ವರಮಹಾಲಕ್ಷ್ಮೀ ಹಬ್ಬದಂದು ಅನುಸರಿಸಬೇಕಾದ ಕ್ರಮಗಳೇನು ಗೊತ್ತಾ..?

ಶ್ರಾವಣ ಮಾಸದ ಶುಕ್ಲಪಕ್ಷ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಇನ್ನೆರಡು ದಿನಗಳಲ್ಲೇ ಈ ಬಾರಿಯ ಶ್ರಾವಣ ಮಾಸದ ವರಮಹಾಲಕ್ಷ್ಮೀ ಪೂಜೆ ಇದೆ. ಅದಕ್ಕಾಗಿ ಪೂಜೆ ಮಾಡುವ ವೇಳೆ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ವರಮಹಾಲಕ್ಷ್ಮೀ ಪೂಜೆಯನ್ನ ಕೆಲವರು ಬ್ರಾಹ್ಮಿ ಮುಹೂರ್ತ ಅಂದ್ರೆ ಸೂರ್ಯ ಉದಯಿಸುವ ಮುನ್ನ ಮಾಡ್ತಾರೆ. ಇನ್ನು ಕೆಲವರು ಸಂಜೆ ದೀಪ ಹಚ್ಚುವ ವೇಳೆ ಮಾಡ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಹೇಗೆ ಮಾಡೋದು ಅನ್ನುವ ಪ್ರಶ್ನೆ ನಿಮ್ಮದಾಗಿದ್ರೆ, ಬೆಳಗ್ಗಿನ ಜಾವ 3.30ಕ್ಕೆ ಎದ್ದು ಶುಚಿರ್ಭೂತರಾಗಿ ದೇವರಿಗೆ ದೀಪ ಇಟ್ಟು, ಹಣ್ಣು ಹಂಪಲು ಅಥವಾ ಕಲ್ಲುಸಕ್ಕರೆ, ಬೆಲ್ಲ ಇತ್ಯಾದಿಗಳನ್ನ ನೈವೇದ್ಯದ ರೂಪದಲ್ಲಿಟ್ಟು, ದೇವಿ ಪುಸ್ತಕ ಓದಿ ಕೂಡ ವರಮಹಾಲಕ್ಷ್ಮೀ ಪೂಜೆ ಮಾಡಬಹುದು. ನಂತರ ಪ್ರಸಾದ ತಯಾರಿಸಿ ನೈವೇದ್ಯ ಮಾಡಬಹುದು.

ಆದ್ರೆ ಯಮಗಂಡ ಕಾಲ ಮತ್ತು ರಾಹುಕಾಲದಲ್ಲಿ ಪೂಜೆ ಮಾಡುವುದು ನಿಷೇಧವಿದೆ. ಈ ಕಾಲದಲ್ಲಿ ಪೂಜೆ ಸಲ್ಲಿಸಿದರೆ ಪೂಜೆ ಫಲ ಸಿಗುವುದಿಲ್ಲ.

ಇನ್ನು ವರಮಹಾಲಕ್ಷ್ಮೀ ವೃತ ಮಾಡುವಾಗ ಬೇಕಾಗಿರುವುದು ಭಕ್ತಿಯೇ ಹೊರತು ಆಡಂಬರವಲ್ಲ. ಕೆಲವರು ವರಮಹಾಲಕ್ಷ್ಮೀ ಹಬ್ಬವನ್ನ ಅದ್ಧೂರಿಯಾಗಿ ಆಚರಿಸುತ್ತಾರೆ. ದೇವಿಗೆ ಆಭರಣಗಳಿಂದ ಅಲಂಕರಿಸಿ, ಹತ್ತು ಹಲವು ತರಹದ ಹಣ್ಣುಗಳನ್ನ ನೈವೇದ್ಯಕ್ಕಿಟ್ಟು, ಸಾವಿರಾರು ರೂಪಾಯಿಯ ಸೀರೆ ಉಡಿಸಿ, ಭಕ್ಷ ಭೋಜನಾದಿಗಳನ್ನು ಮಾಡಿ ಪೂಜೆ ಮಾಡುತ್ತಾರೆ. ಹೀಗೆ ಮಾಡಿದ್ದಲ್ಲಿ ನಿಮ್ಮ ಪೂಜೆ ದೃಷ್ಟಿ ಬಿದ್ದು, ಮತ್ತೆ ವಿಜೃಂಭಣೆಯ ಪೂಜೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಭಕ್ತಿ ವಿಜೃಂಭಣೆಯಾಗಿದ್ದು, ಪೂಜೆ ಸಿಂಪಲ್ ಆಗಿರಲಿ.

ಇನ್ನು ಕಲಶ ಕೂರಿಸುವಾಗ ಅದರಲ್ಲಿ ಚಿನ್ನ ಹಾಕುವುದಕ್ಕೂ ಮುನ್ನ ಅದನ್ನ ಹಾಲಿನಿಂದ ಅಥವಾ ಅರಿಶಿನ ನೀರಿನಿಂದ ಸ್ವಚ್ಛಗೊಳಿಸಬೇಕು.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

About The Author