ಈಗಿನ ಕಾಲದ ಹುಡುಗರು ಲಕ್ಷ ಲಕ್ಷ ರೂಪಾಯಿಯ ಬೈಕ್ ಸ್ಕೂಟಿ ಖರೀದಿ ಮಾಡಿ, ಜುಮ್ ಅಂತಾ ಮೆರಿತಾರೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಕಂಪನಿಗಳು ವಿಧ ವಿಧದ ಸ್ಕೂಟಿ, ಬೈಕ್‌ಗಳನ್ನ ಬಿಡುಗಡೆ ಮಾಡ್ತಿದೆ. ಸಾವಿರ, ಲಕ್ಷ ಕೋಟಿಯ ತನಕ ಬೈಕ್‌ಗಳನ್ನ ನೋಡ್ತೀವಿ. ಆದ್ರೆ 80ರ ದಶಕದಲ್ಲಿ ಎಲ್ಲರೂ ಇಷ್ಟ ಪಟ್ಟ, ಆ ಸ್ಕೂಟರ್ ಮೇಲೆ ಒಮ್ಮೆಯಾದ್ರೂ ಕೂರಬೇಕೆಂದು ಆಸೆ ಮಾಡಿದ ಗಾಡಿ ಅಂದ್ರೆ ಬಜಾಜ್ ಚೇತಕ್.
ಹೌದು, ಅಂದಿನ ಕಾಲದ ಕೆಲವರ ಜೀವನದ ಒಂದು ಭಾಗದಂತಿದ್ದ ಬಜಾಜ್ ಚೇತಕ್, ಕಂಫರ್ಟೇಬಲ್ ಗಾಡಿಯಾಗಿತ್ತು. ಇನ್ನು ಅಂದಿನ ಕಾಲದಲ್ಲಿ ಬಜಾಜ್ ಚೇತಕ್‌ನ್ನ ವರದಕ್ಷಿಣೆಯ ರೂಪದಲ್ಲಿ ಕೇಳ್ತಿದ್ರು.
ಬಜಾಜ್ ಚೇತಕ್ ಸ್ಕೂಟರನ್ನ ಬಜಾಜ್ ಕಂಪನಿಯಿಂದ 1972ರಲ್ಲಿ ಮೊಟ್ಟಮೊದಲ ಬಾರಿಗೆ ರಿಲೀಸ್ ಮಾಡಲಾಯಿತು. ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೊದಲ ದ್ವಿಚಕ್ರ ವಾಹನ ಎಂಬ ಖ್ಯಾತಿಯೂ ಇದಕ್ಕಿದೆ.
ಇನ್ನು ಚೇತಕ್ ಅಂದ್ರೆ, ಯೋದ್ಧಾ ಮಹಾರಾಣಾ ಪ್ರತಾಪ್‌ನ ಕುದುರೆಯ ಹೆಸರು. ಇದನ್ನ ಹತ್ತಿ ಮಹಾರಾಣಾ ಪ್ರತಾಪ್ ಯುದ್ಧಕ್ಕೆ ಹೋಗುತ್ತಿದ್ದನಂತೆ. ಇದರ ಹೆಸರನ್ನೇ ಬಜಾಜ್ ಕಂಪನಿಯವರು ತಮ್ಮ ಸ್ಕೂಟರ್‌ಗೆ ನಾಮಕರಣ ಮಾಡಿದ್ದರು.
ಇಟಾಲಿಯನ್ ಬ್ರಾಂಡ್ ಆಗಿದ್ದ ವೆಸ್ಪರ್ ಪ್ರಿಂಟ್‌ನ ಇನ್ನೊಂದು ಮಾದರಿಯೇ ಬಜಾಜ್ ಚೇತಕ್. 90ರ ದಶಕದ ವರೆಗೂ ಬಜಾಜ್ ಚೇತಕ್ ಹವಾ ಭಾರತದಲ್ಲಿ ಜೋರಾಗೇ ಇತ್ತು. ನಂತರ ಬಂದ ಹೋಂಡಾ ಬೈಕ್ ಚೇತಕ್‌ಗೆ ಕಾಂಪಿಟೇಟರ್ ಆಗಿತ್ತು. ಸ್ಕೂಟಿ, ಬೈಕ್‌ಗಳೆಲ್ಲ ಎಲ್ಲರ ಕಣ್ಮನ ಸೆಳೆಯುವಂತೆ ಹೋಂಡಾ ಕಂಪನಿ ವಾಹನವನ್ನ ಮಾರುಕಟ್ಟೆಗೆ ತರಲು ಆರಂಭಿಸಿತು. ತದನಂತರ ನಷ್ಟ ಹೊಂದಿದ ಬಜಾಜ್ ಚೇತಕ್ ನಿಧಾನವಾಗಿ ಕಣ್ಮರೆಯಾಗಲು ಶುರುವಾಯಿತು. ಕೊನೆಗೆ 2005ರಲ್ಲಿ ಬಜಾಜ್ ಕಂಪನಿ ವಾಹನ ತಯಾರಿಸುವುದು ನಿಲ್ಲಿಸಿತು.
2017ರಲ್ಲಿ ಮತ್ತೆ ತನ್ನ ಹವಾ ಸೃಷ್ಟಿಸಲು ಬಂದ ಬಜಾಜ್ ಎಲೆಕ್ಟ್ರಿಕ್ ಸ್ಕೂಟಿಯನ್ನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಮತ್ತೆ ಹೊಸ ವಾಹನ ಬಿಡುಗಡೆಯೊಂದಿಗೆ ಬಜಾಜ್ ಮರುಕಳಿಸುತ್ತಿದೆ ಎಂಬ ಸುದ್ದಿ ಇದೆ. ಇತ್ತೀಚಿನ ದಿನಗಳಲ್ಲಿ ಜನ ಓಲ್ಡ್ ಈಸ್ ಗೋಲ್ಡ್ ಅನ್ನೋ ಮಂತ್ರ ಜಪಿಸುತ್ತಿರುವಾಗ, ಬಜಾಜ್ ಕಂಪನಿ ಬಜಾಜ್ ಚೇತಕ್‌ನ ಹೊಸ ರೂಪ ಬಿಡುಗಡೆ ಮಾಡಿದ್ದರಲ್ಲಿ ಮತ್ತೆ ಜನ ಬಜಾಜ್‌ನತ್ತ ಮುಖ ಮಾಡುವುದರಲ್ಲಿ ನೋ ಡೌಟ್..
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.