Sunday, September 8, 2024

Latest Posts

ಕಾಂಗ್ರೆಸ್ ಪಕ್ಷದ ವಿನೂತನ ಪ್ರತಿಭಟನೆ..!

- Advertisement -

state news

ಮೈಸೂರು(ಫೆ.20): ಈಗಾಗಲೇ ರಾಜ್ಯ ರಾಜಕಾರಣದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಯುತ್ತಿರುವುದು ಸುದ್ದಿಯಾಗುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಸದಸ್ಯರು ಮೈಸೂರಿನ ಜೆ.ಕೆ. ಮೈದಾನದ ಗೋಡೆಗಳ ಮೇಲೆ ಬಿಜೆಪಿ ಸುಳ್ಳು ಭರವಸೆಗಳು ಸಾಕಪ್ಪ ಸಾಕು, ಕಿವಿ ಮೇಲೆ ಹೂವು ಪೋಸ್ಟರ್‌ಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಸುಳ್ಳು ಭರವಸೆಗಳು ಸಾಕಪ್ಪ ಸಾಕು, ಪ್ರಣಾಳಿಕೆಯ ಶೇ.90 ಭರವಸೆಗಳನ್ನು ಹಾಗೂ 2023-23 ಬಜೆಟ್‌ ನ ಶೇ.56 ರಷ್ಟು ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪ ಮಾಡಿದರು. ಈ ವೇಳೆ ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಆಡಳಿತ ನಡೆಸಿ 8 ವರ್ಷಗಳಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕಿವಿ ಮೇಲೆ ಹೂವ ಇಡುವ ಕೆಲಸ ಮಾಡುತ್ತಿದ್ದಾರೆ ಎಂದರು.

- Advertisement -

Latest Posts

Don't Miss