟ್ಟು ತಿನ್ನಲಾಗುತ್ತದೆ. ಅಲ್ಲದೇ ಗೇರುಬೀಜ, ಕಡಲೆ ಮುಂತಾದವುಗಳನ್ನ ಸುಟ್ಟು ತಿನ್ನಲಾಗುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.