Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದಾರೆ.
ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ಇರುವ 1 ವಿಶೇಷ ಅಂದ್ರೆ ರಾಜ್. ಬಿ. ಶೆಟ್ಟಿ ಅವರಿಗೆ ವಿಗ್ ಹಾಕಿಸಿ, ಪಾತ್ರ ಮಾಡಿಸಿರುವುದು. ಈ ಮುಂಚೆ ರಾಜ್ ಅವರು ವಿಗ್ ಹಾಕಿ ಪಾತ್ರ ಮಾಡುವ ಬಗ್ಗೆ ಮಾತನಾಡಿದ್ದರು. ನನಗೆ ವಿಗ್ ಹಾಕಿಸಿ, ಪಾತ್ರ ಮಾಡಿಸಿದ್ರೆ, ನಾನು ವಿಗ್ ಸಂಭಾಳಿಸುವುದರ ಜತೆಗೆ ಅಭಿನಯ ಮಾಡಬೇಕಾಗುತ್ತದೆ ಎಂದಿದ್ದರು.
ಈ ಬಗ್ಗೆ ಮಾತನಾಡಿರುವ ದುನಿಯಾ ವಿಜಿ, ಕೆಲವರು ಕಡಿಮೆ ಕ್ವಾಲಿಟಿ ವಿಗ್ ನೀಡುತ್ತಾರೆ. ಇದನ್ನೇ ಹಾಕಿ ನಟಿಸಿ ಎನ್ನುತ್ತಾರೆ. ಆಗ ವಿಧಿ ಇಲ್ಲದೇ ಎರಡನ್ನೂ ಸಂಭಾಳಿಸಿ, ನಾವು ನಟಿಸಬೇಕಾಗುತ್ತದೆ. ಆದರೆ ಮೇಕಪ್ ಕಲಾವಿದರಿಗೆ ಉತ್ತಮ ಸಂಬಳ ನೀಡಿದಾಗ, ಅವರು ವಿಗ್ ಹಾಕಿದ ಹಾಗೆ ಅನ್ನಿಸದೇ ಇರುವ ರೀತಿಯಾಗಿ, ಉತ್ತಮ ಕ್ವಾಲಿಟಿಯ ವಿಗ್ ಹಾಕುತ್ತಾರೆ. ಆಗ ನಾವು ಆರಾಮವಾಗಿ ನಟಿಸಬಹುದು ಎಂದು ವಿಜಿ ಹೇಳಿದ್ದಾರೆ.
ಇನ್ನು ಸಿನಿಮಾ ನಿರ್ದೇಶಕ ಜಡೇಶ್ ಅವರ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕ“ಂಡಿದ್ದಾರೆ. ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿ ಹೇಳಿದ್ದಾರೆ. ಸಂದರ್ಶನಕ್ಕಾಗಿ ವೀಡಿಯೋ ನೋಡಿ.




