ತ್ರಿಪುರಾ ರಾಜ್ಯದ ಉನಕೋಟಿಯಲ್ಲಿ ಸುಂದರ ವಿಗ್ರಹಗಳ ಕೆತ್ತನೆಯಿಂದ ಕೂಡಿದ ಬೆಟ್ಟಗಳಿದೆ. ಆದ್ರೆ ಇಲ್ಲಿನ ವಿಚಿತ್ರ ಸಂಗತಿಯೇನೆಂದರೆ, ಶಾಪಗ್ರಸ್ತದೇವರುಗಳು, ಈ ಬೆಟ್ಟಗಳಾಗಿ ಮಾರ್ಪಟ್ಟಿದ್ದಾರೆಂದು ಹೇಳಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉನಕೋಟಿಯಲ್ಲಿ ಒಂದು ಬೆಟ್ಟವಿದೆ. ಆ ಬೆಟ್ಟದಲ್ಲಿ ದೇವರ ವಿಗ್ರಹಗಳನ್ನು ಕೆತ್ತಲಾಗಿದೆ. ಈ ಬೆಟ್ಟಕ್ಕೆ ಮೆಟ್ಟಲಿಗುಳಿದ್ದು, ಮೆಟ್ಟಿಲೇರಿ ಹೋಗುತ್ತಿದ್ದಂತೆ ಹಲವು ದೇವರ ವಿಗ್ರಹಗಳು ನಿಮಗೆ ಕಾಣ ಸಿಗುತ್ತದೆ. ಇಲ್ಲಿನ ಪ್ರಮುಖ ದೇವರು ಅಂದ್ರೆ ಕಾಲಭೈರವ. ಈತನನ್ನೇ ಉನಕೋಟಿಶ್ವರ ಎಂದು ಕರೆಯಲಾಗುತ್ತದೆ.
ಪುರಾಣ ಕಥೆಗಳ ಪ್ರಕಾರ ಶಿವ ಕೆಲ ದೇವತೆಗಳನ್ನು ಕರೆದುಕೊಂಡು ಕಾಶಿಗೆ ಹೊರಟಿದ್ದನಂತೆ. ಈ ಸಂದರ್ಭದಲ್ಲಿ ದೇವತೆಗಳು ರಾತ್ರಿ ಇದೇ ಉನಕೋಟಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಈ ವೇಳೆ ಶಿವ, ನಾಳೆ ಬೆಳಗ್ಗಿನ ಜಾವ ಎಲ್ಲರೂ ಶುಚಿರ್ಭೂತರಾಗಿ ಸಿದ್ಧರಾಗಿರಬೇಕು. ಇಲ್ಲವಾದಲ್ಲಿ ನೀವೇಲ್ಲ ಇಲ್ಲೇ ಉಳಿದುಕೊಳ್ಳುತ್ತೀರಿ ಎಂದು ಹೇಳಿದನಂತೆ. ಇದಕ್ಕೆ ಒಪ್ಪಿಗೆ ಸೂಚಿಸಿದ ದೇವತೆಗಳು ನಿದ್ದೆಗೆ ಜಾರಿದರು.
ಮರುದಿನ ಪ್ರಾತಃಕಾಲದಲ್ಲಿ ಶಿವ ಎದ್ದು ಹೊರಟಾಗ ಎಲ್ಲರೂ ಮಲಗಿದ್ದರಂತೆ. ದೇವತೆಗಳ ಸೋಮಾರಿತನ ಕಂಡು ಕೋಪಗೊಂಡ ಶಿವ, ಅವರೆಲ್ಲ ಶಾಶ್ವತವಾಗಿ ಅಲ್ಲೇ ಉಳಿದುಕೊಳ್ಳಲಿ ಎಂದು ಶಾಪ ಹಾಕಿ, ಕೈಲಾಸಕ್ಕೆ ಹೋದನಂತೆ. ಇದೇ ಕಾರಣಕ್ಕೆ ಉನಕೋಟಿಯಲ್ಲಿ ದೇವತೆಗಳು ಬೆಟ್ಟದಲ್ಲಿ ಶಿಲೆಯ ರೂಪದಲ್ಲಿ ಶಾಪಗ್ರಸ್ತರಾಗಿ ನೆಲೆನಿಂತಿದ್ದಾರೆನ್ನಲಾಗಿದೆ.
ಇನ್ನು ಈ ಬೆಟ್ಟಕ್ಕೆ ಉನಕೋಟಿ ಎಂಬ ಹೆಸರು ಏಕೆ ಬಂತು ಅಂತಾ ನೋಡುವುದಾದರೆ ಅದಕ್ಕೆ ಇನ್ನೊಂದು ಕಥೆ ಇದೆ. ಓರ್ವ ಶಿಲ್ಪಿಗೆ ಶಿವ-ಪಾರ್ವತಿಯೊಂದಿಗೆ ಕೈಲಾಸಕ್ಕೆ ಹೋಗುವ ಆಸೆಯಿತ್ತು. ಆಗ ಶಿವನಿಗಾಗಿ ತಪಸ್ಸು ಮಾಡಿ, ಶಿವ ಬಂದಾಗ ತನ್ನ ಆಸೆ ಹೇಳುತ್ತಾನೆ. ಆಗ ಶಿವ ನೀನು ನಮ್ಮೊಂದಿಗೆ ಕೈಲಾಸಕ್ಕೆ ಬರುವುದಾದರೆ, ಒಂದು ರಾತ್ರಿಯಲ್ಲಿ ಕೋಟಿ ದೇವರ ವಿಗ್ರಹಗಳನ್ನು ಈ ಬೆಟ್ಟದಲ್ಲಿ ಕೆತ್ತಬೇಕು ಎಂದು ಹೇಳುತ್ತಾನೆ.
ಶಿವನ ಷರತ್ತಿಗೆ ಒಪ್ಪಿದ ಶಿಲ್ಪಿ ಬೆಳಗ್ಗಾಗುವುದರೊಳಗೆ ಶಿಲ್ಪಗಳನ್ನು ಕೆತ್ತುತ್ತಾನೆ. ಆದ್ರೆ ಅದು ಒಂದು ಕೋಟಿಯಾಗುವುದಕ್ಕೆ ಒಂದು ವಿಗ್ರಹ ಮಾಡುವುದು ಬಾಕಿ ಇರುತ್ತದೆ. ಹಾಗಾಗಿ ಈ ಸ್ಥಳಕ್ಕೆ ಉನಕೋಟಿ ಎಂದು ಹೆಸರು ಬರುತ್ತದೆ. ಉನಕೋಟಿ ಎಂದರೆ, ಒಂದು ಕೋಟಿಗೆ ಇನ್ನು ಒಂದು ಅಂಕ ಬಾಕಿ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




