- Advertisement -
ಕರ್ನಾಟಕ ಟಿವಿ : ಕೊರೊನಾ ವೈರಸ್ ಇದು ಮೇಡ್ ಇನ್ ಚೀನಾ ಅನ್ನುವ ಆರೋಪ ಮತ್ತಷ್ಟು ಬಲವಾಗ್ತಿದೆ. ಚೀನಾ ಮೇಲೆ ವಿಶ್ವಕ್ಕೆ ವಿಶ್ವಾಸವಿಲ್ಲದಂತಾಗಿದೆ. ಡೋನಾಲ್ಡ್ ಟ್ರಂಪ್ ಅಮೆರಿಕಾದಿಂದ ಚೀನಾದ ವುಹಾನ್ ಗೆ ಒಂದು ತನಿಖಾ ತಂಡ ಕಳುಹಿಸುವುದಾಗಿ ಘೋಷಣೆ ಮಾಡಿದ್ರು. ಆದ್ರೆ, ಚೀನಾ ಸರ್ಕಾರ ಅಮೆರಿಕಾ ತನಿಖಾ ತಂಡ ವುಹಾನ್ ಭೇಟಿಗೆ ಅವಕಾಶ ನಿರಾಕರಿಸಿದೆ. ಚೀನಾ ವುಹಾನ್ ಮಾಂಸ ಮಾರುಕಟ್ಟೆಯಿಂದ ಕೊರೊನಾ ವೈರಸ್ ಹರಡಿದೆ ಅಂತ ಹೇಳ್ತಿದೆ. ಆದ್ರೆ, ವುಹಾನ್ ನ ವೈರಾಜಿಯಿಂದಲೇ ಈ ಕೊರೊನಾ ಹರಡಿದೆ ಅನ್ನೋದು ಜಗತ್ತಿನ ಅನುಮಾನಕ್ಕೆ ಕಾರಣವಾಗಿದೆ. ಈ ವುಹಾನ್ ವೈರಾಲಜಿಯಲ್ಲಿ ಕೊರೊನಾ ರೀತಿಯ 1500 ವೈರಸ್ ಗಳನ್ನ ಚೀನಾ ಅಭಿವೃದ್ಧಿ ಪಡಿಸಿದೆ,ತನ್ನ ಶತ್ರು ರಾಷ್ಟ್ರಗಳ ಮೇಲೆ ಪ್ರಯೋಗ ಮಾಡಲು ಚೀನಾ ಷಡ್ಯಂತ್ರ ನಡೆಸಿದೆ ಅನ್ನುವ ಗಂಭೀರ ಅನುಮಾನ ಚೀನಾ ಮೇಲಿದೆ.
- Advertisement -