ಸಕಲ ಕಷ್ಟ ನಿವರಣೆಗೆ, ಸಿದ್ಧಿವಿನಾಯಕನ ಈ ಮಂತ್ರ ಪಠಿಸಿ..!

ಸಕಲ ಕಷ್ಟ ನಿವಾರಕ, ನಿರ್ವಿಘ್ನವಾಗಿ ಕಾರ್ಯಸಿದ್ಧಿಗೊಳಿಸೋ ವಿಘ್ನ ವಿನಾಯಕ. ಪ್ರಥಮ ಪೂಜಿತ, ಪ್ರಥಮ ವಂದಿತನಾಗಿರುವ ಶ್ರೀ ಮಹಾಗಣಪತಿ, ಭಕ್ತರ ಪ್ರತೀ ಕೋರಿಕೆಯನ್ನೂ ಈಡೇರಿಸುವ ದೇವಾದಿದೇವ. ನೀವೂ ಕೂಡ ಇಂದು ನಾವು ಹೇಳುವ ಮಂತ್ರವನ್ನ ಪ್ರತಿದಿನ ಭಕ್ತಿಪೂರ್ವಕವಾಗಿ ಹೇಳಿದರೆ, ನಿಮ್ಮ ಕೋರಿಕೆಯನ್ನ ಕೂಡ ಆ ಮಹಾಗಣಪತಿ ಈಡೇರಿಸುತ್ತಾನೆ. ಹಾಗಾದ್ರೆ ಯಾವುದು ಆ ಶ್ಲೋಕ ಅನ್ನೋದನ್ನ ನೋಡೋಣ.

Karnataka TV Contact

ನಾವು ಮಾಡುವ ಕೆಲಸ ನಿರ್ವಿಘ್ನವಾಗಿ ನಡಿಯಲಿ, ಆ ಕೆಲಸದಲ್ಲಿ ನಮಗೆ ಯಶಸ್ಸು ಸಿಗಲಿ ಎಂದು ನಾವು ಗಣಪತಿಗೆ ಪ್ರಥಮ ಪೂಜೆ ಸಲ್ಲಿಸುತ್ತೇವೆ. ಭಕ್ತಿಯಿಂದ ಬೇಡಿದರೆ, ಮಹಾಗಣಪತಿ ಎಲ್ಲರ ಕೋರಿಕೆಯನ್ನೂ ಈಡೇರಿಸುತ್ತಾನೆ. ಹೀಗೆ ದೇವರಲ್ಲಿ ಪ್ರಾರ್ಥಿಸುವ ಜೊತೆಗೆ ಪ್ರತಿದಿನ ಗಣಪತಿಯ ಈ ಮಂತ್ರವನ್ನ ಹೇಳಿದರೆ, ಉತ್ತಮ ಜೀವನ ನಿಮ್ಮದಾಗುತ್ತದೆ. ಯಾವುದು ಆ ಮಂತ್ರವೆಂದರೆ,

ಓಂ ಗಂ ಗಣಪತಯೇ ನಮಃ

ಈ ಮಂತ್ರವನ್ನ ಪ್ರತಿದಿನ 108 ಬಾರಿ ಜಪಿಸಬೇಕು. ಪ್ರತಿದಿನ ಸ್ನಾನಾದಿಗಳನ್ನ ಮಾಡಿ, ದೇವರ ಮುಂದೆ ಕುಳಿತು, ಭಕ್ತಿಯಿಂದ ಈ ಮಂತ್ರವನ್ನ 108 ಬಾರಿ ಪಠಿಸಿದ್ದಲ್ಲಿ, ನಿಮ್ಮ ಮನೆಯ ಅಭಿವೃದ್ಧಿಯಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ. ಕಲಹಗಳು ಕಡಿಮೆಯಾಗಿ ಉತ್ತಮ ಜೀವನ ನಿಮ್ಮದಾಗುತ್ತದೆ.

ಇನ್ನು ಹಿರಿಯರು ಪ್ರತೀ ಮಂಗಳವಾರ ಗಣಪತಿಯ ದೇವಸ್ಥಾನಕ್ಕೆ ಹೋಗಿ ಅಂತಾ ಹೇಳುವುದಕ್ಕೂ ಒಂದು ಕಾರಣವಿದೆ. ಕೆಲವರು ಹೀಗೆ ಹೇಳಿದಾಗ, ದೇವಸ್ಥಾನಕ್ಕೇ ಏಕೆ ಹೋಗಬೇಕು..? ದೇವರು ಎಲ್ಲೆಎಲ್ಲೂ ಇದ್ದಾನಲ್ಲ.. ಎಂದು ವಾದಿಸುತ್ತಾರೆ. ಆದ್ರೆ ಆಯಾ ದೇವರ ದಿನದಂದು ಆ ದೇವಸ್ಥಾನದಲ್ಲಿ ಸಕಾರಾತ್ಮಕ ಶಕ್ತಿಯ ಪರಿಣಾಮ ಬೇರೆ ದಿನಗಳಿಗಿಂತಲೂ ಹೆಚ್ಚಿರುತ್ತದೆ. ಈ ಸಮಯದಲ್ಲಿ ನಾವು ದೇವಸ್ಥಾನಕ್ಕೆ ಹೋಗುವುದರಿಂದ ಆ ಪರಿಣಾಮ ನಮ್ಮ ಮೇಲೂ ಆಗಿ, ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಹಾಯವಾಗುತ್ತದೆ. ಆದ್ದರಿಂದ ಪ್ರತೀ ಮಂಗಳವಾರ ಗಣಪತಿಯ ದೇವಸ್ಥಾನಕ್ಕೆ ಹೋಗಿಬರುವುದು ಉತ್ತಮ.

ಇನ್ನು ದೇವಸ್ಥಾನಕ್ಕೆ ಹೋಗುವಾಗ ಖಾಲಿ ಕೈಯಲ್ಲಿ ಎಂದಿಗೂ ಹೋಗಕೂಡದು, ನಿಮಗೆ ಹಣ್ಣು ಕಾಯಿ ಊದುಬತ್ತಿ ಏನು ತೆಗೆದುಕೊಂಡು ಹೋಗಲಾಗದಿದ್ದರೂ, ಗಣಪತಿಗೆ ಇಷ್ಟವಾಗುವ ಗರಿಕೆಯನ್ನಾದರೂ ತೆಗೆದುಕೊಂಡು ಹೋಗಿ. ಏಕೆಂದರೆ, ಏಕದಂತನಿಗೆ ಸಕಲ ನೈವೇದ್ಯಕ್ಕಿಂತಲೂ ಗರಿಕೆಯ ಅರ್ಪಣೆ ಶ್ರೇಷ್ಠವೆಂಬ ಮಾತಿದೆ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911

About The Author