ಗಣಪತಿಯ ವಾಹನ ಇಲಿ, ಸುಬ್ರಹ್ಮಣ್ಯನ ವಾಹನ ನವಿಲು, ಶನಿಯ ವಾಹನ ಕಾಗೆ ಅಂತೆಯೇ ಶಿವನ ವಾಹನ ನಂದಿ. ಆದರೆ ಶಿವನ ಕುತ್ತಿಗೆಯಲ್ಲಿ ಹಾವಿರಲು ಕಾರಣವೇನು ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಶಿವನ ಕುತ್ತಿಗೆಯಲ್ಲಿರುವ ಹಾವು ನಾಗರಾಜ ವಾಸುಕಿ. ಇನ್ನು ವಾಸುಕಿ ಶಿವನ ಕುತ್ತಿಗೆ ಸೇರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ, ವಾಸುಕಿ ಶಿವನನ್ನು ಭಕ್ತಿಯಿಂದ ಪೂಜಿಸುತ್ತಿದ್ದ, ಇವರ ಭಕ್ತಿಗೆ ಮೆಚ್ಚಿದ ಶಿವ, ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳುತ್ತಾನೆ. ಇದಕ್ಕೆ ಉತ್ತರಿಸಿದ ವಾಸುಕಿ, ಸದಾ ನಿನ್ನೊಂದಿಗೆ ಇರುವಂತೆ ಮಾಡು ಎನ್ನುತ್ತಾನೆ. ಆಗ ಶಿವ ವಾಸುಕಿಯನ್ನ ತನ್ನ ಕುತ್ತಿಗೆಗೆ ಹಾಕಿಕೊಂಡು, ವಾಸುಕಿಯ ಆಸೆ ಈಡೇರಿಸುತ್ತಾನೆ.
ಇನ್ನೊಂದು ಕಥೆಯ ಪ್ರಕಾರ, ಸಮುದ್ರ ಮಥನದ ವೇಳೆ ಉದ್ಭವವಾದ ವಿಷವನ್ನ ಕುಡಿದು ಶಿವ ವಿಷಕಂಠನೆನ್ನಿಸಿಕೊಳ್ಳುತ್ತಾನೆ. ಆದರೆ ಶಿವನೊಟ್ಟಿಗೆ ವಾಸುಕಿ ಕೂಡ ವಿಷವನ್ನ ಕುಡಿಯುತ್ತಾನೆ. ಈ ವೇಳೆ ವಾಸುಕಿಯ ನಿಸ್ವಾರ್ಥ ಭಕ್ತಿಗೆ ಮೆಚ್ಚಿದ ಶಿವ, ಆತನ್ನನು ತನ್ನೊಂದಿಗೆ ಇರಿಸಿಕೊಳ್ಳುತ್ತಾನೆ.
ಇನ್ನೊಂದು ಕಥೆಯ ಪ್ರಕಾರ ವಾಸುಕಿಗೆ ಯುದ್ಧಾಹ್ವಾನಗಳು ಬರುತ್ತಿರುತ್ತದೆ. ಇದರಿಂದ ಬೇಸತ್ತ ವಾಸುಕಿ, ಶಿವನಲ್ಲಿ ತನ್ನ ಕಷ್ಟ ಪರಿಹರಿಸು, ನನಗೆ ಯಾರೊಂದಿಗೂ ಯುದ್ಧ ಮಾಡಲು ಇಷ್ಟವಿಲ್ಲ ಎನ್ನುತ್ತಾನೆ. ಅದಕ್ಕೆ ಶಿವ ನೀನು ಕೈಲಾಸಕ್ಕೆ ಬಾ, ಅಲ್ಲಿ ನಿನಗೆ ಯಾರೂ ತೊಂದರೆ ಕೊಡುವುದಿಲ್ಲ. ನೀನು ನನ್ನ ಗಣಗಳೊಂದಿಗೆ ಇರು ಎನ್ನುತ್ತಾನೆ. ಆದ್ರೆ ಕೈಲಾಸದಲ್ಲಿ ಚಳಿ ಇರುವ ಕಾರಣ ವಾಸುಕಿ, ಶಿವ ಎಲ್ಲಿ ಹೋಗುತ್ತಾನೋ ಅಲ್ಲೇ ತಿರುಗಾಡುತ್ತ, ತನ್ನ ಕಷ್ಟವನ್ನ ಶಿವನಿಗೆ ಅರ್ಥ ಮಾಡಿಸುತ್ತಾನೆ. ಆಗ ಶಿವ, ಚಳಿಯಿಂದ ನಿನಗಷ್ಟು ಕಷ್ಟವಾದರೆ ನೀನು ನನ್ನ ಕತ್ತಿನ ಬಳಿ ಇರು ಎಂದು ವಾಸುಕಿಯನ್ನ ತನ್ನ ಕುತ್ತಿಗೆಗೆ ಸುತ್ತಿಕೊಳ್ಳುತ್ತಾನೆ.
ಇನ್ನು ಯಾರು ಈ ವಾಸುಕಿ ಅಂದ್ರೆ, ಕಶ್ಯಪ ಮುನಿಗಳ ಎರಡನೇ ಮಗ. ಮೊದಲನೇಯ ಮಗ ಆದಿಶೇಷ. ಈ ಆದಿಶೇಷನೇ ವಿಷ್ಣುವಿಗೆ ಹಾಸಿಗೆಯಾಗಿರುವುದು.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ