ಈ ಭಂಗಿ ಸೇದುವವರು, ಗಾಂಜಾ ಸೇವಿಸುವವರನ್ನ ವಿರೋಧಿಸಿದ್ರೆ, ಅವ್ರು ಹೇಳೋದು ಒಂದೇ ಮಾತು, ಇದು ಶಿವನ ಪ್ರಸಾದ ಅಂತಾ. ಆದ್ರೆ ಅವರಿಗೆ ಈ ವಿಷಯದ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇರುವುದೇ ಇಲ್ಲ. ಯಾಕಂದ್ರೆ ಭಾಂಗ್ ಶಿವನ ಪ್ರಸಾದ ಹೌದು. ಆದ್ರೆ ಅವನು ಯಾಕೆ ಅದನ್ನ ಸೇವಿಸಿದಾ ಅನ್ನೋದಕ್ಕೆ ಒಂದು ಕಥೆ ಇದೆ. ಆ ಕಥೆ ಕೇಳೋಣ ಬನ್ನಿ..
ಸಮುದ್ರ ಮಂಥನದ ಸಮಯದಲ್ಲಿ ಶಿವ ಹಾಲಾಹಲವನ್ನು ಕುಡಿದಾಗ, ಅವನ ಕಂಠ ನೀಲಿಯಾಗಿದ್ದಕ್ಕೆ, ನೀಲಕಂಠನೆಂದು ಬಿರುದು ಪಡೆದ. ಅದು ವಿಷವಾದ ಕಾರಣ, ವಿಷಕಂಠನೆಂದು ಕೂಡ ಶಿವನನ್ನು ಕರೆಯಲಾಯಿತು. ಶಿವನ ದೇಹದಲ್ಲಿ ಬೆಂಕಿ ಬಿದ್ದ ಹಾಗೆ ಆಗಲಾರಂಭಿಸಿತು. ಗಂಟಲಿಗೆ ಸೇರಿದ ವಿಷ, ದೇಹ ಸೇರಬಾರದೆಂಬ ಕಾರಣಕ್ಕೆ, ಪಾರ್ವತಿ ಶಿವನಿಗೊಂದು ಔಷಧಿಯನ್ನು ಕುಡಿಸಿದಳು. ಆ ಔಷಧವೇ ಗಾಂಜಾ.
ಗಾಂಜಾದಿಂದ ಔಷಧಿ ತಯಾರಿಸಿ, ಕುಡಿಸಿದ ಮೇಲೆ ವಿಷ ಶಿವನ ದೇಹ ಸೇರದೆ ಹೋಯಿತು. ಯಾವುದೇ ಪುರಾಣ, ಕಥೆಗಳಲ್ಲಿ ಶಿವ ಗಾಂಜಾ ಸೇದುತ್ತಾನೆಂದು ಹೇಳಲಿಲ್ಲ. ಆದರೆ ಕೆಲವು ನಾಗಾಸಾಧುಗಳು ಭಾಂಗ್ ಸೇವಿಸುವುದು, ಶಿವ ಪ್ರಸಾದವೆಂದು ಹೇಳುತ್ತಾರೆ.