ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಿಹಿಸುದ್ದಿ…!

Technology News:

ಇನ್ಸ್ಟಾಗ್ರಾಮ್ ಬಲಕೆದಾರರಿರಿಗೆ ಇದೀಗ ಕಂಪೆನಿ ಸಿಹಿ ಸುದ್ದಿ ಒಂದನ್ನು ನೀಡಿದೆ. ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಪೋಸ್ಟ್‌ಗಳನ್ನು ರಿಪೋಸ್ಟ್‌ ಮಾಡಲು ಅನುಮತಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಹೊಸ ಬಟನ್‌ ಪರಿಚಯಿಸಲಿದ್ದು, ಶೀಘ್ರದಲ್ಲೇ ಇದು ಇನ್‌ಸ್ಟಾಗ್ರಾಮ್‌ ಫ್ಲಾಟ್ ಫಾರ್ಮ್ ನಲ್ಲಿ ಲಭ್ಯವಾಗಲಿದೆ. ರಿಪೋಸ್ಟ್‌ಗಳು ಬಳಕೆದಾರರು ತಮ್ಮ ಹಿಂಬಾಲಕರೊಂದಿಗೆ ಹಂಚಿಕೊಳ್ಳಲು ಬಯಸುವ ಪೋಸ್ಟ್‌ಗಳನ್ನು ನೇರವಾಗಿ ಅವರ ಹೋಮ್ ಫೀಡ್‌ಗಳಿಗೆ ಕಳುಹಿಸಲು ಅನುಮತಿಸುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಬಯಸುವ ಪೋಸ್ಟ್‌ ರಿಪೋಸ್ಟ್‌ ಮಾಡುವುದಕ್ಕೆ ಹೊಸ ಫೀಚರ್‌ ಅನುಕೂಲ ಮಾಡಿಕೊಡಲಿದೆ. ಇದು ನಿಮ್ಮ ಪ್ರೊಫೈಲ್‌ನಲ್ಲಿ ನೀವು ಎಲ್ಲಿಯವರೆಗೆ ಬಯಸುತ್ತೀರೋ ಅಲ್ಲಿಯವರೆಗೆ ರಿಪೋಸ್ಟ್‌ ಉಳಿಯುವಂತೆ ಮಾಡಲಿದೆ. ಸದ್ಯ ಈ ಹೊಸ ಫೀಚರ್‌ ಕುರಿತು ಸೊಶೀಯಲ್‌ ಮೀಡಿಯಾ ವಿಶ್ಲೇಷಕ ಮ್ಯಾಟ್ ನರ‍್ರಾ ಅವರು ಮಾಹಿತಿ ನೀಡಿದ್ದಾರೆ. ಟ್ವೀಟ್‌ನಲ್ಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳು ‘ರಿಪೋಸ್ಟ್‌ಗಳು’ ಟ್ಯಾಬ್ ಅನ್ನು ಸಹ ಪಡೆಯುತ್ತವೆ ಎಂದು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಘೋಷಣೆ…!

ಸಿಗುತ್ತಿಲ್ಲ ಜಿಯೋ ನೆಟ್ ವರ್ಕ್…?!

ರಿಯಲ್ ಮೀ ಹೊಸ ಫೋನ್…! ಬೆಲೆಯಲ್ಲೂ, ಕಲರ್ ನಲ್ಲೂ ಶೈನಿಂಗ್ …!

About The Author